Shri Jitamitra raya

Composer : Shri Lakumeesha ankita

By Smt.Shubhalakshmi Rao

ಶ್ರೀ ಜಿತಾಮಿತ್ರ ರಾಯ ಗೋನ
ವೃಕ್ಷದ ನಿಲಯಾ || ಪ ||

ಈ ಜಗದೊಳು ಬಲು
ಸೋಜಿಗದ ಕೃಷ್ಣೆ ನಿಲಯಾ |
ರಾಜಿಪ ಮುನಿ ರಾಮ ಭಕ್ತಗೆ
ಕೊಡುವೆ ಅಭಯ || ಅ.ಪ ||

ಉತ್ತಿ ಬಿತ್ತೆ ಕೃಷಿಗೈದೆ
ಸಂತತ ನೀನು |
ನಿತ್ಯ ಕರ್ಮವ ತೊರೆದೆ
ನಿತ್ಯ ಭೋಜನದ |
ಹೊತ್ತಿಗೆ ಜನಿವಾರವನು ಧರಿಸಿ |
ಮತ್ತೆ ಗೂಟಕೆ ಹಾಕಿದ ಜಿತ್ತಪ್ಪ
ನಾಮಕನಾದ || ೧ ||

ವಿಬುಧೇಂದ್ರ ಯತಿ
ಬರಲು ನಿಮ್ಮೂರಿಗೆ |
ಸುಭಗಿನೀ ಪ್ರಾರ್ಥಿಸಲು |
ಅಬುಜ ಕರದಿಂದ
ನರಹರಿ ಜಲಜ ಕೊಡೆ |
ಪ್ರಬಲ ನೀನುಣಿಸಿದೆ ಗುರು
ಆಜ್ಞೆ ಶಿರದಿ ಪೊತ್ತ || ೨ ||

ಮತ್ತೆ ವಿಬುಧೇಂದ್ರರು ಬಂದರು |
ನಿನ್ನನಾ ಕರೆದು ಭಕ್ತಿ
ಪರೀಕ್ಷೆ ಗೈದರು |
ಉತ್ಸಾಹದಿ ಆಶ್ರಮೀಯೆ
ನಿತ್ಯ ಶ್ರೀ ಲಕುಮೀಶನ |
ಸ್ತುತ್ಯವ ಮಾಡುತ ಸಪ್ತಾಹ
ಪ್ರವಾಹದಿ ನಿಂತ || ೩ ||


SrI jitAmitra rAya gOna
vRukShada nilayA || pa ||

I jagadoLu balu
sOjigada kRuShNe nilayA |
rAjipa muni rAma Baktage
koDuve aBaya || a.pa ||

utti bitte kRuShigaide
saMtata nInu |
nitya karmava torede
nitya BOjanada |
hottige janivAravanu dharisi |
matte gUTake hAkida jittappa
nAmakanAda || 1 ||

vibudhEMdra yati
baralu nimmUrige |
suBaginI prArthisalu |
abuja karadiMda
narahari jalaja koDe |
prabala nInuNiside guru
Aj~je Siradi potta || 2 ||

matte vibudhEMdraru baMdaru |
ninnanA karedu Bakti
parIkShe gaidaru |
utsAhadi ASramIye
nitya SrI lakumISana |
stutyava mADuta saptAha
pravAhadi niMta || 3 ||

Leave a Reply

Your email address will not be published. Required fields are marked *

You might also like

error: Content is protected !!