Sumadhwavijaya sara sangraha

Composer : Shri Vidyaprasanna Tirtharu

By Smt.Vijaya Sreeganesh

ಶ್ರೀ ಸುಮಧ್ವವಿಜಯ ಸಾರಸಂಗ್ರಹ

ಲಕುಮಿವಲ್ಲಭನಾಜ್ಞೆಯನು ತಾ
ಮುಕುಟದಲಿ ವಹಿಸುತಲಿ ಸುರವರ
ನಿಕರವಂದಿತ ಚರಣ ಕಪಿ ರೂಪವನೆ ತಾ ತಾಳಿ |
ಲಕುಮಿ ಸೀತೆಗೆ ರಾಮಚರಿತೆಗ
ಳಖಿಲದಿಂ ಸಂತಸವ ಪುಟ್ಟಿಸಿ
ಶಕುತಿಯಿಂದಲಿ ವನಧಿ ಲಂಘಿಸಿ ರಘುವರನ ನಮಿಸಿ [೧]

ವನಧಿಯಲಿ ಸೇತುವೆಯ ಕಟ್ಟುತ
ದನುಜರನು ಸದೆಬಡಿದು ದಶರಥ
ತನಯಸತಿ ನೀಡಿದ ಸುಮಾಲಿಕೆಯನುಗ್ರಹವ ಪಡೆದು |
ವನಜನಿಲಯಳ ವಲ್ಲಭನ ಪದ
ವನಜವನು ಹೃದಯದಲಿ ಸಂತತ
ಮನನದಲಿ ಕಿಂಪೂರುಷದಲಿಹ ಹನುಮನನು ಭಜಿಪೆ [೨]

ಪಾಂಡುಸತಿ ಮಾರುತನು ಮುಟ್ಟಲು
ಗಂಡುತನಯನ ಪಡೆಯಲಾಶಿಶು ಖಂಡಿಸಿತು
ಶತಶೃಂಗ ಗಿರಿಯನು ತನುವ ಸಂಗದಲಿ |
ತಂಡತಂಡದಿ ರಾಜಕುವರರ
ಪುಂಡನಡಗಿಸಿ ದೃಪದ ಧರಣೀ
ಮಂಡಲೇಶನ ಕುವರಿ ಕರಕಮಲಗಳ ತಾ ಗೆಲಿದ [೩]

ಅರಿಸಮೂಹವ ಪೊಸಕಿ ತಾ ಯದು
ವರನ ಚರಣಾಂಬುರುಹ ಮಧುಕರ
ನುರು ಪರಾಕ್ರಮವರಿತು ದಿತಿಜರು ಮತ್ಸರದಿ ಉರಿದು |
ಧರಣಿಯಲಿ ಪುಟ್ಟಿದರು ದುರ್ಮತ
ಸರಣಿ ಹರಡುತ ಸೇಡನೆಸಗಲು
ಮರುದನಂಶನ ಭೀಮಸೇನನ ಚರಣವೇ ಶರಣು [೪]

ನಿಜಮತಿಯ ದಿನಕರನು ಮುಳುಗಲು
ಅಜಿತನಾಜ್ಞೆಯ ಪಡೆದ ಮರುದನು
ಋಜುತಪಗಳಾಚರಿಸಿ ಪರಮ ವಿಶುದ್ಧರಾಗಿದ್ದ |
ಸುಜನಶೇಖರ ಮಧ್ಯಗೇಹ
ದ್ವಿಜವರನ ಸತಿಯುದರದಲಿ ತಾ
ಬಿಜಯಗೈದನು ಹೊರಗೆಡಹಿ ಬೇರೊಂದನಾಕ್ಷಣದಿ [೫]

ಅಸಮ ಮೂವತ್ತೆರಡು ಲಕ್ಷಣ
ಶಿಶು ಶರೀರವ ಪೊಕ್ಕನಾಕ್ಷಣ
ಬಿಸುಟನಾ ಪರಜೀವವನು ಅಸುಪತಿಯು ತಾ ಹೊರಗೆ |
ಅಸುರನಿಕರಕೆ ಖೇದ ಸುಖಸಂ
ತಸವು ಸಜ್ಜನತತಿಗೆ ಈ ಪರಿ
ಸುಸಮಯವಿದೆಂಬುದನು ನುಡಿಯಿತು ದೇವದುಂದುಭಿಯು [೬]

ಗೋಪ್ರದಾಯಕ ವಿಪ್ರವರ್ಯಗೆ
ಕ್ಷಿಪ್ರದಲಿ ಸುಪ್ರಜ್ಞೆಯಿತ್ತನು
ಸ್ವಪ್ರಭಾವದಿ ನಿಜಜನರ ಗ್ರಹಭಯವ ನೀಗಿಸುತ |
ವಿಪ್ರಸತಿ ಹೊರಗಿರಲು ರೋದನ
ತಪ್ಪಿಸಲು ನಿಜ ಸಹಜೆಯುಣಿಸಿದ
ಪ್ರಪ್ರಪಕ್ವ ಕುಲಿತ್ಥ ಭುಂಜಿಸಿ ಜೀರ್ಣಿಸಿದ ಕ್ಷಣದಿ [೭]

ಮೃದುಳ ಕಲಭಾಷಣದಿ ಸ್ವಜನಕೆ
ಮುದವನೀಯುತಲೊಂದು ದಿನ
ವೈದಿದನು ವನವನು ವೃಷಭ ಬಾಲವ ಪಿಡಿದು ಸಂತಸದಿ |
ಬೆದರಿಸಿದ ಋಣಕೊಟ್ಟ ಧನಿಕನ
ಹೃದಯ ಕರಗುವ ತೆರದಿ ಸುಂದರ
ವದನ ದರ್ಶನವಿತ್ತ ವಾಯುಕುಮಾರ ರಕ್ಷಿಸಲಿ [೮]

ಜನನಿಜನಕರ ಸಹಿತ ಬಾಂಧವ
ಜನರ ಗೃಹಕೊಂದು ದಿನ ತೆರಳಿದ
ಜನತೆಯತಿ ಸಂಭ್ರಮದಲಿರುತಿರೆ ತರಳ ಹೊರಹೊರಟ |
ವನವನವ ಸಂಚರಿಸಿಯಲ್ಲಿಹ
ವನಜನಾಭನ ಮಂದಿರಗಳಲಿ
ದಣಿವು ಕಾಣದೆ ಹರಿಯ ನಮಿಸುತ ಸಿಕ್ಕಿದನು ಪಿತಗೆ [೯]

