Composer : Shri Prasannasrinivasa dasaru
|| ಶ್ರೀ ಅಕ್ಷೋಭ್ಯ ತೀರ್ಥರ ಚರಿತ್ರೆ ||
ಅಕ್ಷೋಭ್ಯ ತೀರ್ಥಗುರು ಸಾರ್ವಭೌಮರು ಎಮ್ಮ
ರಕ್ಷಿಪ ಕೃಪಾನಿಧಿಗೆ ಶರಣು ಶರಣೆಂಬೆ
ಪಕ್ಷೀಶ ವಾಹನ್ನ ಲಕ್ಷ್ಮೀಶ ಕಮಲಾಕ್ಷ
ವಿಷ್ಣು ಆತ್ಮಗೆ ಪ್ರಿಯ ಸತ್ತತ್ವವಾದಿ [ಪ]
ಅಖಿಳಗುಣ ಆಧಾರ ನಿರ್ದೋಷ ಶ್ರೀರಮಣ
ಜಗದಾದಿ ಮೂಲಗುರು ಅಗುರು ಶ್ರೀ ಹಂಸ
ವಾಗೀಶ ಸನಕಾದಿ ದೂರ್ವಾಸಾದಿಗಳ
ಪೀಳಿಗೆ ಗುರುಗಳಿಗೆ ಶರಣು ಶರಣೆಂಬೆ (೧)
ಅಚ್ಯುತ ಪ್ರೇಕ್ಷಾಖ್ಯ ಪುರುಷೋತ್ತಮತೀರ್ಥ
ಅಚ್ಯುತ ಪ್ರೇಕ್ಷರ ಶಿಷ್ಯರೆಂದೆನಿಪ
ಅಚ್ಯುತನ ಮುಖ್ಯಾಧಿಷ್ಠಾನ ಶ್ರೀಮಧ್ವ
ಖಚರೇಂದ್ರ ಫಣಿಪ ಮೃಡ ಅಮರೇಂದ್ರ ವಂದ್ಯ (೨)
ಶ್ರೀ ಮಧ್ವ ಆನಂದತೀರ್ಥ ಕರ ಅಬ್ಜಜರು
ಪದ್ಮನಾಭ ನೃಹರಿ ಮಾಧವಾಕ್ಷೋಭ್ಯ
ಈ ಮಹಾಗುರುಗಳು ಸರ್ವರಿಗು ಆನಮಿಪೆ
ಸುಮನಸ ಶ್ರೇಷ್ಠರು ಮಹಿಯಲಿ ಪುಟ್ಟಿಹರು (೩)
ಸಾಧು ವೈದಿಕ ವೇದಾಂತ ಸತ್ತತ್ವ ಮತ
ಮಧ್ವ ಮತವೇ ಅನ್ಯ ಯಾವುವೂ ಅಲ್ಲ
ಎಂದು ನಿಶ್ಚೈಸಿ ಶೋಭನ ಭಟ್ಟ ಸ್ವಾಮಿ
ಶಾಸ್ತ್ರಿ ಮೊದಲಾದವರು ಮಧ್ವಗೆರಗಿದರು (೪)
ಸೂರಿವರ ಶೋಭನ ಭಟ್ಟಾದಿಗಳಂತೆ
ಸಾರಾಸಾರ ವಿವೇಕಿ ಗೋವಿಂದ
ಶಾಸ್ತ್ರಿಯು ಮಹಾ ದೊಡ್ಡ ಪಂಡಿತರು ತಾನೂ
ಎರಗಿ ಶರಣಾದರು ಮಧ್ವರಾಯರಲಿ (೫)
ಇಂಥಾ ಮಹಾತ್ಮರ ಇನ್ನೂ ಬಹು ಸಜ್ಜರನ
ಉದ್ಧರಿಸಲಿಕ್ಕೇವೆ ಹರಿ ಅಜ್ಞೆಯಿಂದ
ಈ ಧರೆಯಲ್ಲಿ ತೋರಿಹ ಮಧ್ವರಾಯರ
ಶಾಸ್ತ್ರಿ ಬೇಡಿದರು ಸಂನ್ಯಾಸ ಕೊಡು ಎಂದು (೬)
ಸಚ್ಚಾಸ್ತ್ರ ಪ್ರವಚನ ಪಟು ವಿದ್ವನ್ಮಣಿಯು
ನಿಶ್ಚಲ ಭಕ್ತಿಮಾನ್ ಸವೈರಾಗ್ಯ ವಿಪ್ರ
ಅಚಲ ಸತ್ತತ್ವ ನಿಶ್ಚಯ ಜ್ಞಾನಿ ಶಾಸ್ತ್ರಿಗೆ
ಅಕ್ಷೋಭ್ಯ ನಾಮನ ಇತ್ತರಾಚಾರ್ಯ (೭)
ಪ್ರಣವ ಮೂಲಾದಿ ಸುಮಂತ್ರ ಉಪದೇಶಿಸಿ
ತನ್ನ ಮಠದಲ್ಲಿ ಅಕ್ಷೋಭ್ಯ ತೀರ್ಥರಿಗೆ
ವನರುಹನಾಭರಿಂದ ನಾಲ್ಕನೇ ಸ್ಥಾನವ
ಘನದಯದಿ ಇತ್ತರು ಆನಂದಮುನಿಯು (೮)
ಬದರಿಗೆ ಮೂರನೇ ಬಾರಿ ತೆರಳುವ ಪೂರ್ವ
ಮಧ್ವ ಮುನಿ ನೇಮಿಸಿದ ಕ್ರಮದಿಂದಲೇವೆ
ಪದ್ಮನಾಭ ನರಹರಿ ಮಾಧವ ತೀರ್ಥರು
ವೇದಾಂತ ಪೀಠದಲಿ ಕುಳಿತು ಜ್ವಲಿಸಿದರು (೯)
ಪದ್ಮನಾಭ ತೀರ್ಥರ ಪಾದ ಪದ್ಮಗಳಿಗೆ
ಸದಾ ನಮೋ ನಮೋ ಎಂಬೆ ಇವರ ಪೀಳಿಗೆಯ
ವಿದ್ಯಾ ಕುಶಲರು ಸೂರಿಗಳ ಚರಣಕ್ಕೆ
ಸಂತೈಪರೆಮ್ಮ ಸದಾ ನಮೋ ಸರ್ವದಾ (೧೦)
ನರಹರಿ ತೀರ್ಥರು ಚರಣ ಸರಸೀರುಹದಿ
ಶರಣಾದೆ ಕಾಯ್ವರು ಈ ಮಹಾನ್ ಇಹರು
