Composer : Shri Purandara dasaru
ಶ್ರೀ ರಾಮನೆಂಬೋ ನಾಮವ ನೆನೆದರೆ
ಭಯವಿಲ್ಲ ಮನಕೆ
ಮೂರು ಲೋಕಕೆ ಕಾರಣ ಕರ್ತಾ
ನಾರಾಯಣ ಜಾಗಕೆ || ಫಾ ||
ಮತ್ಸ್ಯಾವತಾರವ ತಾಳಿದ
ರಾಮ ವೇದವ ತರುವುದಕೆ |
ಬೆತ್ತವ ಬೆನ್ನಲಿ ಪೊಟ್ಟಿದ
ರಾಮ ಕೂರ್ಮಾವತಾರಕ್ಕೆ [೧]
ಭೂಮಿಯ ಪೊಟ್ಟು ನೀರೊಳು ಮುಳುಗಿದ ವರಾಹವತಾರಕ್ಕೆ
ಕರುಳನು ಬಗೆದು ಮಾಲೆಯ ಧರಿಸಿದ
ಪ್ರಹ್ಲಾದನ ಸಲಹಲಿಕ್ಕೆ [೨]
ಭೂಮಿಯ ದಾನವ ಬೇಡಿದ
ರಾಮ ವಾಮನವತಾರಕ್ಕೆ |
ತಾಯಿಯ ಶಿರವನು ಅಳಿದನು
ರಾಮ ಭಾರ್ಗವತಾರಕ್ಕೆ [೩]
ಅರಣ್ಯ ವಾಸವ ಮಾಡಿದ
ರಾಮ ಜನಕನ ವಾಕ್ಯಕ್ಕೆ |
ಮಾವ ಕಂಸನ ಕೊಂದ ಶ್ರೀ
ಕೃಷ್ಣ ತಾಯಿಯ ಬಿಡಿಸಲಿಕ್ಕೆ [೪]
ಸತಿಯರ ವ್ರತಗಳನಳುಹಿದ
ಕೃಷ್ಣ ತ್ರಿಪುರರ ಗೆಲುವುದಕ್ಕೆ |
ವಾಹನ ಬಿಟ್ಟು ತುರಗವ
ನೇರಿದ ಕಲ್ಯವತಾರಕ್ಕೆ [೫]
ಹತ್ತಾವತಾರವ ತಾಳಿದ
ರಾಮ ಸಾಮರ್ಥ್ಯನು ಜಗಕೆ |
ಸ್ವಾಮಿ ಶ್ರೀ ಪುರಂದರ ವಿಠಲನು
ರಾಮ ಗೋವಿಂದನು ಜಗಕೆ [೬]
shrI rAmaneMbO nAmava nenedare
Bayavilla manake
mUru lOkake kAraNa kartA
nArAyaNa jAgake || PA ||
matsyAvatArava tALida
rAma vEdava taruvudake |
bettava bennali poTTida
rAma kUrmAvatArakke [1]
BUmiya poTTu nIroLu muLugida varAhavatArakke
karuLanu bagedu mAleya dharisida
prahlAdana salahalikke [2]
BUmiya dAnava bEDida
rAma vAmanavatArakke |
tAyiya Siravanu aLidanu
rAma BArgavatArakke [3]
araNya vAsava mADida
rAma janakana vAkyakke |
mAva kaMsana koMda shrI
kRuShNa tAyiya biDisalikke [4]
satiyara vratagaLanaLuhida
kRuShNa tripurara geluvudakke |
vAhana biTTu turagava
nErida kalyavatArakke [5]
hattAvatArava tALida
rAma sAmarthyanu jagake |
svAmi SrI puraMdara viThalanu
rAma gOviMdanu jagake [6]
Leave a Reply