Composer: Shri Purandara dasaru
ಎನಗೂ ಆಣೆ ರಂಗ ನಿನಗೂ ಆಣೆ
ಎನಗೂ ನಿನಗೂ ಇಬ್ಬರಿಗೂ ನಿನ್ನ ಭಕ್ತರಾಣೆ [ಪ]
ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ ರಂಗ
ಎನ್ನ ನೀ ಕೈ ಬಿಟ್ಟು ಪೋದರೆ ನಿನಗೆ ಆಣೆ [೧]
ತನು ಮನಧನದಲಿ ವಂಚಕನಾದರೆ ಎನಗೆ ಆಣೆ ರಂಗ
ಮನಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ [೨]
ಕಾಕು ಮನುಜರ ಸಂಗವ ಮಾಡಿದರೆನಗೆ ಆಣೆ ರಂಗ
ಲೌಕಿಕವ ನೀ ಬಿಡಿಸದಿದ್ದರೆ ನಿನಗೆ ಆಣೆ [೩]
ಶಿಷ್ಟರ ಸಂಗವ ಮಾಡದಿದ್ದರೆ ಎನಗೆ ಆಣೆ ರಂಗ
ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ [೪]
ಹರಿ ನಿನ್ನಾಶ್ರಯ ಮಾಡದಿದ್ದರೆ ಎನಗೆ ಆಣೆ ರಂಗ
ಪುರಂದರ ವಿಠಲ ನೀನೊಲಿಯದಿದ್ದರೆ ನಿನಗೆ ಆಣೆ [೫]
enagU ANe raMga ninagU ANe
enagU ninagU ibbarigU ninna bhaktarANe [pa]
ninna biTTu anyara bhajisidarenage ANe raMga
enna nI kai biTTu pOdare ninage ANe [1]
tanu manadhanadali vaMcakanAdare enage ANe raMga
manasu ninnali nilisadiddare ninage ANe [2]
kAku manujara saMgava mADidarenage ANe raMga
laukikava nI biDisadiddare ninage ANe [3]
shiShTara saMgava mADadiddare enage ANe raMga
duShTara saMgava biDisadiddare ninage ANe [4]
hari ninnAshraya mADadiddare enage ANe raMga
puraMdara viThala nInoliyadiddare ninage ANe [5]
Leave a Reply