Composer : Shri Abhinava Pranesha dasaru
ಶ್ರೀ ಅಭಿನವ ಪ್ರಾಣೇಶವಿಠಲದಾಸರ ರಚನೆ
ಶ್ರೀ ಗೋಪಾಲದಾಸರ ಸ್ತೋತ್ರಸುಳಾದಿ
ರಾಗ: ಅಭೇರಿ
ಧ್ರುವತಾಳ
ಕುಧರಜಾಪತಿ ಶಿವ ಮದನಾರಿ ತನುಭವ
ಪದುಮೇಶ ವಕ್ತ್ರನು ಪದುಮೇಶನಾಜ್ಞದಿ
ಮುದಮುನಿದರ್ಶನ ಹರಿದಾಸ ಸಂಧಾನ
ಹದಳಿಸಿ ಪಸರಿಸಿ ವರ್ಧಿಸಲೋಸುಗವಾಗಿ
ದಧಿಶಿಲೆಯೊಳಗೆ ಅವತರಿಸಿದನು
ವಿಧಿಕುಲದಲಿ ಜನಿಸಿ ವಿಧಿಮಂತ್ರ ಸಿದ್ಧಿಸಿ
ಮಧುಸಖ ಜನಕನ ಒಲುಮೆ ಗಳಿಸಿ
ವಿಧಿಪಿತ ಅಭಿನವ ಪ್ರಾಣೇಶವಿಠಲನ ಪದ
ಪದುಮ ಮಧುಕರಧೀಶ ಭಾಗಣ್ಣದಾಸ || ೧ ||
ಮಟ್ಟತಾಳ
ಗಜಪಾಲಕ ರಂಗ ಸರ್ವೋತ್ತಮನೆಂದು
ತ್ರಿಜಗದಿ ಘೋಷಿಸಿದ ಭೃಗುಮುನಿ ಅಂಶಜರ
ವಿಜಯರ ಚರಣಾಬ್ಜ ಯಜಿಸಿ ಭಜಿಸಿ ಒಲಿಸಿ
ವಿಜಯಾಂಕಿತ ಗ್ರಹಿಸಿ ಗೋಪವಿಠಲರೆನಿಸಿ
ಸುಜನಾಂಬುಧಿ ಚಂದ್ರ ಭುಜಗ ಕುಮತವೀಂದ್ರ
ಅಜಪಿತ ಅಭಿನವ ಪ್ರಾಣೇಶವಿಠಲನ
ನಿಜದಾಸ ಭವದೀಶ ಗೋಪಾಲದಾಸ || ೨ ||
ತ್ರಿಪುಟತಾಳ
ಮರುತಮತ ದರ್ಶನ ವರಭಾಗವತ ಧರ್ಮ
ಪರಮೇಯ ಪ್ರಮಾಣ ವಚನ ಮರ್ಮ
ಸರಸ ಕನ್ನಡ ಪದ್ಯ ಪದ ಸುಳಾದಿಗಳಿಂದ
ಅರಹುತ ಜನಕೆ ಸತ್ಪಥ ತೋರುತ
ಹರಿ ಧನ್ವಂತ್ರಿಯ ತುತಿಸಿ ಯವನಾಲಾ ಪೋಪದಿ
ತ್ವರವಾಟಾಚಾರ್ಯರ ರೋಗವ ಕಳೆದೆ
ಹಿರಿಯರಾಜ್ಞೆಯಂತೆ ಸರಿಸೃಪ ಗಿರಿಯಲ್ಲಿ
ವರುಷಾರು ಎರಡೈದು ಆಯುರ್ದಾನವನಿತ್ತು –
ದ್ಧರಿಪರ ಕರುಣಾರ್ಣವ
ಪರಮಾಯು ದಾನದಿ ಹಿರಿಯನ ತ್ಯಾಗದೀ –
ಪರಿ ಕೇಳಿ ರಾಧೇಯ ಶಿರಬಾಗಿದ
ಮುರಗೇಡಿ ಅಭಿನವ ಪ್ರಾಣೇಶವಿಠಲನ
ಚರಣದೂಳಿಗಕಾರ ಹರಿದಾಸಧೀರ || ೩ ||
ಅಟ್ಟತಾಳ
ಭರತಖಂಡವನೆಲ್ಲಾ ಚರಿಸುತ ಚರಿಸುತ
ಹರಿದಾಸ್ಯ ಸೌರಭ ಬೀರುತ್ತ ಸಾರುತ್ತ
ಶರಣರಿಗುಣಿಸುತ್ತ ಅವರ ಮನ ತಣಿಸುತ್ತ
ಸರುವ ತೀರ್ಥಕ್ಷೇತ್ರ ದರ್ಶನ ಪಡೆಯತ್ತ
ಹರಿಗಿರಿ ದೇವನ ಪೆರೆ ಭಾಗತೀರನ
ಶರಧಿ ತಟದೊಳಿರ್ಪ ಉಡುಪಿಯ ಕೃಷ್ಣನ
ದರುಶನ ಗೈಯುತ್ತ ಪಾಡುತ್ತ ನಲಿಯುತ್ತ
ಹರಿ ಭಕ್ತಿ ಬೀರಿದ ಹರಿನಾಮ ಸಾರಿದ
ಹರಿ ಅಭಿನವ ಪ್ರಾಣೇಶವಿಠಲನ
ಚರಣ ವಾರಿಜ ಭೃಂಗ ನತದಯಾಪಾಂಗ || ೪ ||
ಆದಿತಾಳ
ಹರಿಕಥಾಲಾಪದಿ ಧರಿಸುರ ರೈಜಿಗೆ
ತರುಚರ ರೂಪದಿ ಮರುತನ ತೋರಿದ
ಹರಿಕಥಾಲಾಪದಿ ರೈಜಿ ಪುತ್ರರಿಗೆ
ಹರಿ ಬಿಂಬ ಕಾಣುವ ಹಾದಿಯ ತೋರಿದ
ಹರಿಕಥಾಲಾಪದಿ ಗದ್ದೆಯ ಭೀಮನ
ಖರತನ ಹರಿಸಿದ ಸುಪಥವ ತೋರುತ
ಹರಿಕಥಾಲಾಪದಿ ಗೌಡನ ಲೆಕ್ಕದ ಲಕ್ಷ
ಧರಿಸುರ ಭೋಜನ ಹರಕೆಯ ಸಲ್ಲಿಸಿದ
ಹರಿಕಥಾಲಾಪದಿ ಹರಿದಾಸ್ಯ ಬೀರಿದೆ
ಹರಿಕಥಾಲಾಪದಿ ಹರಿಪಾದ ತೋರಿದೆ
ಹರಿಕಥಾಲಾಪವೆ ಭವ ಭಯ ಪರಿಹಾರ
ಹರಿಕಥಾಲಾಪವೆ ಸರ್ವಸುಸಾಧನ
ಹರಿಕಥಾಲಾಪಕೆ ಸರಿ ಮಿಗಿಲಿಲ್ಲವೋ
ಸಿರಿ ಅಭಿನವ ಪ್ರಾಣೇಶವಿಠಲನ
ಚರಣ ದಾಸ್ಯವ ದೇಹಿ ಸ್ವಾಮಿ ಮಾಂ ಪಾಹಿ || ೫ ||
ಜತೆ
ಭಕ್ತಿಯಲಿ ಭಾಗಣ್ಣರೆಂಬ ಖ್ಯಾತಿಯ ಪೊತ್ತು
ಶಕ್ತ್ಯಾಭಿನವ ಪ್ರಾಣೇಶವಿಠಲನ ದೂತ ||೬||
SrI aBinava prANESaviThaladAsara racane
SrI gOpAladAsara stOtrasuLAdi
rAga: aBEri
dhruvatALa
kudharajApati Siva madanAri tanuBava
padumESa vaktranu padumESanAj~jadi
mudamunidarSana haridAsa saMdhAna
