Ava Kulavadarenu

Composer: Shri Purandara dasaru

ಆವ ಕುಲವಾದರೇನು ಆವನಾದರೇನು
ಆತ್ಮ ಭಾವವರಿತ ಮೇಲೆ || ಪ||

ಹಸಿ ಕಬ್ಬು ಡೊಂಕಿರಲು ಅದರ
ರಸ ತಾನು ಡೊಂಕೇನೊ
ವಿಷಯಾಸೆಗಳನೆ ಬಿಟ್ಟು
ಹಸನಾದ ಗುರುಭಕ್ತಿ ಮಾಡೋ || ೧ ||

ನಾನಾ ವರ್ಣದ ಆಕಳು ಅದು
ನಾನಾ ವರ್ಣದ ಕ್ಷೀರವೇನೋ
ಹೀನ ಕರ್ಮಗಳನು ಬಿಟ್ಟು
ಹಿಗ್ಗಿ ಜ್ಞಾನ ಒಲಿಸಿರೋ || ೨ ||

ಕುಲದ ಮೇಲೆ ಹೋಗ ಬೇಡ ಮನುಜಾ
ಕುಲವಿಲ್ಲ ಜ್ಞಾನಿಗಳಿಗೆ
ವರದ ಪುರಂದರವಿಠಲನ ಪಾದವ
ಸೇರಿ ಮುಕ್ತನಾಗೋ || ೩ ||


Ava kulavAdarEnu AvanAdarEnu
Atma BAvavarita mEle || pa||

hasi kabbu DoMkiralu adara
rasa tAnu DoMkEno
viShayAsegaLane biTTu
hasanAda guruBakti mADO || 1 ||

nAnA varNada AkaLu adu
nAnA varNada kShIravEnO
hIna karmagaLanu biTTu
higgi j~jAna olisirO || 2 ||

kulada mEle hOga bEDa manujA
kulavilla j~jAnigaLige
varada puraMdaraviThalana pAdava
sEri muktanAgO || 3 ||

Leave a Reply

Your email address will not be published. Required fields are marked *

You might also like

error: Content is protected !!