ಯಾರು ನಿನಗೆ ಸಹಾಯಕರು ಈ
ಘೋರವನದಲಿ ಪೇಳೆನಲು ತಾ
ತೋರಿದನು ವನಸದನವಲ್ಲಭ ಮಾರಜನಕನನು |
ಸೂರಿ ಶಿವನನು ಗೆಲಿದು ಸಭೆಯಲಿ
ಚಾರುವಟುವೆನಿಸಿದ ಸಕಾಲದಿ
ಮಾರುತನ ಮೂರನೆಯ ರೂಪವು ಶ್ರೇಯವನು ಕೊಡಲಿ [೧೦]

ಸರಿದು ಬರುತಿರೆ ಕೊಲ್ಲಲೋಸುಗ
ಉರಗರೂಪಿಯ ದೈತ್ಯನನು ವರ
ಚರಣಕಮಲದ ಲೀಲೆಯಲಿ ಸಂಹರಿಸಿದನು ಕ್ಷಣದಿ |
ಸುರವರಾರ್ಚಿತ ಚರಣನಾದರು
ಧರಣಿಸುರನನು ನಮಿಸಿ ವೇದವ
ನರಿಯುವಂದದಿ ನಟನೆ ಮಾಡಿದ ಲೋಕಶಿಕ್ಷಕನು [೧೧]

ಬಾಲಲೀಲೆಗಳಲ್ಲಿ ಬಹುತರ
ಕಾಲವನು ಕಳೆಯುತ ವಿನೋದದಿ
ಬಾಲನೊಬ್ಬನ ಚಿರತನದ ಯಾತನೆಯ ಪರಿಹರಿಸಿ |
ಆಲಯಕೆ ತೆರಳುವ ಮೊದಲು ಗುಣ
ಶಾಲಿ ಗುರುವನು ನಮಿಸಿ ತನ್ನ ಕೃ
ಪಾಲವದಿ ಪರಲೋಕ ಸಾಧಕ ಹರಿ ಭಕುತಿಯಿತ್ತ [೧೨]

ಧರಣಿಭವ ದಿತಿಸುತರ ದಂಡಿಸೆ
ಪರಮಹಂಸಾಶ್ರಮವ ಪಡೆಯಲು
ಗುರುಗಳನು ಹುಡುಕುತಲಿ ಹೊರಟನು ಸಕಲವನು ತ್ಯಜಿಸಿ |
ಪರಮಮಂಗಳ ವೇದಿಜೆಯ ಕರ
ಸರಸಿಜದಿ ದೊರೆತುದುದ ಭುಂಜಿಸಿ
ಕರಣ ಶುದ್ದಿಯಲ್ಲಿದ್ದ ಯತಿವರನೋಲಗಕೆ ಬಂದ [೧೩]

ತಾಳಿದರೆ ಯತ್ಯಾಶ್ರಮವ ನೀ
ಪಾಲಕರು ಯಾರೆಮಗೆ ಭುವಿಯಲಿ
ಲಾಲಿಸೆಮ್ಮಯ ವಚನವೆಂದರು ಜನಕಜನನಿಯರು |
ಪಾಲಿಸುವನೆನ್ನನುಜ ನಿಮ್ಮನು
ಕೇಳದಿದ್ದರೆ ಎನ್ನ ನುಡಿಯನು
ತಾಳಲಾರಿರಿ ಸತತ ದುಃಖವನೆಂದ ದೃಢಮನದಿ [೧೪]

ಗುರುವರೇಣ್ಯರ ಕರಸರೋಜದಿ
ಪರಮಹಂಸಾಶ್ರಮವ ಪೊಂದುತ
ಕರೆದರಾತನ ಧರೆಸುರರು ವರನಿಗಮಗಳ ತತಿಯ |
ಹರುಷದಲಿ ವರ ಪೂರ್ಣಬೋಧಾ
ಭಿದದಿ ಗುಣಗಳನರಿತು ಜೀವರ
ವರವರ ಪರಿಮಿತ ಮಾತ್ರ ಪ್ರಣವ ಜಪಾಧಿಕಾರಿಗಳು [೧೫]

ರಜತಪುರವಲ್ಲಭನ ಸೇವೆಗೆ
ವಿಜಯವೆಂಬುದ ತೋರುವಂದದಿ
ಭುಜಪಿಡಿದು ತಾ ಕೊಟ್ಟನೀತನು ಅಚ್ಯುತೇಕ್ಷರಿಗೆ |
ಅಜಿತನಾಜ್ಞೆಯ ಪಡೆದ ಸುರನದಿ
ಬಿಜಯಿಸಿದಳಾಸ್ಥಳಕೆ ಕೀರ್ತಿಯ
ಧ್ವಜವು ಹಾರಿತು ವಾದದಲಿ ಸುಜನಾರ್ತಿ ಮರೆಯಾಯ್ತು [೧೬]

ವೇದವಿದ್ಯಾ ರಾಜ್ಯದಲ್ಲಿ ಪರ ಮಾದರದಲಭಿಷೇಕವೀತಗೆ
ಗೈದರಚ್ಯುತ ಮತಿಗಳಖಿಲ ಯತೀಂದ್ರರೊಂದು ದಿನ |
ಬಾಧಬಾರದ ಮೋದವನು ದಿನ
ಸಾಧಿಸುವ ಶಾಸ್ತ್ರಗಳ ರಚಿಸಲು
ಮೋದತೀರ್ಥ ಸುನಾಮವಿವರಿಗೆ ಸಾರ್ಥಕವದಾಯ್ತು [೧೭]

