Composer : Shri Gopala dasaru
ಭ್ರಾಂತನಾದೆನಲ್ಲಾ ಪರಗತಿ ಚಿಂತೆಯೆಂಬುದಿಲ್ಲ ||ಪ.||
ಶ್ರೀಕಾತನ ಪದ ಸಂತತ ಪೂಜಿಸಿ ಸಂತೋಷಿಸಲಿಲ್ಲಾ ,
ಬರಿದೆ ಭ್ರಾಂತನಾದೆನಲ್ಲಾ ||ಅ.ಪ.||
ಮೋಸ ಹೋದೆನಲ್ಲಾ ವಿಷಯದ ಆಸೆ ತೀರಲಿಲ್ಲಾ |
ಹೇಸಿಕೆ ಭವ ಸುಖ ಲೇಸಂಗಳಿಪ ವಿಲಾಸವಾಯಿತಲ್ಲಾ, ಬರಿದೆ ||೧||
ಮಂದನಾದೆನಲ್ಲಾ ದಿನಗಳು ಸಂದುಹೋದವಲ್ಲಾ |
ಮಂದರಧರ ಗೋವಿನ್ಂದನಂಘ್ರಿಯ ವಂದಿ ಸ್ತುತಿಸಲಿಲ್ಲಾ, ಬರಿದೆ ||೨||
ದೇಹ ನಿತ್ಯವಲ್ಲಾ ಮಮತೆ ದೇಹ ವ್ಯರ್ಥವಲ್ಲಾ |
ಮೋಹವಸ್ತು ಗೊಪಾಲವಿಠಲ ಬಲ ಮೋಹದ ರಸವಲ್ಲಾ , ಬರಿದೆ ||೩||
bhrAMtanAdenallA paragati chiMteyeMbudilla ||pa.||
shrIkAtana pada saMtata pUjisi saMtOShisalillA ,
baride bhrAMtanAdenallA ||a.pa.||
mOsa hOdenallA viShayada Ase tIralillA |
hEsike bhava sukha lEsaMgaLipa vilAsavAyitallA, baride ||1||
maMdanAdenallA dinagaLu saMduhOdavallA |
maMdaradhara gOvinMdanaMghriya vaMdi stutisalillA, baride ||2||
dEha nityavallA mamate dEha vyarthavallA |
mOhavastu gopAlaviThala bala mOhada rasavallA , baride ||3||
Leave a Reply