ವರಾಹ ತನಯಾ ಸರಿದ್ವರಾಕ್ಷೇತ್ರದಲಿ
ಶ್ರೀ ವೃಂದಾವನದೊಳು ಹರಿಯ ಧ್ಯಾನಿಸುತ (೧೧)
ಮಾಧವತೀರ್ಥರ ಪಾದ ಪದ್ಮಗಳಿಗೆ
ಸದಾನಮೋ ನಮೋ ಎಂಬೆ ಇವರ ಪೀಳಿಗೆಯ
ಯತಿಗಳೂ ಭಕ್ತಿಮಾನ್ ಜ್ಞಾನಿಗಳ ಚರಣಕ್ಕೆ
ಆದರದಿ ನಮಿಸುವೆ ಸದಾ ಪೊರೆವರೆಮ್ಮ (೧೨)
ಸುಲಭರು ಸುಜನರಿಗೆ ಶರಣರ ಸಲಹುವರು
ಮಾಲೋಲನೊಲಿದಿಹ ಅಕ್ಷೋಭ್ಯತೀರ್ಥ
ಬಲು ಖಿನ್ನ ಬ್ರಾಹ್ಮಣನು ಬ್ರಹ್ಮ ಹತ್ಯ ಮಾಡಿದವ
ಕಾಲಲ್ಲಿ ಬಿದ್ದು ಶರಣಾದ ಗುರುಗಳಲಿ (೧೩)
ಗುರು ದಯಾನಿಧಿ ಅಕ್ಷೋಭ್ಯತೀರ್ಥರು ಆಗ
ಶರಣಾದ ಪುರುಷನ ಪಶ್ಚಾತ್ತಾಪ
ಖರೆಯೇ ಎಂಬುವುದನ್ನು ಜನರಿಗೆ ತಿಳಿಸಲು
ಏರಿ ಮರ ನದಿಯಲಿ ಬೀಳೆ ಹೇಳಿದರು (೧೪)
ತನ್ನಯ ಮಹಾಪಾಪ ಕಳೆಯುವ ಗುರುಗಳು
ಏನು ಹೇಳಿದರೂ ಮಾಡುವೆ ತಾನೆಂದು
ಸನ್ನಮಿಸಿ ಗುರುಗಳಿಗೆ ನದಿ ಬದಿ ಮರಹತ್ತೆ
ದೀನ ರಕ್ಷಕ ಗುರು ಇಳಿಯೆ ಹೇಳಿದರು (೧೫)
ವೃಕ್ಷದಿಂದಿಳಿದ ಆ ವಿಪ್ರ ಘಾತುಕನ ಮೇಲೆ
ಅಕ್ಷೋಭ್ಯತೀರ್ಥರು ಶಂಖ ತೀರ್ಥವನ್ನ
ಪ್ರೋಕ್ಷಿಸಿ ಆತನ ಮಹಾ ಬ್ರಹ್ಮಹತ್ಯಾ
ದೋಷ ಕಳೆದರು ಪಂಕ್ತಿಯಲಿ ಸೇರಿಸಿದರು (೧೬)
ಶಂಖತೀರ್ಥದ ಮಹಿಮೆ ಅಲ್ಲಿದ್ದ ಜನರಿಗೆ
ಶಂಕೆಯಿಲ್ಲದೆ ತಿಳಿಸಿ ಬಂದು ಬೇಡುವವರ
ಡೊಂಕು ಕೊರತೆಗಳೆಲ್ಲ ನೀಗಿಸಿ ಯೋಗ್ಯದಿ
ಶ್ರೀಕಾಂತನಲಿ ಭಕ್ತಿ ಪುಟ್ಟಿಸಿಹರು (೧೭)
ತಮ್ಮಲ್ಲಿ ಬೇಡುವ ಅಧಿಕಾರಿಯೋಗ್ಯರಿಗೆ
ಶ್ರೀಮಧ್ವಶಾಸ್ತ್ರದ ದಾಢ್ರ್ಯ ಜ್ಞಾನ
ಶ್ರೀ ಮನೋಹರನನ್ನ ಅಪರೋಕ್ಷಿ ಕರಿಸುವ
ಸುಮಹಾ ಉಪಾಯವ ಅರುಹಿಹರು ದಯದಿ (೧೮)
ಮಧ್ವಸಿದ್ಧಾಂತ ಸ್ಥಾಪನ ಮಾತ್ರವಲ್ಲದೇ
ವೇದ ವಂಚಕ ದುರ್ಮತಗಳ ಖಂಡನವ
ಪೋದಕಡೆ ಮಾಡುತ್ತಾ ದಿಗ್ವಿಜಯ ಜಯಶೀಲ –
ರೆಂದು ಮರ್ಯಾದೆಗಳ ಕೊಂಡಿಹರು ಜಗದಿ (೧೯)
ಅದ್ವೈತ ವಾದಿಯು ಶಾಂಕರ ಮಠಾಧೀಶ
ವಿದ್ಯಾರಣ್ಯರು ಪ್ರಸಿದ್ಧ ಪಂಡಿತರು
ಎದುರು ನಿಂತರು ಅಕ್ಷೋಭ್ಯ ತೀರ್ಥರ ಮುಂದೆ
ವಾದಿಸಿದರು ಮುಳುಬಾಗಿಲು ಸಮೀಪ (೨೦)
ಶ್ವೇತಕೇತು ಉದ್ದಾಲಕರ ಸಂವಾದ
ತತ್ವ ಮಸಿ ವಾಕ್ಯವೇ ವಾದದ ವಿಷಯ
ವೇದಾಂತ ದೇಶಿಕರು ರಾಮಾನುಜೀಯತಿಯ
ಅಧ್ಯಕ್ಷತೆಯಲ್ಲಿ ಸಭೆಯು ಕೂಡಿತ್ತು (೨೧)
ಛಾಂದೋಗ್ಯ ಉಪನಿಷತ್ತಲ್ಲಿರುವ ವಾಕ್ಯವು
ಸ ಆತ್ಮಾ ತತ್ವಮಸಿ ಎಂಬುವಂಥಾದ್ದು
ಭೇದ ಬೋಧಕವೋ ಅಭೇದ ಬೋಧಕವೋ
ಎಂದು ವಾದವು ಆ ಈರ್ವರಲ್ಲಿ (೨೨)
ಆತ್ಮ ಶಬ್ದಿತ ನಿಯಾಮಕಗು ನಿಯಮ್ಯ ಜೀವನಿಗೂ
ಭೇದವೇ ಬೋಧಿಸುವುದು ಆ ವಾಕ್ಯವೆಂದು