ಹೇಯವಾದಗಳರಿತ ಕೆಲರನು
ನ್ಯಾಯಶಾಸ್ತ್ರದಿ ಚತುರರನು ಹೊಸ
ನ್ಯಾಯಗಳ ತೋರುತಲಿ ಗೆದ್ದರು ಅತಿಸುಲಭದಲ್ಲಿ |
ಜೀಯಪೂರ್ಣಪ್ರಮತಿ ಧರೆಯೊಳ
ಜೇಯರೆನಿಸಿದ ಬುದ್ಧಿಸಾಗರ
ಪ್ರೇಯನೀತಗೆ ವಾದಿಸಿಂಹನ ಗೆಲಿದು ತಾ ಮೆರೆದ [೧೮]

ಅಗುಣನೀಶ್ವರ ಈಶಜೀವರು
ವಿಗತಭೇದರು ಜಗದಿಂತೆನಿತು
ಬೊಗಳುತಿಹ ಮಾಯಿಗಳ ಭಾಷ್ಯದ ದೋಷಗಳ ತೋರಿ |
ಸುಗಮ ಸೂತ್ರಾರ್ಥಗಳ ವಿವರಿಸಿ
ಸ್ವಗುರುಸಹಿತದಿ ಹೊರಟು ದಕ್ಷಿಣ
ದಿಗನು ಸಂಚರಿಸುತ ಬಂದರು ವಿಷ್ಣುಮಂಗಳಕೆ [೧೯]

ಮಂಗಳಾಂಗನ ಚರಣಕೆರಗುತ
ಅಂಗುಟದ ಜಾಠರ ಪ್ರಭಾವದಿ
ತುಂಗಕದಲೀನಿಕರಗಳ ಭುಂಜಿಸುತ ಭಿಕ್ಷೆಯಲಿ |
ಅಂಗಸರಸಿಜನಾಭನು ಶ್ರೀ
ರಂಗರಮಣನ ನಮಿಸಿ ಭೂಸುರ
ಸಂಘದಿಂದಾದರವ ಪಡೆಯುತ ಮೆರೆದ ಸಭೆಗಳಲಿ [೨೦]

ಛಲದಿ ಸಭೆಯಲಿ ಬುಧಜನಂಗಳು
ಹಲವು ವಿಧ ಪ್ರಶ್ನೆಗಳ ಮಾಡಲು
ಸುಲಭವಾದುತ್ತರಗಳಿತ್ತರು ತಿಳಿಯಬಯಸಿದರು |
ಹಲವು ವಿಧದರ್ಥಗಳವರು ಶ್ರೀ
ನಿಲಯ ನಾಮದ ಸಾಸಿರಗಳಿಗೆ
ಅಲವಬೋಧರು ಪೇಳಲತಿ ವಿಸ್ಮಯದಿ ನಮಿಸಿದರು [೨೧]

ಒಂದು ದಿನ ಸದಸಿನಪಾಲಾ
ಎಂದಿರುವ ಪದದರ್ಥವನು ಬಲು
ಸುಂದರಾಂಗಿಯಳೆಂದು ನುಡಿದರು ನಂಬಿಕೆಯು ಬರಲು |
ಮುಂದೆ ಬರಲಿಹ ವಿಪ್ರವರನನು
ಸಂಧಿಸುತ ಕೇಳಿರಿದರರ್ಥವ
ನೆಂದು ಸರ್ವಜ್ಞತೆಯ ಜನರೊಳು ಪ್ರಕಟಪಡಿಸಿದರು [೨೨]

ಸತಿಯ ಸಭೆಯಲಿ ಸೀರೆ ಸೆಳೆದತಿ
ಖತಿಯಪಡಿಸಿದ ದುರುಳ ದನುಜರ
ತತಿಯ ಸವರುವ ಘೋರದೀಕ್ಷೆಯ ಬಂಧನದ ತೆರದಿ |
ಶ್ರುತಿತತಿಯು ಮಾಯಾಖ್ಯವಾದದ
ಚಿತೆಯಲಿರುತಿರೆ ಸುಜನಶರಣರು
ದಿತಿಸುತರ ನಾಶನದ ಕಂಕಣಕಟ್ಟಿದರು ಕ್ಷಣದಿ [೨೩]

ಹಿಮಗಿರಿಯ ತಲದಲ್ಲಿ ನೆಲೆಸಿಹ
ಕಮಲೆರಮಣನ ಕಂಡು ವಂದಿಸಿ
ವಿಮಲಮತಿಗಳು ಗೀತೆಗವರ ಭಾಷ್ಯವನರ್ಪಿಸಲು |
ಹಿಮನಿಲಯ ಶೃಂಗದಲಿ ಬದರೀ
ದ್ರುಮ ಬುಡದಿ ರಾಜಿಸುವ ವ್ಯಾಸಾ
ಶ್ರಮವ ಸೇರಲು ತೆರಳಿದರು ಹರಿಯಾಜ್ಞೆಯನುಸರಿಸಿ [೨೪]

ತುಹಿನಗಿರಿತುದಿಯಲ್ಲಿ ರಾಜಿಸು
ತಿಹ ಬದರಿಷಂಡಗಳ ಮಧ್ಯದಿ
ಅಹಿಪತಿಯ ಭೋಗದಲಿ ರಮಿಪ ಶ್ರೀಪತಿಯ ತೆರದಿ |
ಬಹುಳ ತೇಜವ ನೋಡಿದರು ಭೂ
ಸುರರ ಸಮೀಪಕೆ ಬರಲು ತಾಪಸ
ನಿವಹ ವಿಸ್ಮಯದಿಂದ ನೋಡಿದರಾವರಿವರೆಂದು [೨೫]

ತಾಪಸೋತ್ತಮ ಬಾದರಾಯಣ
ರೂಪವನುಪಮ ಚಿತ್ಸುಖಮಯಾ
ಪಾದಮೌಳಿಯ ನೋಡಿ ಪರವಶರಾಗಿ ಮೈಮರೆತು |
ತಾಪಸರ ಮಧ್ಯದಲ್ಲಿ ಪೊಳೆಯುವ
ರೂಪವಿದು ಮಾನಸದಿ ನೆಲೆಸಿಹ
ಶ್ರೀಪತಿಯೆಂದರಿತು ವಿಸ್ಮಿತರಾದರಾಕ್ಷಣದಿ [೨೬]

