Baa Baa Ranga

Composer: Shri Purandara dasaru

Smt.Nandini Sripad

ಬಾ ಬಾ ರಂಗ ಭುಜಂಗಶಯನ
ಕೋಮಲಾಂಗ ಕೃಪಾಪಾಂಗ ॥ ಪ ॥
ಬಾ ಬಾ ಎನ್ನಂತರಂಗ
ಮಲ್ಲರ ಗಜಸಿಂಗ ದುರಿತಭವ ಭಂಗ ॥ಅ ಪ ॥

ಉಭಯ ಕಾವೇರಿಯ ಮಧ್ಯನಿವಾಸ
ಅಭಯದಾಯಕ ಮಂದಹಾಸ
ಸಭೆಯೊಳು ಸತಿಯಳ ಕಾಯ್ದ ಉಲ್ಲಾಸ
ಇಭವರದನೇ ಶ್ರೀನಿವಾಸ ॥ 1 ॥

ಏಳು ಪ್ರಾಕಾರದ ಮಾಳಿಗೆ ಮನೆಯೊಳಗೆ
ಗಾಳಿಯ ದೇವರ ದೇವ
ಸೋಳಸಾಸಿರ ಗೋಪಿಯರಾಳಿದ ಈ –
ರೇಳು ಲೋಕದ ಜನಕಾವ ॥ 2 ॥

ಚಂದ್ರಪುಷ್ಕರಿಣಿಯ ತೀರವಿಹಾರ
ಇಂದ್ರಾದಿಸುರ ಪರಿವಾರ
ಚಂದ್ರಶೇಕರನುತನಾದ ಸುಖ
ಸಾಂದ್ರ ಸುಗುಣಗಂಭೀರ ॥ 3 ॥

ಈಷಣತ್ರಯಗಳ ದೂಷಿತ ನಿರುತ ಅ –
ಶೇಷ ವಿಭವ ಜನಪಾಲ
ಭೂಷಿತ ನಾನಾ ವಸನಾಭರಣ ವಿ –
ಭೀಷಣಗೊಲಿದ ಸುತ್ರಾಣ ॥ 4 ॥

ಶಂಬರಾರಿಯ ಪಿತ ಡಂಭರಹಿತ ಮನ
ಅಂಬುಜದಳನಿಭನೇತ್ರ
ಕಂಬುಚಕ್ರಧರ ಪುರಂದರವಿಠಲ
ತುಂಬುರುನಾರದ ಕೃತಸ್ತೋತ್ರ ॥ 5 ॥


bA bA raMga BujaMgaSayana
kOmalAMga kRupApAMga || pa ||
bA bA ennaMtaraMga
mallara gajasiMga duritaBava BaMga ||a pa ||

uBaya kAvEriya madhyanivAsa
aBayadAyaka maMdahAsa
saBeyoLu satiyaLa kAyda ullAsa
iBavaradanE SrInivAsa || 1 ||

ELu prAkArada mALige maneyoLage
gALiya dEvara dEva
sOLasAsira gOpiyarALida I –
rELu lOkada janakAva || 2 ||

caMdrapuShkariNiya tIravihAra
iMdrAdisura parivAra
caMdraSEkaranutanAda suKa
sAMdra suguNagaMBIra || 3 ||

IShaNatrayagaLa dUShita niruta a –
SESha viBava janapAla
BUShita nAnA vasanABaraNa vi –
BIShaNagolida sutrANa || 4 ||

SaMbarAriya pita DaMBarahita mana
aMbujadaLaniBanEtra
kaMbucakradhara puraMdaraviThala
tuMburunArada kRutastOtra || 5 ||

Leave a Reply

Your email address will not be published. Required fields are marked *

You might also like

error: Content is protected !!