Dasarendare purandara

Composer: Shri Vyasarajaru

By Smt.Shubhalakshmi Rao

ದಾಸರೆಂದರೆ ಪುರಂದರ ದಾಸರಯ್ಯ ||ಪ||
ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವಂಥ ||ಅ.ಪ||

ಗ್ರಾಸಕಿಲ್ಲದೆ ಪೋಗಿ ಪರರ ಮನೆಗಳ ಪೊಕ್ಕು |
ದಾಸನೆಂದು ತುಲಸಿ ಮಾಲೆ ಧರಿಸಿ |
ಬೇಸರಿಲ್ಲದೆ ಅವರ ಕಾಡಿ ಬೇಡಿ ಬಳಲಿಸುತ |
ಕಾಸು ಗಳಿಸುವ ಪುರುಷ ಹರಿದಾಸನೇ (೧)

ಡಂಭಕದಿ ಹರಿಸ್ಮರಣೆ ಮಾಡಿ ಜನರಾ ಮುಂದೆ
ಸಂಭ್ರಮದಿ ತಾನುಂಬ ಊಟ ಬಯಸಿ |
ಅಂಬುಜೋದ್ಭವ ಪಿತನ ಆಗಮಗಳರಿಯದೇ
ತಂಬೂರಿ ಮೀಟಲವ ಹರಿದಾಸನೇ (೨)

ಯಾಯಿವಾರವ ಮಾಡಿ ವಿಪ್ರರಿಗೆ ಮೃಷ್ಟಾನ್ನ |
ಪ್ರೀಯದಲಿ ತಾನೊಂದು ಕೊಡದ ಲೋಭಿ |
ಮಾಯಿ ಸಂಸಾರದಲಿ ಮಮತೆ ಹೆಚ್ಚಾಗಿಟ್ಟು |
ಗಾಯನವ ಮಾಡಲವ ಹರಿದಾಸನೇ (೩)

ಪಾಠಕಾರರಂತೆ ಪದಗಳನು ಪೇಳುತ್ತ|
ಕೂಟ ಜನರಾ ಮನವ ಸಂತೋಷ ಬಡಿಸಿ |
ಗೂಟ ನಾಮಗಳಚ್ಚಿ ಕೊಂಢರಿಯ ತಾನೆನಿಸಿ,
ತೂಟಕವ ಮಾಡಲವ ಹರಿದಾಸನೇ (೪)

ನೀತಿಯೆಲ್ಲವನರಿದು ನಿಗಮವೇದ್ಯನ ನಿತ್ಯ
ವಾತಸುತನಲ್ಲಿಹನ ವರ್ಣಿಸುತಲಿ |
ಗೀತ ನರ್ತನದಿಂದ ಕೃಷ್ಣನ್ನ ಪೂಜಿಸುವ
ಪೂತಾತ್ಮ ಪುರಂದರ ದಾಸರಿವರೈಯ್ಯ (೫)


dAsareMdare puraMdara dAsarayya ||pa||
vAsudEva kRuShNanna sUsi pUjisuvaMtha ||a.pa||

grAsakillade pOgi parara manegaLa pokku |
dAsaneMdu tulasi mAle dharisi |
bEsarillade avara kADi bEDi baLalisuta |
kAsu gaLisuva puruSha haridAsanE (1)

DaMBakadi harismaraNe mADi janarA muMde
saMBramadi tAnuMba UTa bayasi |
aMbujOdBava pitana AgamagaLariyadE
taMbUri mITalava haridAsanE (2)

yAyivArava mADi viprarige mRuShTAnna |
prIyadali tAnoMdu koDada lOBi |
mAyi saMsAradali mamate heccAgiTTu |
gAyanava mADalava haridaasanE (3)

pAThakAraraMte padagaLanu pELutta|
kooTa janarA manava saMtOSha baDisi |
gUTa nAmagaLacchi koMDhariya tAnenisi,
tUTakava mADalava haridAsanE (4)

nItiyellavanaridu nigamavEdyana nitya
vAtasutanallihana varNisutali |
gIta nartanadiMda kRuShNanna pUjisuva
pUtAtma puraMdara dAsarivaraiyya (5)

Leave a Reply

Your email address will not be published. Required fields are marked *

You might also like

error: Content is protected !!