ಭಕುತಿಯಲಿ ಬಾಗಿದರು ಶಿರವನು
ಸುಕೃತಶಾಲಿಗಳಾಕ್ಷಣದಿ ನಗು
ಮುಖದಿಂದ ಬಂದೆತ್ತಿದರು ವ್ಯಾಸರು ಪ್ರಥಮ ಭಕುತರನು |
ಶುಕಪಿತರು ಭಕುತಾಗ್ರಣಿಗಳೀ
ಸುಖಕರಾಲಿಂಗನದಲಿರುತಿರೆ
ಪ್ರಕಟವಾಯಿತು ರವಿಸುತೆಯ ಸುರನದಿಯ ಸಂಗಮವು [೨೭]

ತನಯ ಶುಕನಿಗೂ ದೊರೆಯದಿಹ
ಲಾಲನೆಯ ಪಡೆದ ಮಹಾತ್ಮರನು ಅತಿ
ವಿನಯದಿಂದಾದರಿಸಿದರು ಮುನಿಜನರು ವಿಸ್ಮಯದಿ |
ವನಜಸಂಭವ ತನಗೆ ಪ್ರಿಯತಮ
ಜನಕೆ ಹರಿಸದನದಲಿರುವ ಪರಿ
ಮುನಿವರರು ಯತಿವರರು ಬೆಳಗಿದರಾಶ್ರಮವನೆಲ್ಲ [೨೮]

ಕುಶಲಬುದ್ಧಿಯ ಅಸಮ ಪ್ರತಿಭೆಯು
ಹೊಸತೆರೆದ ಪ್ರಭೆಯಿಂದಲೊಪ್ಪುವ
ದಶಮತಿಯ ದರುಶನದಿ ಜನತೆಗೆ ಮೂಡಿತಚ್ಚರಿಯು |
ಅಸುಪತಿಗಳಾದರದಿ ಶಾಸ್ತ್ರದ
ರಸವ ಭುಂಜಿಸಿ ಗುರುಸಹಿತ ಮಾ
ನಸ ವಿಕಾಸದಿ ಹೊರಟು ಸೇರಿದರಾಶ್ರಮಾಂತರವ [೨೯]

ಥಳಥಳಿಸುತಿಹ ಧೂಮವರ್ಜಿತ
ಜ್ವಲನದಂತಿಹ ತಾಪಸಾಕೃತಿ
ಕುಳಿತಿರುವುದನು ನೋಡಿ ನಯನ ವಿಕಾಸ ಪೊಂದಿದರು |
ಹೊಳೆಯಿತಾಕ್ಷಣ ಈತ ನಿಗಮಾ
ವಳಿಯ ರಕ್ಷಿಸಿದಾತನೆಂಬುದು
ಹಲವು ವಿಧದವತಾರಗಳ ಚಿಂತಿಸುತ ನಮಿಸಿದರು [೩೦]

ಎರಡು ಹರಿರೂಪಗಳ ಬಳಿಯಲಿ
ಪರಮಹರುಷಾಂಭುದಿಯಲಿರುತಿರೆ
ದೊರಕದೀಸುಖವೆಂಬುದರಿತರು ಮೂರು ಲೋಕದಲಿ |
ಅರಿಯದಜ್ಞಾನಿಗಳು ರಚಿಸಿದ
ದುರುಳ ಭಾಷ್ಯವ ಖಂಡಿಸುವುದಕೆ
ತೆರಳು ಭುವನಕೆ ತಕ್ಷಣದಿ ನೀನೆಂದ ಲೋಕಪತಿ [೩೧]

ಅಜಿತ ಪಾರಾಶರಿಯು ಕರುಣದಿ
ರಚಿಸಿರುವ ವರಸೂತ್ರನಿಕರಕೆ
ರಚಿಸು ಶುಭತಮ ಭಾಷ್ಯವನು ಸಜ್ಜನರನುದ್ಧರಿಸು |
ಉಚಿತವಲ್ಲವಿದನ್ಯ ಜನರಿಗೆ
ಶುಚಿ ಯಶವ ಶ್ರೇಯಸವ ಪೊಂದುವಿ
ವಚನವಿದ ಶ್ರೀಪತಿಯು ಪೇಳಿದ ಶಿರದಿ ಧರಿಸಿದರು [೩೨]

ಹೋಗಲಾಜ್ಞೆಯನಿತ್ತ ಯದುಸುತ
ನಾಗಿ ಜನಿಸಿದ ಹರಿಗೆ ಶಿರವನು
ಬಾಗಿ ಸಕಲವ ಶ್ರವಣಗೈದರು ಶ್ರುತಿಪತಿಗಳಿಂದ |
ಪೋಗಿಬರಲಪ್ಪಣೆಯ ಪಡೆದರು
ವೇಗದಲಿ ದಾಟಿದರು ಗಿರಿಗಳ
ಭೂಗಸುರತರು ನೋಡಿ ಶಿಷ್ಯರು ನೀಗಿದರು ಕ್ಲೇಶ [೩೩]

ದ್ವಿಜರು ಭಿಕ್ಷೆಯ ನೀಡಿದೆಲ್ಲವ
ತ್ಯಜಿಸದೆಲೆ ಭುಂಜಿಸಿ ಮಹಾಮತಿ
ವಿಜಯ ಪಡೆದರು ಆರುಶಾಸ್ತ್ರಗಳರಿತವರ ಗೆಲಿದು |
ನಿಜತನುವ ಬೇರೊಂದು ರೂಪವ
ಸೃಜಿಸುವಂದದಿ ಸೂತ್ರಭಾಷ್ಯವ
ಸೃಜಿಸಿ ಪೊರೆದರು ಸತ್ಯತೀರ್ಥರು ಬರೆದರಾಭಾಷ್ಯ [೩೪]

ಸರಿದು ಗೋದಾವರಿಯ ತಟದಲಿ
ಮುರಿದು ಷಟ್ಸಮಯಗಳ ಸುಲಭದಿ
ಶರಣು ಹೊಡೆಸಿದರೆಲ್ಲ ವಿದುಷರ ಸಭೆಸಭೆಗಳಲ್ಲಿ |
ಹಿರಿಯ ಶೋಭನಭಟ್ಟರಲಿ ಬಲು
ಸರಳತೆಯ ತೋರುತಲಿ ಭಾಷ್ಯದ
ತಿರುಳುಗಳ ತೋರಿದರು ಯತಿವರರಾತನಿಗೆ ದಯದಿ [೩೫]