ಸಿದ್ಧಾಂತ ಬಹುರೀತಿ ಸ್ಥಾಪಿಸಿದರು ಅಕ್ಷೋಭ್ಯರು
ಸೋತಿತು ವಿದ್ಯಾರಣ್ಯರ ಐಕ್ಯವಾದ (೨೩)
ಅಸಿನಾತತ್ವ ಮಸಿನಾ ಪರಜೀವ ಪ್ರಭೇದಿನಾ
ವಿದ್ಯಾರಣ್ಯ ಮಹಾರಣ್ಯಂ ಅಕ್ಷೋಭ್ಯ ಮುನಿರಚ್ಛಿನತ್
ಎಂದು ಬರೆದರು ತಮ್ಮಯ ಗ್ರಂಥದಲ್ಲಿ
ಮಧ್ಯಸ್ತ ವೇದಾಂತ ದೇಶಿಕ ಸ್ವಾಮಿಗಳು (೨೪)
ಇಳೆಯ ಸಜ್ಜನರಿಗೆ ಜಯತೀರ್ಥರನಿತ್ತ
ಮಾಲೋಲಪ್ರಿಯ ಅಕ್ಷೋಭ್ಯರ ಮಹಿಮೆ
ಅಲ್ಪಮತಿ ನಾನರಿಯೆ ಇಲ್ಲಿ ಒಂದೋ ಎರಡೋ
ಸ್ಥಾಲಿ ಪುಲಾಕ ನ್ಯಾಯದಲಿ ಪೇಳಿಹುದು (೨೫)
ನದಿ ದಡದಿ ಕುಳಿತಿದ್ದ ಅಕ್ಷೋಭ್ಯ ತೀರ್ಥರು
ಎದುರಾಗಿ ನದಿಯಲ್ಲಿ ಆಚೆ ದಡದಿಂದ
ಕುದುರೆ ಸವಾರನು ವರ್ಚಸ್ವಿ ಯುವಕನು
ಬೆದರದೆ ಪ್ರವಾಹದಲಿ ಬರುವುದು ಕಂಡರು (೨೬)
ಕುದುರೆ ಮೇಲ್ ಆಸೀನನಾಗಿದ್ದ ಯುವಕನು
ಕ್ಷುತ್‍ತೃಷಿ ಶಮನಕ್ಕೆ ಯತ್ನ ಮಾಡುತ್ತಾ
ಉದಕವ ಕೈಯಿಂದ ತುಂಬಿಕೊಳ್ಳದಲೇ
ಎತ್ತುಗಳು ಕುಡಿವಂತೆ ಬಾಯಿ ಹಚ್ಚಿದನು (೨೭)
ಮಾಧವ ಮಧ್ವರು ಮೊದಲೇ ಸೂಚಿಸಿದಂತೆ
ಇಂದು ಆ ಕುರುಹರಿತು ಅಕ್ಷೋಭ್ಯರು
ಇದು ಏನು ಪಶುವಂತೆ ಎಂದು ಧ್ವನಿಗೂಡಲು
ಹಿಂದಿನ ಜನ್ಮ ಯುವಕಗೆ ನೆನಪು ಬಂತು (೨೮)
ಪಶು ಶಬ್ದ ಗುರುಮುಖದಿಂ ಬಂದಲಾಕ್ಷಣ ಪೂರ್ವ
ಸಂಸ್ಕಾರ ಪ್ರತಿಭೆಯು ಉದಯವಾಯ್ತು
ದಶಪ್ರಮತಿಗಳ ತಾನು ಎತ್ತಾಗಿ ಸೇವಿಸಿದ್ದು
ಹಸನಾಗಿ ಟೀಕೆ ಬರೆಯಲಾಜ್ಞೆ ಕೊಂಡದ್ದು (೨೯)
ನಗಾರಿಸಮ ಬಲಿಯುವಕನು ಪ್ರವಾಹದ
ವೇಗ ಲೆಕ್ಕಿಸದಲೇ ದಡಕೆ ತಾ ಬಂದು
ಮುಗಿದುಕರ ಬಾಗಿ ಶಿರ ನಮಿಸಿ ಅಕ್ಷೋಭ್ಯರ
ಆಗಲೇ ಸಂನ್ಯಾಸ ಕೊಡಲು ಬೇಡಿದನು (೩೦)
ಗಾಧಿ ಅರ್ಜುನ ಸಮ ಬಲ ರೂಪದಲಿ ತೋರ್ಪ
ಈತ ರಾಯರ ಸುತನಾದರೂ ವೈರಾಗ್ಯ
ಯುತ ಭಕ್ತಿಮಾನ್ ಸುಶುಭ ಲಕ್ಷಣನು ಎಂದು ಹರಿ
ಮಧ್ವನಿಯಮಿತ ಅವಗೆ ಕೊಟ್ಟರು ಸಂನ್ಯಾಸ (೩೧)
ಶ್ರೀಯಃಪತಿಗೆ ಪ್ರಿಯತರ ಜಯತೀರ್ಥ ನಾಮವ
ದಯಾಶೀಲ ಹೊಸಯತಿಗೆ ಇತ್ತು ಅಭಿಷೇಕ
ಅಕ್ಷೋಭ್ಯ ಗುರುಮಾಡೆ ಗಗನದಿಂ ಪೂವರ್ಷ
ಜಯ ಘೊಷ ಹರಡಿತು ಪರಿಮಳ ಸುಗಂಧ (೩೨)
ಶ್ರೀಮಧ್ವಾಚಾರ್ಯರು ಬೋಧಿಸಿ ತೋರಿಸಿದ
ರಮಾಪತಿ ಪೂಜಾಸ ತ್ತತ್ವವಾದ
ದುರ್ಮತ ಖಂಡನದ ರೀತಿಯ ಜಯಾರ್ಯರಿಗೆ
ಸುಮ್ಮುದದಿ ಅರುಹಿದರು ಗುರು ಸಾರ್ವಭೌಮ (೩೩)
ಶೀಲತಮ ಗುರುವರ್ಯ ಅಕ್ಷೋಭ್ಯತೀರ್ಥರು
ಇಳೆಯಲ್ಲಿ ಮಧ್ವಮತ ಹರಿಭಕ್ತಿಯನ್ನ
ಬೆಳೆಸಲು ಪ್ರತ್ಯೇಕ ಮಠವ ಸ್ಥಾಪಿಸಿದರು
ತ್ರೈಲೋಕ ಭೂಷಣ ತೀರ್ಥರ ಮೊದಲ್ಮಾಡಿ (೩೪)
ಆದಿ ಮಠ ಹರಿನೈದು ಸಮೀಪ ಪಟ್ಟವ ಆಳಿ
