Hariya Neneyiro

Composer: Shri Purandara dasaru

ಹರಿಯ ನೆನೆಯಿರೋ ನಮ್ಮ ಹರಿಯ ನೆನೆಯಿರೋ
ಬರಿಯ ಮಾತನಾಡಿ ಬಾಯ ಬರಡು ಮಾಡಿ ಕೆಡಲು ಬೇಡಿ [ಅ.ಪ.]

ನಿತ್ಯವಲ್ಲ ಈ ಶರೀರ ಅನಿತ್ಯವೆಂದು ನೋಡಿರಯ್ಯ
ಹೊತ್ತು ಕಳೆಯ ಬೇಡಿ ಕಾಲ ಮೃತ್ಯು ಬಾಹೋದೀಗಲೆ (೧)

ಕಾಮ ಕ್ರೋಧಗಳನು ತೊರೆದು ಕಾಮನಯ್ಯನ ಕಥೆಯ
ಬರೆದು ಪ್ರೇಮದಿಂದ ಭಜಿಸಿರಯ್ಯ ಪಾಮರರಂತೆ ತಿರುಗದೆ (೨)

ಹಾಳು ಹರಟೆಯಾಡಿ ಮನವ ಬೀಳು ಮಾಡಿಕೊಳ್ಳ ಬೇಡಿ
ಏಳು ದಿನದ ಕಥೆಯ ಕೇಳಿ ಏಳಿರೋ ವೈಕುಂಠಕೆ (೩)

ಮೆಟ್ಟೆ ಪುಣ್ಯ ಕ್ಶೇತ್ರವನ್ನು ಸುಟ್ಟು ಹೋಗ್ವುದಯ್ಯ ಪಾಪ
ಮುಟ್ಟಿ ಭಜಿಸಿರಯ್ಯ ಪುರಂದರ ವಿಠ್ಠಲನ್ನ ಚರಣವ (೪)


hariya neneyirO namma hariya neneyirO
bariya mAtanADi bAya baraDu mADi keDalu bEDi [a.pa.]

nityavalla I sharIra anityaveMdu nODirayya
hottu kaLeya bEDi kAla mRutyu bAhOdIgale (1)

kAma krOdhagaLanu toredu kAmanayyana katheya
baredu prEmadiMda bhajisirayya pAmararaMte tirugade (2)

hALu haraTeyADi manava bILu mADikoLLa bEDi
ELu dinada katheya kELi ELirO vaikuMThake (3)

meTTe puNya kSEtravannu suTTu hOgvudayya pApa
muTTi bhajisirayya puraMdara viThThalanna caraNava (4)

Leave a Reply

Your email address will not be published. Required fields are marked *

You might also like

error: Content is protected !!