ಕುಮತದೊಳು ಮತಿಲೀನರಚ್ಯುತ
ಪ್ರಮತಿಗಳ ಮತಿರೋಗ ತೊಲಗಿಸಿ
ವಿಮಲಮತಿಯನು ಕರುಣಿಸಲು ಬಲು ಶಾಶ್ವತವದಾಯ್ತು |
ಅಮಿತಸುಂದರಮೂರ್ತಿ ಗೋಕುಲ
ರಮಣನನು ಸ್ಥಾಪಿಸುವ ಯಜ್ಞವ
ಕ್ರಮದಿ ನಡೆಸಲನುಜ್ಞೆಯಿತ್ತರು ವಾಸುದೇವನಿಗೆ [೩೬]

ಒಂದು ದಿನ ಮಾರ್ಗದಲಿ ಬರುತಿರೆ
ನಿಂದ್ಯ ನರಪತಿ ನೆಲವನಗಿಯಲು
ನಂದಿತೀರ್ಥರಿಗಿತ್ತನಾಜ್ಞೆಯ ಒಂದನರಿಯದಲೆ |
ಹಿಂದಿನನುಭವಶೂನ್ಯರಿಗೆ ಹೇ
ಗೆಂದು ತೋರಲು ಭೂಮಿಯಗಿಯುತೆ
ನಿಂದನಾನೃಪ ವಿವಶನಾದನು ಮುಂದೆ ಸಾಗಿದರು
[೩೭]

ದಿವಿಜೆ ಗಂಗೆಯ ದಾಟಿ ಶಿಷ್ಯರ
ನಿವಹದಿಂದೊಡಗೂಡಿ ಬರುತಿರ
ಲಿವರ ಕೊಲ್ಲಲು ನೃಪನ ದೂತರು ಬಂದರೆದುರಿನಲಿ |
ವಿವಿಧ ಯುಕುತಿಗಳಿಂದ ತಡೆಯುತ
ಸವಿನುಡಿಯ ಗಾಂಭೀರ್ಯದಿಂದಲಿ
ಯವನ ನರಪತಿಯಿಂದ ಪೊಂದಿದರರ್ಧರಾಜ್ಯವನು [೩೮]

ಹೋದಹೋದೆಡೆಗಳಲಿ ಪರಿಪರಿ
ಬಾಧಿಸಿದ ಶತ್ರುಗಳ ಗೆಲಿಯುತ
ಬಾದರಾಯಣ ಶಿಲೆಯ ಪಡೆದರು ಧರ್ಮಸುತನಿಂದ |
ವೇದನಾಯಕನಾಜ್ಞೆಯಲಿ ಪರ
ಮಾದರವ ತೋರಿದರು ದಶಮತಿ
ಶೋಧಿಸಿದ ತಾತ್ಪರ್ಯಗಳ ಪೇಳಿದರು ಭಾರತಕೆ [೩೯]

ಹೊದಿಕೆವಸನವು ತೋಯದಂದದಿ
ನದಿಯ ಪ್ರವಾಹವ ದಾಟಿ ಬಂದರು
ಮೃದುಲೆ ಗಂಗೆಯು ಪೂಜಿಸಿದಳೀತನನು ಭಕುತಿಯಲಿ |
ಮುದಕೆ ಶಿಷ್ಯರ ವೃಂದವೆಲ್ಲವ
ಕದನದಲಿ ಕೆಡುಹಿದರು ಭಿಕ್ಷವ
ನೊದಗಿಸಿದ ಶಿವ ದ್ವಿಜನ ವೇಷದಿ ಗಾನಕುಶಲರಿಗೆ [೪೦]

ಪರಿಪರಿಯ ಲೀಲೆಗಳನೀಪರಿ ಚರಿಸುತಿರಲಾನಂದತೀರ್ಥರು
ವರನಿಗಮ-ಸೂತ್ರೇತಿಹಾಸಗಳರಿಯಲಾದರದಿ |
ನೆರೆದಿರುವ ಶಿಷ್ಯರ ಸಮೂಹಗ
ಳರಿಯುವಂದದಿ ಬೋಧಿಸುತ್ತಿರೆ
ಉರಗಪತಿ ಸನಕಾದಿಮುನಿಗಳ ಸಹಿತ ಕೇಳಿದನು [೪೧]

ಈಷಣದನು ನೋಡಿದರು ಗಗನದಿ
ಭೂಸುರರು ಪ್ರವಚನದ ಸಮಯದಿ
ಶೇಷ ತೆರಳಿದ ತನ್ನ ಭವನಕೆ ಮುನಿಜನರ ಸಹಿತ |
ಭಾಷ್ಯಪ್ರವಚನದಿಂದ ಲಾಭವಿ
ಶೇಷವೇನೆಂಬುದನು ಕೇಳಲು
ಶೇಷ ಯುಕುತಿಯ ವಿವರಿಸಿದ ಸನಕಾದಿ ಸಹಜರಿಗೆ [೪೨]

ತುಂಗಮತಿಗಳ ಶಾಸ್ತ್ರಗಳ ವ್ಯಾ
ಸಂಗಮಾಡುವ ಸುಜನನಿಕರಕೆ
ಮಂಗಳಾಂಗನು ಕೊಡುವ ತನ್ನಯ ಶಾಶ್ವತದ ಪದವ |
ಅಂಗನೆಯರೊಡಗೂಡಿ ದುಃಖದ
ಸಂಗವಿಲ್ಲದೆ ಪ್ರತಿಕ್ಷಣಗಳಲಿ
ಭಂಗಭಾರದ ಸುಖಗಳನುಭವಿಸುವರು ಮುಕುತಿಯಲಿ [೪೩]

ನೋಡುವರು ನಾರಾಯಣನ
ಸ್ತುತಿಮಾಡುವರು ಪರಮಾದರದಿ
ತಾವೀಡನರಿಯರು ಸುಂದರ ಸುಮಂಗಳನ ದರುಶನಕೆ |
ಮೂಡಿದಭಿಲಾಷೆಗಳು ತಕ್ಷಣ
ಕೈಗೂಡುವುದು ಹರಿಯಾಜ್ಞೆಯಿಂದಲಿ
ನೋಡಬೇಕೆನ್ನುವರನಾಕ್ಷಣ ತಂದುತೋರಿಸುವ [೪೪]

