Composer : Shri Shyamasundara dasaru
ಬಾಗಿ ಬೇಡುವೆ ಪಿಡಿಯೊ ಬೇಗ ಕೈಯ್ಯಾ
ಭಾಗವತ ಜನಪ್ರಿಯ ಭಾಗಣ್ಣ ದಾಸಾರ್ಯ [ಪ]
ದ್ವಿಜಕುಲಾಬ್ಧಿಗೆ ಪೂರ್ಣ ದ್ವಿಜರಾಜ-ನೆಂದೆನಿಪ
ವಿಜಯವಿಠ್ಠಲ ದಾಸರೋಲುಮೆ ಪಾತ್ರ
ನಿಜಮನದಿ ನಿತ್ಯದಲಿ ಭುಜಗ ಶಯನನ ಪಾದ
ಭಜಿಪ ಭಾಗ್ಯದಿ ನಲಿವ ಸುಜನರೊಳು ಇಡು ಎಂದು [೧]
ನೀನೆವೆ ಗತಿ ಎಂದ ದೀನರಿಗೆ ನಾನೆಂಬ
ಹೀನಮತಿ ಕಳೆದು ಪವಮಾನ ಪಿತನ
ಧ್ಯಾನಗೈಯ್ಯುವ ದಿವ್ಯ ಜ್ನಾನ ಮಾರ್ಗವ ತೋರಿ
ಸಾನುರಾಗದಿ ಪೊರೆವ ದಾನಿ ದಯವಾರಿಧಿಯೆ [೨]
ಮಂದಜನ ಸಂದೊಹ ಮಂದಾರತರು ವಿಜಿತ
ಕಂದರ್ಪ ಕಾರುಣ್ಯ ಸಿಂಧು ಬಂಧೋ
ಕಂದನೆಂದರಿದೆನ್ನ ಕುಂದು ಎಣಿಸದೆ ಹೃದಯ
ಮಂದಿರದಿ ಶ್ರೀ ಶ್ಯಾಮಸುಂದರನ ತೋರೆಂದು [೩]
bAgi bEDuve piDiyo bEga kaiyyA
bhAgavata janapriya BAgaNNa dAsArya [pa]
dvijakulAbdhige pUrNa dvijarAja-neMdenipa
vijayaviThThala dAsarOlume pAtra
nijamanadi nityadali Bujaga Sayanana pAda
Bajipa BAgyadi naliva sujanaroLu iDu eMdu [1]
nIneve gati eMda dInarige nAneMba
hInamati kaLedu pavamAna pitana
dhyAnagaiyyuva divya jnAna mArgava tOri
sAnurAgadi poreva dAni dayavAridhiye [2]
maMdajana saMdoha maMdArataru vijita
kaMdarpa kAruNya siMdhu baMdhO
kaMdaneMdaridenna kuMdu eNisade hRudaya
maMdiradi SrI SyAmasuMdarana tOreMdu [3]

Leave a Reply
You must be logged in to post a comment.