Composer: Shri Purandara dasaru
ಕಟಿಯಲ್ಲಿ ಕರವಿಟ್ಟನು, ಪಂಢರಿ ರಾಯ ||ಪ||
ರಾಜಸೂಯಯಾಗದಲ್ಲಿ ರಾಜೇಶ್ವರ
ರಾಜರು ಮೊದಲಾದ ಸುರರೆಲ್ಲರು
ಭೋಜನವನ್ನೆ ಮಾಡಿದೆಂಜಲು ಮೊದಲಾದ್ದು
ರಾಜೀವಾಕ್ಷನು ಎತ್ತಿದಾಯಾಸದಿಂದಲೋ |೧|
ಗೊಲ್ಲಬಾಲಕರೊಡಗೂಡಿ ತಾ ಬಂದು
ಗೊಲ್ಲತೇರ ಮನೆ ಪೊಕ್ಕು ಬೆಣ್ಣೆಯ ತಿಂದು
ಬಲ್ಲಿದ ತೃಣಾವರ್ತ ಮೊದಲಾದಸುರರನ್ನು
ಎಲ್ಲರನ್ನು ಕೊಂದ ಆಯಾಸದಿಂದಲೊ |೨|
ಧರಣಿಯನು ತಂದ ದನುಜ ಹಿರಣ್ಯಕನ
ಕೋರೆದಾಡೆಯಿಂದ ಸೀಳಿದಿಂದಲೊ
ವಾರಿಜಮುಖಿ ಸರ್ವಕಾಲದಲಿ ನಿಂತು
ಸೇರಿ ಸುರತ ಮಾಡಿದಾಯಾಸದಿಂದಲೊ |೩|
ಸುರಪತನಯಗೆ ಸಾರಥ್ಯವನು ಮಾಡಿ
ಭರದಿಂದ ಚಕ್ರವ ಪಿಡಿದುದ-ದಿಂದಲೊ
ಪರಿಪರಿ ವಿಧದಿಂದ ಕುದುರೆಗಳನೆ ತೊಳೆದು
ಪರಿಪರಿ ಕೆಲಸದ ಆಯಾಸದಿಂದಲೊ |೪|
ಮುದದಿಂದ ವ್ರಜದ ಹದಿನಾರು ಸಾವಿರ
ವನಿತೆಯರಾಳಿದ ಮದದಿಂದಲೊ
ಮದಗಜಗಮನೇರ ಮಧುರಾಂತಕನ
ಒದಗಿ ಮಾವನ ಕೊಂದ ಆಯಾಸದಿಂದಲೊ |೫|
ಪ್ರೇಮದಿಂದಲಿ ಭಕ್ತಜನರು ನಿಮ್ಮ ಚರಣ-
ಕಮಲಯುಗ್ಮವನು ಸ್ತುತಿಸುತಿರಲು
ಮಮತೆಯಿಂದಲಿ ಬಂದು ಅಭಯಗಳನೆ ಕೊಟ್ಟು
ಕಮಲನಾಭ ಶ್ರೀ ಪುರಂದರವಿಠಲ |೬|
kaTiyalli karaviTTanu, paMDhari rAya ||pa||
rAjasUyayAgadalli rAjESvara
rAjaru modalAda surarellaru
BOjanavanne mADideMjalu modalAddu
rAjIvAkShanu ettidAyAsadiMdalO |1|
gollabAlakaroDagUDi tA baMdu
gollatEra mane pokku beNNeya tiMdu
ballida tRuNAvarta modalAdasurarannu
ellarannu koMda AyAsadiMdalo |2|
dharaNiyanu taMda danuja hiraNyakana
kOredADeyiMda sILidiMdalo
vArijamuKi sarvakAladali niMtu
sEri surata mADidAyAsadiMdalo |3|
surapatanayage sArathyavanu mADi
BaradiMda cakrava piDiduda-diMdalo
paripari vidhadiMda kuduregaLane toLedu
paripari kelasada AyAsadiMdalo |4|
mudadiMda vrajada hadinAru sAvira
vaniteyarALida madadiMdalo
madagajagamanEra madhurAMtakana
odagi mAvana koMda AyAsadiMdalo |5|
prEmadiMdali Baktajanaru nimma caraNa-
kamalayugmavanu stutisutiralu
mamateyiMdali baMdu aBayagaLane koTTu
kamalanABa SrI puraMdaraviThala |6|
Leave a Reply