ಪ್ರಚುರಮತಿ ಕೇಸರಿಯದೀಪರಿ
ರಚಿಸುತಿರೆ ವ್ಯಾಖ್ಯಾನ ಗರ್ಜನೆ
ರುಚಿಸಲಾಗದೆ ಮಾಯಿನರಿಗಳು ನಡುಗಿದವು ಭಯದಿ |
ಶುಚಿಯ ನಡೆನುಡಿಶೂನ್ಯ ದುರ್ಜನ
ನಿಕರ ಚೋಳಜದ್ವೀಪಪುರಿಗಳ
ಭಜಿಸಿದರು ರಕ್ಷಿಸಲು ಮಾಯಾವಾದ ಸರಣಿಯನು [೪೫]

ದಿಟ್ಟಪವನನ ಸುತನ ಕೀರ್ತಿಗೆ
ಹೊಟ್ಟೆಯುರಿಯಿತು ದುರುಳಜನರಿಗೆ
ಕೆಟ್ಟಯೋಚನೆ ಮಾಡಿ ಪರಿಪರಿ ಪೀಡಿಸಿದರಿವರ |
ಶಿಷ್ಟಹರಿಭಕುತಾಗ್ರಣಿಯ
ತಾವಿಷ್ಟು ಪೀಡಿಸದಿರಲು ತಮಸಿಗೆ
ಕಟ್ಟುವುದು ಪಾಥೇಯವೆಂತೆಂದೀಪರಿಯ ನಡತೆ [೪೬]

ಗೆಲಿದು ಶಾರ್ದೂಲಾಖ್ಯ ವಿದುಶನ
ಅಲವಮತಿ ವೇದಗಳ ನಿಕರಕೆ
ಸುಲಭದಲಿ ವ್ಯಾಖ್ಯಾನ ತೋರಿದ ಸುಸ್ವರಗಳಿಂದ |
ಬಳಿಕ ನೀ ಪೇಳೆನಲು ಸ್ವರಗಳ
ತಿಳಿಯದೆಲೆ ಶಾರ್ದೂಲ ಪೇಳಲು
ಕುಳಿತ ಜನರಪಹಾಸದಿಂದತಿ ನಾಚಿದನು ದುರುಳ [೪೭]

ಪದುಮನಾಮಕನೋರ್ವ ದುರುಳನು
ತದನುಗನು ಪುಸ್ತಕಸಮೂಹವ
ಕದಿಯಲಿವರನು ನಿರ್ಭಯದಿ ಖಂಡಿಸಿದರಾಕ್ಷಣದಿ |
ಬೆದರಿದರು ದುರ್ಜನರು ವೇಗದಿ
ಚದರಿದರು ಮರೆಯಾಗೆ ವಿಸ್ತರ
ಹೃದಯದೇವಾಲಯವ ಸೇರಿದ ಪ್ರಾಗ್ಯವಾಟದಲಿ [೪೮]

ಪರಮಪತಿ ಭಕುತರನುದ್ಧರಿಸಲಿಕೆ
ನರಪತಿಯ ಪ್ರಾರ್ಥನೆಯ ತಂದಿಹ
ಪುರುಷನೋರ್ವನ ನುಡಿಯ ಲಾಲಿಸಿ ತೆರಳಿದರು ಮುದದಿ |
ಧರೆಯ ರವಿ ಸಂಚರಿಪ ತೆರದಲಿ
ಸರಿದು ಪಶ್ಚಿಮ ಪ್ರಾಂತದಲ್ಲಿಹ
ಸ್ಮರನವಲ್ಲಭನಾಲಯವ ಸೇರಿದರು ಗುರುವರರು [೪೯]

ನಿಶಿಯನಾಮಂದಿರದಿ ಕಳೆಯುತ
ಪಸರಿಸಲು ಜಯಸಿಂಹರಾಜನು
ಹಸನ ಭಕುತಿಯ ಭರದಿ ಬಂದೆದುರಿನಲಿ ನಮಿಸಿದನು |
ಅಸಮತೇಜರ ದರುಶನದಿ ಪರ
ವಶರು ಸಾಸಿರ ಜನರು ಬರುತಿರೆ
ಸುಸಮಯದಿ ಶ್ರೀವಿಷ್ಣುಮಂಗಳ ಬಳಿಗೆ ಸಾರಿದರು [೫೦]

ಉತ್ತಮರ ಲಕ್ಷಣಗಳಲಿ ಮೂ
ವತ್ತೆರಡು ಮಾದರಿಯ ತೋರುವ
ಮಸ್ತಕಾದಿನಖಾಂತ ಸೌಂದರ್ಯಗಳ ಬೆಳಗುತಲಿ |
ಶಿಸ್ತಿನಲಿ ಬರುತಿರುವ ಮೂರ್ತಿಯ
ಹತ್ತಿರದಿ ನೋಡಿದರು ಜನಗಳು
ಸ್ವಸ್ಥಮಾನಸದಿಂದ ಪೊಕ್ಕರು ದೇವನಿಲಯವನು [೫೧]

ಭವದ ತಾಪವ ಪರಿಹರಿಸಿ ಬಲು
ಜವದಿ ಮಂಗಳತತಿಯ ನೀಡುವ
ಭಗವದವತಾರಗಳ ಲೀಲಾಮೃತವನುಣಿಸಿದರು |
ಕವಿವರೇಣ್ಯ ತ್ರಿವಿಕ್ರಮಾರ್ಯನು
ಸವಿಯನರಿತು ಮಧ್ವಶಾಸ್ತ್ರದ
ಸುವಿನಯದಿ ಬೇಡಿದನು ಗುರುಗಳ ಚರಣದಾಸ್ಯವನು [೫೨]

ಋಣಿಯು ನಾನಿರೆ ನಿಮ್ಮ ಕರುಣಕೆ
ಮಿಣುಕುತಿರುವರು ಗ್ರಂಥಚೋರರು
ಕೆಣಕಲಾರರು ಮುಂದೆ ನಿಮ್ಮಯ ಸಹಚರರನೆಂದೂ |
ಗಣಿಸಲಾಗದು ಕುಂದುಕೊರತೆಯ
ತೃಣಕೆ ಸಮರೀಜನರು ನರಪತಿ
ವಿನಯದಲಿ ಬೇಡಲು ತ್ರಿವಿಕ್ರಮನನುಜಗ್-ಅದನಿತ್ತ [೫೩]

