Composer: Shri Purandara dasaru
ನಾರಾಯಣ ನಾರಾಯಣ ನಾರಾಯಣ ನಾರಾಯಣ
ನಾರಾಯಣನ್ಯಾರೇ ಪೇಳೆ ಸಖಿ |
ನಾರಾಯಣನ್ಯಾರೇ ಪೇಳೆ ಸಖಿ ||ಪ||
ಕ್ಷೀರಸಾಗರದಲ್ಲಿ ಶಯನವ ಮಾಡಿದ
ಆದಿನಾರಾಯಣ ನೋಡೇ ಸಖಿ ||ಅಪ||
ಕಾಲಿಲ್ಲದಲೆ ಓಡಿ ಎವೆಯಿಕ್ಕದಲೆ ನೋಡಿ
ಮಿಂಚಿನಂತ್ಹೊಳೆಯುವನ್ಯಾರೆ ಸಖಿ |
ವೇದವ ತಂದು ಸುರರಿಗೆ ಕೊಟ್ಟಂಥ
ಮತ್ಸ್ಯಾವತಾರನ್ನ ನೋಡೆ ಸಖಿ ||೧||
ತಲೆಯ ತಗ್ಗಿಸುವನು ಕಡಲೊಳು ಆಡುವ
ಕಡೆದರೆ ಕಡಗೋಲನ್ಯಾರೆ ಸಖಿ |
ಸುರರು ದೈತ್ಯರು ಕೂಡಿ ಶರಧಿಯ ಮಥಿಸಲು
ಕೂರ್ಮಾವತಾರನೆ ಇಂದುಮುಖಿ ||೨||
ಮಾರಿ ತಗ್ಗಿಸುವನು ಮಣ್ಣು ಚಿಮ್ಮಿಯಾಡುವ
ಕೋರೆದಾಡೆಯವನ್ಯಾರೇ ಸಖಿ |
ದುರುಳನ್ನ ಕೊಂದು ಧರಣಿಯ ತಂದಂಥ
ವರಾಹವತಾರನೇ ವಾರಿಜಾಕ್ಷಿ ||೩||
ಕಂಬದಿಂದಲಿ ಬಂದು ಕರುಳನು ಬಗೆದು
ಕೊರಳೊಳು ಹಾಕಿದವನ್ಯಾರೆ ಸಖಿ |
ನರಮೃಗ ರೂಪದಿ ಉದರವ ಸೀಳಿದ
ನಾರಸಿಂಹನ ರೂಪ ನೋಡೆ ಸಖಿ ||೪||
ಪುಟ್ಟ ಪಾದದಿಂದ ಸೃಷ್ಟಿಯನಳೆವ ದಿಟ್ಟ
ಬ್ರಹ್ಮಚಾರಿ ಯಾರೇ ಸಖಿ |
ಕೊಟ್ಟಿದ್ದು ಸಾಲದೆ ಮೆಟ್ಟಿದ ಶಿರವನ್ನು ಪುಟ್ಟ
ವಾಮನ ರೂಪ ನೋಡೇ ಸಖಿ ||೫||
ಕೋಪದಿಂದಲಿ ಬಂದು ಕೊಡಲಿಯನ್ನೆ ಪಿಡಿದು
ಕುಲವನ್ನೆ ಸವರಿದನ್ಯಾರೇ ಸಖಿ |
ರಕ್ತದೊಳಗೆ ಸ್ನಾನ ತರ್ಪಣ ಮಾಡಿದ ವಿಪ್ರ
ಭಾರ್ಗವರಾಮ ನೋಡೆ ಸಖಿ ||೬||
ಶೀಘ್ರದಿಂದಲಿ ಬಂದು ಶಬರಿ ಎಂಜಲನುಂಡು
ಸೇತುವೆ ಕಟ್ಟಿದವನ್ಯಾರೇ ಸಖಿ |
ಕೌಸಲ್ಯನುದರದಿ ಶಿಶುವಾಗಿ ಜನಿಸಿದ
ದಶರಥ ರಾಮನ್ನ ನೋಡೇ ಸಖಿ ||೭||
ಬ್ರಹ್ಮಾಂಡದೊಳಗೆಲ್ಲಾ ಬಂಡಿಯ ಹೊಡೆದೋನು
ಪಾರ್ಥ ಸಾರಥಿ ಇವನ್ಯಾರೇ ಸಖಿ |
ಮಥುರೆಯಲಿ ಹುಟ್ಟಿ ಗೋಕುಲದಿ ಬೆಳೆದ
ಗೋಪಾಲಕೃಷ್ಣನ್ನ ನೋಡೇ ಸಖಿ ||೮||
ಮರದೊಳಗೆ ನಿಂತು ಮಾನವ ಕಾಯ್ದಂಥ
ಮಾಧವ ಇವನ್ಯಾರೆ ಹೇಳೆ ಸಖಿ |
ತ್ರಿಪುರರ ಸತಿಯರ ವ್ರತಭಂಗ ಮಾಡಿದ
ಬೌದ್ಧವತಾರನೇ ಚಂದ್ರಮುಖಿ ||೯||
ಹಯವನೇರಿ ಬಂದು ಧರಣಿಯಲ್ಲಾ ತಿರುಗಿ
ಗಿರಿಯಲ್ಲಿ ನಿಂತವನ್ಯಾರೇ ಸಖಿ |
ವೇದಾಂತ ವೇದ್ಯ ಶ್ರೀಪುರಂದರ ವಿಠಲನ್ನ
ಲಕ್ಷ್ಮೀರಮಣನ್ನ ನೋಡೇ ಸಖಿ ||೧೦||
nArAyaNa nArAyaNa nArAyaNa nArAyaNa
nArAyaNanyArE pELe saKi |
nArAyaNanyArE pELe saKi ||pa||