hadaLisi pasarisi vardhisalOsugavAgi
dadhiSileyoLage avatarisidanu
vidhikuladali janisi vidhimaMtra siddhisi
madhusaKa janakana olume gaLisi
vidhipita aBinava prANESaviThalana pada
paduma madhukaradhISa BAgaNNadAsa || 1 ||
maTTatALa
gajapAlaka raMga sarvOttamaneMdu
trijagadi GOShisida BRugumuni aMSajara
vijayara caraNAbja yajisi Bajisi olisi
vijayAMkita grahisi gOpaviThalarenisi
sujanAMbudhi caMdra Bujaga kumatavIMdra
ajapita aBinava prANESaviThalana
nijadAsa BavadISa gOpAladAsa || 2 ||
tripuTatALa
marutamata darSana varaBAgavata dharma
paramEya pramANa vacana marma
sarasa kannaDa padya pada suLAdigaLiMda
arahuta janake satpatha tOruta
hari dhanvaMtriya tutisi yavanAlA pOpadi
tvaravATAcAryara rOgava kaLede
hiriyarAj~jeyaMte sarisRupa giriyalli
varuShAru eraDaidu AyurdAnavanittu –
ddharipara karuNArNava
paramAyu dAnadi hiriyana tyAgadI –
pari kELi rAdhEya SirabAgida
muragEDi aBinava prANESaviThalana
caraNadULigakAra haridAsadhIra || 3 ||
aTTatALa
BarataKaMDavanellA carisuta carisuta
haridAsya sauraBa bIrutta sArutta
SaraNariguNisutta avara mana taNisutta
saruva tIrthakShEtra darSana paDeyatta
harigiri dEvana pere BAgatIrana
Saradhi taTadoLirpa uDupiya kRuShNana
daruSana gaiyutta pADutta naliyutta
hari Bakti bIrida harinAma sArida
hari aBinava prANESaviThalana
caraNa vArija BRuMga natadayApAMga || 4 ||
AditALa
harikathAlApadi dharisura raijige
tarucara rUpadi marutana tOrida
harikathAlApadi raiji putrarige
hari biMba kANuva hAdiya tOrida
harikathAlApadi gaddeya BImana
Karatana harisida supathava tOruta
harikathAlApadi gauDana lekkada lakSha
dharisura BOjana harakeya sallisida
harikathAlApadi haridAsya bIride
harikathAlApadi haripAda tOride
harikathAlApave Bava Baya parihAra
harikathAlApave sarvasusAdhana
harikathAlApake sari migilillavO
siri aBinava prANESaviThalana
caraNa dAsyava dEhi svAmi mAM pAhi || 5 ||
jate
Baktiyali BAgaNNareMba KyAtiya pottu
SaktyABinava prANESaviThalana dUta ||6||
Leave a Reply