ಸಕಲಮಂಗಲದಾತ ಸುಜನಕೆ
ಸುಖದ ಲೇಶವ ಕೊಡನು ಕುಜನಕೆ
ಚಕಿತರಾದರು ನೋಡಲೀತನ ಮಧ್ಯಮದ ಜನರು |
ಅಖಿಲ ಸಮಯದಿ ಸ್ನಾನಜಪತಪ
ಸುಖಮಯದ ಶಾಸ್ತ್ರಗಳ ಪ್ರವಚನ
ವಿಕಸವಾದವು ಸುಜನನಿಕರಕೆ ಸಾಧುಕರ್ಮಗಳು [೫೪]

ಅರುಣನುದಯದಲೆದ್ದು ಗುರುಗಳು
ಹರುಷಮಾನಸದಿಂದ ಶ್ರೀಶನ
ಚರಣಕಮಲವ ಚಿತ್ತದಲಿ ಚಿಂತಿಸುತ ಸಂತತವು |
ಸರಿದು ಸೂರ್ಯನು ಪಶ್ಚಿಮಕೆ ತಾ
ಮರೆಯ ಪೊಂದುವತನಕ ಕರ್ಮವ
ಚರಿಸಿದರು ಗುರುವರರು ಸಕಲಾಚಾರ ಶಿಕ್ಷಕರು [೫೫]

ಸ್ನಾನಮಾಡಿ ತಟಾಕದಲಿ ಶುಚಿ
ಮಾನಸದ ಮಂದಿರದಿ ಶ್ರೀಶಗೆ
ಸಾನುರಾಗದಿ ಭಾವಕುಸುಮಗಳರ್ಪಿಸುತ ಮುದದಿ |
ಪ್ರಾಣಪತಿ ಹರಿಗರ್ಪಿಸಿದ ಪರ
ಮಾನ್ನವನು ಭುಂಜಿಸುತಲೀಪರಿ ಸ್ನಾನಜಪತಪ
ಪ್ರವಚನಗಳಿಂ ಕಾಲವನು ಕಳೆದು [೫೬]

ಹರಿಯು ಗುಣಗಣನಿಲಯ ಸಕಲವ
ನರಿತವನು ಜಗಗಳನ್ನು ಸೃಜಿಸುವ
ಪರಿಯ ತೋರುವ ಭಾಷ್ಯಭಾವವ ವಿವರಿಸುತ್ತಿರಲು |
ಉರುತರದ ಪಾಂಡಿತ್ಯಮದದಿಂ
ಧರೆತಲದಿ ಪ್ರಖ್ಯಾತರಿಹ ಒಂ
ದೆರಡು ವಿಕ್ರಮನಾಮಕರು ಕೇಳಿದರು ಪ್ರವಚನವ [೫೭]

ವಾದಸರಣಿಯು ಮುಂದರಿದು ಹದಿ
ನೈದು ದಿನಗಳು ಕಳೆದವೀತನು
ವಾದದಲ್ಲೀಡಾಡಿದ ಮಹಾಯುಕುತಿಯಸ್ತ್ರಗಳ |
ಮೋದತೀರ್ಥರು ಸದೆಯ ಬಡಿದರು
ವೇದಯುಕುತಿಗಳಿಂದಲಾಕ್ಷಣ
ಪಾದಕೆರಗುತ ವಿಕ್ರಮಾರ್ಯನು ಬೇಡಿದನು ದಾಸ್ಯ [೫೮]

ಮಧ್ವತೀರ್ಥರನುಜ್ಞೆ ಪಡೆಯುತ ಶುದ್ಧತತ್ವಗಳನ್ನು ತೋರಲು
ಮಧ್ವ ಭಾಷ್ಯಕೆ ಟೀಕೆ ತತ್ವಪ್ರದೀಪ ರಚಿಸಿದರು |
ಶುದ್ಧಸಿದ್ಧಾಂತಗಳ ನ್ಯಾಯದ
ಪದ್ಧತಿಗಳನ್ನು ಬಿಚ್ಚಿ ತೋರಿ ಪ್ರ
ಸಿದ್ಧತಮರೆಂದೆನಿಸಿದರು ವ್ಯಾಖ್ಯಾನ ರಚಿಸಿದರು [೫೯]

ವಿವಿಧ ಸಂಸಾರಿಕದ ಮೋಹವು
ಸವಿದು ವರವೈರಾಗ್ಯ ಪೊಂದುತ
ಸುವಿನಯದಿ ಪ್ರಾರ್ಥಿಸಿದ ಸಹಜನ ಯತಿವರನ ಮಾಡಿ |
ಭುವಿಗೆಭೂಷಣ ಪದುಮನಾಭರು
ಕವಿವರರು ಯತಿವರರನೇಕರು
ಪ್ರವಹಿಸಿದರನುದಿನದಿ ಧರೆಯಲಿ ಜ್ಞಾನಭಕುತಿಯನು [೬೦]

ಸ್ಮರಣಮಾತ್ರದಿ ಸಕಲ ದುರಿತವ
ತರಿದು ಶುಭಗಳನೀವ ಚರಿತೆಯ
ಪರಿಪರಿಯ ವಿಧಗಳಲಿ ಭಕುತರು ವರ್ಣಿಸುತ್ತಿರಲು |
ದುರುಳ ವೃಷಲನರಾಧಿಪನು ಬಲು
ಗರುವದಿಂ ದೂಷಿಸಲು ವೇದವ
ಕರತಲದಿ ತೋರಿದರು ನಿಗಮಪ್ರಮಾಣ ವಚನವನು [೬೧]

