Itaneega Namma Devano

Composer : Shri Gopala dasaru

Smt.Nandini Sripad

ರಾಗ: ಹಂಸಾನಂದಿ , ರೂಪಕತಾಳ

ಈತನೀಗ ನಮ್ಮ ದೇವನು ॥ ಪ ॥
ಪ್ರೀತಿಯಿಂದಲಿ ಸ್ಮರಿಸುವವರ ।
ಪಾತಕಗಳ ಪರಿಹರಿಪ ॥ ಅ ಪ ॥

ಅಕ್ರೂರನ ಪ್ರೀತನೀತ ।
ಚಕ್ರ ಶಂಖ ಧರಿಸಿದಾತ ।
ನಕ್ರ ಬಾಧೆಯ ತರಿದು ತನ್ನ ।
ಭಕ್ತನನ್ನ ಕಾಯಿದಾತ ॥ 1 ॥

ಅಜಮಿಳನ ಸಲಹಿದಾತ ।
ವ್ರಜದ ಗೋವು ಕಾಯಿದಾತ ।
ಭಜಿಸುವವರ ಬಿಡನು ಈತ ।
ತ್ರಿಜಗದೊಳಗೆ ಮೆರೆವದಾತ ॥ 2 ॥

ಸಕಲಗುಣಪೂರ್ಣನೀತ ।
ಸಕಲ ದೋಷದೂರನೀತ ।
ಸಕಲಾನಂದಭರಿತನೀತ ।
ಭಕುತಿ ಮಂತ್ರಕ್ಕೊಲಿವದಾತ ॥ 3 ॥

ಅನಾಥಬಾಂಧನೀತ ।
ಅನಾದಿಕಾಲದವನಾತ ।
ಆ ನಾರಿ ಮೊರೆಯ ಕೇಳಿ ।
ಅನಿಮಿಷರೊಳು ಒದಗಿದಾತ ॥ 4 ॥

ಕಮಲಮುಖಿಯ ರಮಣನೀತ ।
ಕಮಲಾಸನ ಜನಕನೀತ ।
ಕಮಲಾಕ್ಷ ಗೋಪಾಲವಿಠಲ ಹೃ।
ತ್ಕಮಲದೊಳು ನಿಲುವದಾತ ॥ 5 ॥


ItanIga namma dEvanu || pa ||
prItiyiMdali smarisuvavara |
pAtakagaLa pariharipa || a pa ||

akrUrana prItanIta |
cakra SaMKa dharisidAta |
nakra bAdheya taridu tanna |
Baktananna kAyidAta || 1 ||

ajamiLana salahidAta |
vrajada gOvu kAyidAta |
Bajisuvavara biDanu Ita |
trijagadoLage merevadAta || 2 ||

sakalaguNapUrNanIta |
sakala dOShadUranIta |
sakalAnaMdaBaritanIta |
Bakuti maMtrakkolivadAta || 3 ||

anAthabAMdhanIta |
anAdikAladavanAta |
A nAri moreya kELi |
animiSharoLu odagidAta || 4 ||

kamalamuKiya ramaNanIta |
kamalAsana janakanIta |
kamalAkSha gOpAlaviThala hRu|
tkamaladoLu niluvadAta || 5 ||

Leave a Reply

Your email address will not be published. Required fields are marked *

You might also like

error: Content is protected !!