ಹನ್ನೊಂದು ನೂರು ಅರವತ್ತೇಳ ಶಕವರುಷ
ವದ್ಯ ಪಂಚಮಿ ಮಾರ್ಗಶಿರ ವಿಶ್ವಾವಸುವಲ್ಲಿ
ಮಧ್ವ ಹೃದಯಾಬ್ಜಗನ ಪುರವ ಐದಿದರು (೩೫)
ಮತ್ತೊಂದು ಅಂಶದಲಿ ಮಳಖೇಡ ಗ್ರಾಮದಲಿ
ನದಿ ತೀರದಲಿ ಹರಿಯ ಧ್ಯಾನ ಮಾಡುತ್ತಾ
ಬಂದು ಬೇಡುವವರಿಷ್ಟಾರ್ಥ ಪೂರೈಸುತ
ವೃಂದಾವನದಲ್ಲಿ ಕುಳಿತಿಹರು ಕರುಣಿ (೩೬)
ಶಾಶ್ವತ ಸರ್ವಾಶ್ರಯ ಗುಣಗಣಾರ್ಣವ ಅನಘ
ಜೀವ ಜಡ ಭಿನ್ನ ಪರಮಾತ್ಮ ವಿಧಿತಾತ
ಮಧ್ವ ಹೃತ್ಪದ್ಮಗ ಶ್ರೀ ಪ್ರಸನ್ನ ಶ್ರೀನಿವಾಸಗೆ
ಸರ್ವದಾಪ್ರಿಯ ಅಕ್ಷೋಭ್ಯ ಗುರೋ ಶರಣು (೩೭)
|| ಶ್ರೀ ಅಕ್ಷೋಭ್ಯ ತೀರ್ಥ ಚರಿತೆ ಸಂಪೂರ್ಣಂ ||
|| shrI akShOBya tIrthara caritre ||
akShOBya tIrthaguru sArvaBaumaru emma
rakShipa kRupAnidhige SaraNu SaraNeMbe
pakShISa vAhanna lakShmISa kamalAkSha
viShNu Atmage priya sattatvavAdi [pa]
aKiLaguNa AdhAra nirdOSha SrIramaNa
jagadAdi mUlaguru aguru SrI haMsa
vAgISa sanakAdi dUrvAsAdigaLa
pILige gurugaLige SaraNu SaraNeMbe (1)
acyuta prEkShAKya puruShOttamatIrtha
acyuta prEkShara SiShyareMdenipa
acyutana muKyAdhiShThAna SrImadhva
KacarEMdra PaNipa mRuDa amarEMdra vaMdya (2)
SrI madhva AnaMdatIrtha kara abjajaru
padmanABa nRuhari mAdhavAkShOBya
I mahAgurugaLu sarvarigu Anamipe
sumanasa SrEShTharu mahiyali puTTiharu (3)
sAdhu vaidika vEdAMta sattatva mata
madhva matavE anya yAvuvU alla
eMdu niScaisi SOBana BaTTa svAmi
SAstri modalAdavaru madhvageragidaru (4)
sUrivara SOBana BaTTAdigaLaMte
sArAsAra vivEki gOviMda
SAstriyu mahA doDDa paMDitaru tAnU
eragi SaraNAdaru madhvarAyarali (5)
iMthA mahAtmara innU bahu sajjarana
uddharisalikkEve hari aj~jeyiMda
I dhareyalli tOriha madhvarAyara
SAstri bEDidaru saMnyAsa koDu eMdu (6)
saccAstra pravacana paTu vidvanmaNiyu
niScala BaktimAn savairAgya vipra
