Laali Namma Hariye

Composer: Shri Purandara dasaru

Smt.Lakshmi

ಲಾಲಿ ಲಾಲಿ ನಮ್ಮ ಹರಿಯೆ ಲಾಲಿ |
ಸುರ ನರರಿಗೆ ಒಲಿದು ಕರುಣವ ಬೀರುವ
ದೊರೆಯೆ ಲಾಲಿ ||ಪ||

ರಾಮ ಲಾಲಿ ಮೇಘಶ್ಯಾಮ ಲಾಲಿ |
ರಮಾ ಮನೋಹರ ಅಮಿತ ಸದ್ಗುಣ
ಧಾಮ ಲಾಲಿ ||೧||

ಕೃಷ್ಣ ಲಾಲಿ ಸರ್ವೋತ್ಕೃಷ್ಟ ಲಾಲಿ |
ದುಷ್ಟರ ಶಿಕ್ಷಿಸಿ ಶಿಷ್ಟರ ಪೊರೆವ
ಸಂತುಷ್ಟ ಲಾಲಿ ||೨||

ರಂಗ ಲಾಲಿ ಮಂಗಳಾಂಗ ಲಾಲಿ |
ಗಂಗೆಯ ಪಡೆದ ತುಂಗ ಮಹಿಮ
ನರಸಿಂಗ ಲಾಲಿ ||೩||

ನಂದ ಲಾಲಿ ಗೋಪಿ ಕಂದ ಲಾಲಿ |
ಮಂದರ ಗಿರಿಧರ ಮಧುಸೂದನ
ಮುಕುಂದ ಲಾಲಿ ||೪||

ಶೂರ ಲಾಲಿ ರಣಧೀರ ಲಾಲಿ |
ಮಾರನಯ್ಯ ನಮ್ಮ ವರ
ಪುರಂದರವಿಠ್ಠಲ ಲಾಲಿ ||೫||


lAli lAli namma hariye lAli |
sura nararige olidu karuNava bIruva
doreye lAli ||pa||

rAma lAli mEGaSyAma lAli |
ramA manOhara amita sadguNa
dhAma lAli ||1||

kRuShNa lAli sarvOtkRuShTa lAli |
duShTara SikShisi SiShTara poreva
saMtuShTa lAli ||2||

raMga lAli maMgaLAMga lAli |
gaMgeya paDeda tuMga mahima
narasiMga lAli ||3||

naMda lAli gOpi kaMda lAli |
maMdara giridhara madhusUdana
mukuMda lAli ||4||

SUra lAli raNadhIra lAli |
mAranayya namma vara
puraMdaraviThThala lAli ||5||

Leave a Reply

Your email address will not be published. Required fields are marked *

You might also like

error: Content is protected !!