Composer : Shri Kamalanabha vittala [niDaguruki jIvUbAyi]

By Smt.Shubhalakshmi Rao

ಕೇಶವ ಬಾ ನಾರಾಯಣ ಬಾ
ಮಾಧವ ಬಾ ಮಧುಸೂದನ ಬಾ [ಪ]

ಗೋವಿಂದ ಬಾ ಗೋಪಾಲ ಬಾ
ಗೋವರ್ಧನ ಗಿರಿಧಾರಿಯೆ ಬಾ [ಅ.ಪ]

ರಂಗನೆ ಅಂದಿಗೆ ಗೆಜ್ಜೆಯ ಕಟ್ಟಿ
ಚುಂಗು ಬಿಟ್ಟು ರುಮಾಲನೆ ಸುತ್ತಿ
ಶೃಂಗಾರದ ಹಾರ ಪದಕಗಳ್ಹಾಕಿ
ಅಂಗಳದೊಳ-ಗಾಡಲು ಕಳುಹುವೆನು (೧)

ಚಂಡು ಬುಗುರಿ ಗೋಲಿ ಗಜ್ಜುಗ ಹರಿಯೆ
ಗುಂಡು ಬಿಂದಲಿನಿಟ್ಟಿ ಕರದಲಿ ಕೊಡುವೆ
ಹಿಂಡು ಗೋಪಾಲರ ಕೂಡಿಸುವೆ
ಪುಂಡರಿಕಾಕ್ಷನೆ ಪಾಲಿಸು ದೊರೆಯೆ (೨)

ಹಸುಳೆ ನಿನಗೆ ಹೊಸ ಬೆಣ್ಣೆಯ ನೀವೆ
ಬಿಸಿ ಬಿಸಿ ಕಡುಬು ಕಜ್ಜಾಯವ ಕೊಡುವೆ
ಶಶಿಮುಖಿಯರ ಕೂಡಾಡದಿರೆನುವೆ
ಮೊಸರು ಬೆಣ್ಣೆ ಪಾಲ್ಸಕ್ಕರೆ ಕೊಡುವೆ (೩)

ಜರದವಲ್ಲಿ ಅಲಂಕರಿಸುತ ನಲಿವೆ
ಪರಿಪರಿ ಗೆಳೆಯರ ಕೂಡಿಸಿ ಕೊಡುವೆ
ಮುರಳಿ ನುಡಿಸೆನ್ನುತ ಕರಮುಗಿವೆ
ಪರಮಾತ್ಮನೆ ಜಗನ್ಮೋಹನ ಹರಿಯೆ (೪)

ಕಮಲ ಭವೇಂದ್ರಾದ್ಯಮರರು ಪೊಗಳೆ
ಕಮಲ ಪುಷ್ಪ ಮಲ್ಲಿಗೆ ಮಳೆ ಕರೆಯೆ
ಕಮಲನಾಭ ವಿಠ್ಠಲ ಶ್ರೀಹರಿಯೆ
ಶ್ರಮ ಪರಿಹರಿಸೆನ್ನುತ ಪ್ರಾರ್ಥಿಸುವೆ (೫)


kESava bA nArAyaNa bA
mAdhava bA madhusUdana bA [pa]

gOviMda bA gOpAla bA
gOvardhana giridhAriye bA [a.pa]

raMgane aMdige gejjeya kaTTi
cuMgu biTTu rumAlane sutti
SRuMgArada hAra padakagaLhAki
aMgaLadoLa-gADalu kaLuhuvenu (1)

caMDu buguri gOli gajjuga hariye
guMDu biMdaliniTTi karadali koDuve
hiMDu gOpAlara kUDisuve
puMDarikAkShane pAlisu doreye (2)

hasuLe ninage hosa beNNeya nIve
bisi bisi kaDubu kajjAyava koDuve
SaSimuKiyara kUDADadirenuve
mosaru beNNe pAlsakkare koDuve (3)

jaradavalli alaMkarisuta nalive
paripari geLeyara kUDisi koDuve
muraLi nuDisennuta karamugive
paramAtmane jaganmOhana hariye (4)

kamala BavEMdrAdyamararu pogaLe
kamala puShpa mallige maLe kareye
kamalanABa viThThala SrIhariye
Srama pariharisennuta prArthisuve (5)

Leave a Reply

Your email address will not be published. Required fields are marked *

You might also like

error: Content is protected !!