Smarisu Gurugala manave

Composer : Shri Varadagopala vittala

ಸ್ಮರಿಸು ಗುರುಗಳ ಮನವೆ | ಸ್ಮರಿಸು ಗುರುಗಳ | ಪ |
ಸ್ಮರಿಸು ಗುರುಗಳ ನಿನಗೆ ಪರಮ ಮಂಗಳ
ದುರಿತ ಪರ್ವತಕೆ ಪವಿ ಎಂದು ತಿಳಿದು | ಅ.ಪ. |

ಉರಗ ವೃಶ್ಚಿಕ ವ್ಯಾಘ್ರ ಅರಸು ಜೋರಾಗ್ನಿ
ಕರಿ ಗರಳ ಜ್ವರ ಮೊದಲಾದ ಭಯಗಳಿಂದ |
ಪೊರೆದು ಮಂಗಳವೀವ ನರಹರಿಯ ದಾಸರ |
ಚರಣ ಕಂಡೆನೊ ದುರಿತ ಪರಿಹಾರವಾಯಿತು | ೧ |

ಗುರು ಸ್ಮರಣೆಯಿಂದ ಸಕಲ ಆಪತ್ತು ಪರಿಹಾರ |
ಗುರು ಸ್ಮರಣೆಯಿಂದ ಸಕಲ ಸಂಪದವು ನಿನಗೆ |
ಗುರು ಸ್ಮರಣೆಯಿಂದ ವಿಶೇಷ ಧನ ದೊರಕುವುದು |
ಗುರು ಸ್ಮರಣೆಯಿಂದ ಹರಿ ಒಲಿದು ಪೊರೆವ | ೨ |

ಗುರುಗಳಿಂದಧಿಕ ಇನ್ನಾರು ಆಪ್ತರು ನಿನಗೆ |
ಗುರುಗಳೇ ಪರಮ ಹಿತಕರು ನೋಡು |
ಗುರು ಸ್ವಾಮಿ ವರದ ಗೋಪಾಲವಿಠ್ಠಲ ಸರ್ವ |
ದುರಿತಗಳ ಕಳೆದು ಸುಖಗರೆವ ನೋಡು | ೩ |


smarisu gurugaLa manave | smarisu gurugaLa | pa |
smarisu gurugaLa ninage parama maMgaLa
durita parvatake pavi eMdu tiLidu | a.pa. |

uraga vRushcika vyAghra arasu jOrAgni
kari garaLa jvara modalAda bhayagaLiMda |
poredu maMgaLavIva narahariya dAsara |
caraNa kaMDeno durita parihAravAyitu | 1 |

guru smaraNeyiMda sakala Apattu parihAra |
guru smaraNeyiMda sakala saMpadavu ninage |
guru smaraNeyiMda viSESha dhana dorakuvudu |
guru smaraNeyiMda hari olidu poreva | 2 |

gurugaLiMdadhika innAru Aptaru ninage |
gurugaLE parama hitakaru nODu |
guru svAmi varada gOpAlaviThThala sarva |
duritagaLa kaLedu sukhagareva nODu | 3 |

Leave a Reply

Your email address will not be published. Required fields are marked *

You might also like

error: Content is protected !!