Composer : Shri Karpara Narahari dasaru
ಗೋಪಾಲದಾಸರಾಯ ಮಾಂಪಾಲಯ ||
ಗೋಪಾಲದಾಸರಾಯಾ ಅಪಾರ ಮಹಿಮ
ತಾಪಗಳೋಡಿಸಿ ಕಾಪಾಡೊ ಗುರುರಾಯ ||ಅ.ಪ||
ಗಜಮುಖ ನಮಿಸುವೆ ಸುಜನ ಪಾಲಕ, ಶ್ರೀಮದ್
ವಿಜಯದಾಸರಿಗೆ ನಿಜ ಶಿಷ್ಯರೆನಿಸಿದ ||೧||
ಧನ್ವಂತ್ರಿ ಜಪದಿ ಜಗನ್ನಾಥದಾಸರ
ಬನ್ನವ ಬಿಡಿಸಿದ ಘನ್ನ ಮಹಿಮಗುರು ||೨||
ಏನು ಕರುಣವೋ ಶ್ರೀ ಮಾನವಿ ದಾಸರಿಗೆ
ಸಾನುರಾಗದಿ ಆಯುರ್ದಾನವ ಮಾಡಿದ ||೩||
ಪದುಮನಾಭನ ಪದಪದುಮ ಮಹಿಮೆಗಳ
ವಿಧ ವಿಧ ಪದಸುಳಾದಿಗಳಿಂದ ತುತಿಸಿದ ||೪||
ಶರಣು ಜನಕೆ ಸುರತರುವೆನಿಸಿ ಧರೆಯೊಳು
ಮೆರೆವ ’ಕಾರ್ಪರ ನರಹರಿ’ ಯ ಒಲಿಸಿದಂಥ ||೫||
gOpAladAsarAya mAMpAlaya ||
gOpAladAsarAyA apAra mahima
tApagaLODisi kApADo gururAya ||a.pa||
gajamuKa namisuve sujana pAlaka, SrImad
vijayadAsarige nija SiShyarenisida ||1||
dhanvaMtri japadi jagannAthadAsara
bannava biDisida Ganna mahimaguru ||2||
Enu karuNavO SrI mAnavi dAsarige
sAnurAgadi AyurdAnava mADida ||3||
padumanABana padapaduma mahimegaLa
vidha vidha padasuLAdigaLiMda tutisida ||4||
SaraNu janake surataruvenisi dhareyoLu
mereva ‘kArpara narahari’ ya olisidaMtha ||5||
Leave a Reply