acala sattatva niScaya j~jAni SAstrige
akShOBya nAmana ittarAcArya (7)
praNava mUlAdi sumaMtra upadESisi
tanna maThadalli akShOBya tIrtharige
vanaruhanABariMda nAlkanE sthAnava
Ganadayadi ittaru AnaMdamuniyu (8)
badarige mUranE bAri teraLuva pUrva
madhva muni nEmisida kramadiMdalEve
padmanABa narahari mAdhava tIrtharu
vEdAMta pIThadali kuLitu jvalisidaru (9)
padmanABa tIrthara pAda padmagaLige
sadA namO namO eMbe ivara pILigeya
vidyA kuSalaru sUrigaLa caraNakke
saMtaiparemma sadA namO sarvadA (10)
narahari tIrtharu caraNa sarasIruhadi
SaraNAde kAyvaru I mahAn iharu
varAha tanayA saridvarAkShEtradali
SrI vRuMdAvanadoLu hariya dhyAnisuta (11)
mAdhavatIrthara pAda padmagaLige
sadAnamO namO eMbe ivara pILigeya
yatigaLU BaktimAn j~jAnigaLa caraNakke
Adaradi namisuve sadA porevaremma (12)
sulaBaru sujanarige SaraNara salahuvaru
mAlOlanolidiha akShOByatIrtha
balu Kinna brAhmaNanu brahma hatya mADidava
kAlalli biddu SaraNAda gurugaLali (13)
guru dayAnidhi akShOByatIrtharu Aga
SaraNAda puruShana paScAttApa
KareyE eMbuvudannu janarige tiLisalu
Eri mara nadiyali bILe hELidaru (14)
tannaya mahApApa kaLeyuva gurugaLu
Enu hELidarU mADuve tAneMdu
sannamisi gurugaLige nadi badi marahatte
dIna rakShaka guru iLiye hELidaru (15)
vRukShadiMdiLida A vipra GAtukana mEle
akShOByatIrtharu SaMKa tIrthavanna
prOkShisi Atana mahA brahmahatyA
dOSha kaLedaru paMktiyali sErisidaru (16)
SaMKatIrthada mahime allidda janarige
SaMkeyillade tiLisi baMdu bEDuvavara
DoMku korategaLella nIgisi yOgyadi
