Composer: Shri Purandara dasaru
ಆರು ಬದುಕಿದರಯ್ಯ ಹರಿ ನಿನ್ನ ನಂಬಿ ||ಪ||
ತೋರು ಈ ಜಗದೊಳಗೆ ಒಬ್ಬರನು ನಾ ಕಾಣೆ ||ಅ||
ಕರ ಪತ್ರದಿಂದ ತಾಮ್ರ ಧ್ವಜನ ತಂದೆಯ
ಕೊರಳ ಕೊಯಿಸಿದೆ ನೀನು ಕುಂದಿಲ್ಲದೆ
ಮರುಳನಂದದಿ ಪೋಗಿ ಭೃಗು ಮುನಿಯ ಕಣ್ಣೊಡೆದೆ
ಅರಿತು ತ್ರಿಪುರಾಸುರನ ಹೆಂಡಿರನು ಬೆರೆದೆ [೧]
ಕಲಹ ಬಾರದ ಮುನ್ನ ಕರ್ಣನನು ಕೊಲಿಸಿದೆ
ಸುಲಭದಲಿ ಕೌರವರ ಮನೆಯ ಮುರಿದೆ
ನೆಲವ ಬೇಡುತ ಪೋಗಿ ಬಲಿಯ ಶಿರವನು ತುಳಿದೆ
ಮೊಲೆಯನುಣಿಸಲು ಬಂದ ಪೂತನಿಯ ಕೊಂದೆ [೨]
ತಿರಿದುಂಬ ದಾಸರ ಕೈಲಿ ಕಪ್ಪವ ಕೊಂಬೆ
ತಿರುಮಲೇಶ ನಿನ್ನ ಚರಿಯವನರಿಯೆ
ದೊರೆ ಪುರಂದರ ವಿಠಲ ನಿನ್ನ ಹೆಸರು ಹೇಳಿದರೆ
ತಿರುಪೆಯು ಪುಟ್ಟಲೊಲ್ಲದೊ ಹೇಳೋ ಹರಿಯೆ [೩]
Aru badukidarayya hari ninna naMbi ||pa||
tOru I jagadoLage obbaranu nA kANe ||a||
kara patradiMda tAmra dhvajana taMdeya
koraLa koyiside nInu kuMdillade
maruLanaMdadi pOgi BRugu muniya kaNNoDede
aritu tripurAsurana heMDiranu berede [1]
kalaha bArada munna karNananu koliside
sulaBadali kauravara maneya muride
nelava bEDuta pOgi baliya shiravanu tuLide
moleyanuNisalu baMda pUtaniya koMde [2]
tiriduMba dAsara kaili kappava koMbe
tirumalEsha ninna cariyavanariye
dore puraMdara viThala ninna hesaru hELidare
tirupeyu puTTalollado hELO hariye [3]
Leave a Reply