kShIrasAgaradalli Sayanava mADida
AdinArAyaNa nODE saKi ||apa||
kAlilladale ODi eveyikkadale nODi
miMcinaMt~hoLeyuvanyAre saKi |
vEdava taMdu surarige koTTaMtha
matsyAvatAranna nODe saKi ||1||
taleya taggisuvanu kaDaloLu ADuva
kaDedare kaDagOlanyAre saKi |
suraru daityaru kUDi Saradhiya mathisalu
kUrmAvatArane iMdumuKi ||2||
mAri taggisuvanu maNNu cimmiyADuva
kOredADeyavanyArE saKi |
duruLanna koMdu dharaNiya taMdaMtha
varAhavatAranE vArijAkShi ||3||
kaMbadiMdali baMdu karuLanu bagedu
koraLoLu hAkidavanyAre saKi |
naramRuga rUpadi udarava sILida
nArasiMhana rUpa nODe saKi ||4||
puTTa pAdadiMda sRuShTiyanaLeva diTTa
brahmacAri yArE saKi |
koTTiddu sAlade meTTida Siravannu puTTa
vAmana rUpa nODE saKi ||5||
kOpadiMdali baMdu koDaliyanne piDidu
kulavanne savaridanyArE saKi |
raktadoLage snAna tarpaNa mADida vipra
BArgavarAma nODe saKi ||6||
SIGradiMdali baMdu Sabari eMjalanuMDu
sEtuve kaTTidavanyArE saKi |
kausalyanudaradi SiSuvAgi janisida
daSaratha rAmanna nODE saKi ||7||
brahmAMDadoLagellA baMDiya hoDedOnu
pArtha sArathi ivanyArE saKi |
mathureyali huTTi gOkuladi beLeda
gOpAlakRuShNanna nODE saKi ||8||
maradoLage niMtu mAnava kAydaMtha
mAdhava ivanyAre hELe saKi |
tripurara satiyara vrataBaMga mADida
bauddhavatAranE caMdramuKi ||9||
hayavanEri baMdu dharaNiyallA tirugi
giriyalli niMtavanyArE saKi |
vEdAMta vEdya SrIpuraMdara viThalanna
lakShmIramaNanna nODE saKi ||10||
Leave a Reply