SrIkAMtanali Bakti puTTisiharu (17)
tammalli bEDuva adhikAriyOgyarige
SrImadhvaSAstrada dADhrya j~jAna
SrI manOharananna aparOkShi karisuva
sumahA upAyava aruhiharu dayadi (18)
madhvasiddhAMta sthApana mAtravalladE
vEda vaMcaka durmatagaLa KaMDanava
pOdakaDe mADuttA digvijaya jayaSIla –
reMdu maryAdegaLa koMDiharu jagadi (19)
advaita vAdiyu SAMkara maThAdhISa
vidyAraNyaru prasiddha paMDitaru
eduru niMtaru akShOBya tIrthara muMde
vAdisidaru muLubAgilu samIpa (20)
SvEtakEtu uddAlakara saMvAda
tatva masi vAkyavE vAdada viShaya
vEdAMta dESikaru rAmAnujIyatiya
adhyakShateyalli saBeyu kUDittu (21)
CAMdOgya upaniShattalliruva vAkyavu
sa AtmA tatvamasi eMbuvaMthAddu
BEda bOdhakavO aBEda bOdhakavO
eMdu vAdavu A Irvaralli (22)
Atma Sabdita niyAmakagu niyamya jIvanigU
BEdavE bOdhisuvudu A vAkyaveMdu
siddhAMta bahurIti sthApisidaru akShOByaru
sOtitu vidyAraNyara aikyavAda (23)
asinAtatva masinA parajIva praBEdinA
vidyAraNya mahAraNyaM akShOBya muniracCinat
eMdu baredaru tammaya graMthadalli
madhyasta vEdAMta dESika svAmigaLu (24)
iLeya sajjanarige jayatIrtharanitta
mAlOlapriya akShOByara mahime
alpamati nAnariye illi oMdO eraDO
sthAli pulAka nyAyadali pELihudu (25)
nadi daDadi kuLitidda akShOBya tIrtharu
edurAgi nadiyalli Ace daDadiMda
kudure savAranu varcasvi yuvakanu
bedarade pravAhadali baruvudu kaMDaru (26)
kudure mEl AsInanAgidda yuvakanu
kShut^tRuShi Samanakke yatna mADuttA
udakava kaiyiMda tuMbikoLLadalE
ettugaLu kuDivaMte bAyi haccidanu (27)
mAdhava madhvaru modalE sUcisidaMte
iMdu A kuruharitu akShOByaru
