Composer: Shri Purandara dasaru
ಲಾಲಿಸಿದಳು ಮಗನ ಯಶೋದೆ
ಲಾಲಿಸಿದಳು ಮಗನ ||ಪ||
ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು
ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ ||೧||
ಬಾಲಕನೆ ಕೆನೆ ಹಾಲು ಮೊಸರನೀವೇ
ಲೀಲೆಯಿಂದಲಿ ಎನ್ನ ತೋಳ ಮೇಲೆ ಮಲಗೆಂದು ||೨||
ಮುಗುಳುನಗೆಯಿಂದ ಮುದ್ದು ತಾತಾರೆಂದು
ಜಗದೊಡೆಯನೇ ಶ್ರೀಪುರಂದರವಿಠಲನ ||೩||
lAlisidaLu magana yaSOde
lAlisidaLu magana ||pa||
araLele mAgAyi beraLiguMguraviTTu
taraLana maisiri taruNi nODuta higgi ||1||
bAlakane kene hAlu mosaranIvE
lIleyiMdali enna tOLa mEle malageMdu ||2||
muguLunageyiMda muddu tAtAreMdu
jagadoDeyanE SrIpuraMdaraviThalana ||3||
Leave a Reply