idu Enu paSuvaMte eMdu dhvanigUDalu
hiMdina janma yuvakage nenapu baMtu (28)
paSu Sabda gurumuKadiM baMdalAkShaNa pUrva
saMskAra pratiBeyu udayavAytu
daSapramatigaLa tAnu ettAgi sEvisiddu
hasanAgi TIke bareyalAj~je koMDaddu (29)
nagArisama baliyuvakanu pravAhada
vEga lekkisadalE daDake tA baMdu
mugidukara bAgi Sira namisi akShOByara
AgalE saMnyAsa koDalu bEDidanu (30)
gAdhi arjuna sama bala rUpadali tOrpa
Ita rAyara sutanAdarU vairAgya
yuta BaktimAn suSuBa lakShaNanu eMdu hari
madhvaniyamita avage koTTaru saMnyAsa (31)
SrIyaHpatige priyatara jayatIrtha nAmava
dayASIla hosayatige ittu aBiShEka
akShOBya gurumADe gaganadiM pUvarSha
jaya GoSha haraDitu parimaLa sugaMdha (32)
SrImadhvAcAryaru bOdhisi tOrisida
ramApati pUjAsa ttatvavAda
durmata KaMDanada rItiya jayAryarige
summudadi aruhidaru guru sArvaBauma (33)
SIlatama guruvarya akShOByatIrtharu
iLeyalli madhvamata hariBaktiyanna
beLesalu pratyEka maThava sthApisidaru
trailOka BUShaNa tIrthara modalmADi (34)
Adi maTha harinaidu samIpa paTTava ALi
hannoMdu nUru aravattELa SakavaruSha
vadya paMcami mArgaSira viSvAvasuvalli
madhva hRudayAbjagana purava aididaru (35)
mattoMdu aMSadali maLaKEDa grAmadali
nadi tIradali hariya dhyAna mADuttA
baMdu bEDuvavariShTArtha pUraisuta
vRuMdAvanadalli kuLitiharu karuNi (36)
SASvata sarvASraya guNagaNArNava anaGa
jIva jaDa Binna paramAtma vidhitAta
madhva hRutpadmaga SrI prasanna SrInivAsage
sarvadApriya akShOBya gurO SaraNu (37)
|| SrI akShOBya tIrtha carite saMpUrNaM ||
Leave a Reply