ದೀಪವಾರಲು ಪಾಠಸಮಯದಿ
ತಾಪಸರು ತಮ್ಮಂಘಿಯುಗುರಿನ
ದೀಪದಲಿ ಬೆಳಗಿದರು ಪ್ರವಚನಗೈದರೊಂದುದಿನ |
ಸ್ಥಾಪಿಸಿದರತಿ ದೊಡ್ಡಶಿಲೆಯ ಸ್ವ
ರೂಪ ಬಲದಲಿ ತುಂಗೆಯಲಿ ಸೂ
ರ್ಯೋಪರಾಗದಿ ಸ್ನಾನಗೈಯ್ಯಲು ಜಲಧಿಗೈದಿದರು [೬೨]

ಜಲಧಿಯಲಿ ಮಜ್ಜನವ ಗೈದರು
ತಿಳಿಸಿದರು ಶ್ರುತಿತತಿಗಳರ್ಥವ
ಛಲದಿ ಕಂಠವ ಪಿಡಿದ ದುರುಳನ ನೆಲಕೆ ಕೆಡಹಿದರು |
ಹಲವು ವಿಧದೈಶ್ವರ್ಯಗಳ ತಾ
ಬಳಿಯ ಜನರಿಗೆ ತೋರಿದರು ಸುರ
ನಿಲಯವೈಭವಗಳನು ಜೀರ್ಣೋದ್ಧಾರ ಮಾಡಿದರು [೬೩]

ವೃಷಲನೋರ್ವನು ಕೊಲ್ಲಬರುತಿರೆ
ಹೊಸರವಿಯ ತೆರದಲ್ಲಿ ವಿಸ್ಮಯ
ವೆಸಗಿದರು ಶ್ರೀಕೃಷ್ಣನ ಸುಧಾರ್ಣವವ ರಚಿಸಿದರು |
ಪ್ರಸರಿಸಿತು ಸತ್ಕೀರ್ತಿ ಜಗದಲಿ
ರಸದ ಗುಣಗಾನದಲಿ ದಿವಿಜರು
ಕುಸುಮಗಳ ಸುರಿಮಳೆಯಗೈದರು ನಂದಿ ಮುನಿವರಗೆ [೬೪]

ಪ್ರಚುರಮತಿ ವಿಜಯಗಳ ಸಾರವ
ರಚಿಸಿದೆನ್ನಯ ಪರಮ ಗುರುಗಳು
ವಚನಶುದ್ಧಿಯನಿತ್ತು ನುಡಿಸಿದ ತೆರದಿ ನುಡಿದಿಹೆನು |
ಶುಚಿಮನದಿ ಸುಸ್ವರದಿ ಪಾಡಲು
ಪ್ರಚುರವಾಗಲಿ ಶಾಂತಿಸುಖಗಳು
ಭುಜಪಿಡಿದು ಮೇಲೆತ್ತಿ ಸಲಹುವ ಗುರುವರ ಪ್ರಸನ್ನ [೬೫]

|| ಶ್ರೀ ಕೃಷ್ಣಾರ್ಪಣಮಸ್ತು ||


SrI sumadhvavijaya sArasaMgraha

lakumivallaBanAj~jeyanu tA
mukuTadali vahisutali suravara
nikaravaMdita caraNa kapi rUpavane tA tALi |
lakumi sItege rAmacaritega
LaKiladiM saMtasava puTTisi
SakutiyiMdali vanadhi laMGisi raGuvarana namisi [1]

vanadhiyali sEtuveya kaTTuta
danujaranu sadebaDidu daSaratha
tanayasati nIDida sumAlikeyanugrahava paDedu |
vanajanilayaLa vallaBana pada
vanajavanu hRudayadali saMtata
mananadali kiMpUruShadaliha hanumananu Bajipe [2]

pAMDusati mArutanu muTTalu
gaMDutanayana paDeyalASiSu KaMDisitu
SataSRuMga giriyanu tanuva saMgadali |
taMDataMDadi rAjakuvarara
puMDanaDagisi dRupada dharaNI
maMDalESana kuvari karakamalagaLa tA gelida [3]

arisamUhava posaki tA yadu
varana caraNAMburuha madhukara
nuru parAkramavaritu ditijaru matsaradi uridu |
dharaNiyali puTTidaru durmata
saraNi haraDuta sEDanesagalu
marudanaMSana BImasEnana caraNavE SaraNu [4]

nijamatiya dinakaranu muLugalu
ajitanAj~jeya paDeda marudanu
RujutapagaLAcarisi parama viSuddharAgidda |
sujanaSEKara madhyagEha
dvijavarana satiyudaradali tA
bijayagaidanu horageDahi bEroMdanAkShaNadi [5]

asama mUvatteraDu lakShaNa
SiSu SarIrava pokkanAkShaNa
bisuTanA parajIvavanu asupatiyu tA horage |
asuranikarake KEda suKasaM
tasavu sajjanatatige I pari
susamayavideMbudanu nuDiyitu dEvaduMduBiyu [6]

gOpradAyaka vipravaryage
kShipradali supraj~jeyittanu
svapraBAvadi nijajanara grahaBayava nIgisuta |
viprasati horagiralu rOdana
tappisalu nija sahajeyuNisida
praprapakva kulittha BuMjisi jIrNisida kShaNadi [7]

mRuduLa kalaBAShaNadi svajanake
mudavanIyutaloMdu dina
vaididanu vanavanu vRuShaBa bAlava piDidu saMtasadi |
bedarisida RuNakoTTa dhanikana
hRudaya karaguva teradi suMdara
vadana darSanavitta vAyukumAra rakShisali [8]

jananijanakara sahita bAMdhava
janara gRuhakoMdu dina teraLida
janateyati saMBramadalirutire taraLa horahoraTa |
vanavanava saMcarisiyalliha
vanajanABana maMdiragaLali
daNivu kANade hariya namisuta sikkidanu pitage [9]

yAru ninage sahAyakaru I
GOravanadali pELenalu tA
tOridanu vanasadanavallaBa mArajanakananu |
sUri Sivananu gelidu saBeyali
cAruvaTuvenisida sakAladi
mArutana mUraneya rUpavu SrEyavanu koDali [10]

saridu barutire kollalOsuga
uragarUpiya daityananu vara
caraNakamalada lIleyali saMharisidanu kShaNadi |
suravarArcita caraNanAdaru
dharaNisurananu namisi vEdava
nariyuvaMdadi naTane mADida lOkaSikShakanu [11]

bAlalIlegaLalli bahutara
kAlavanu kaLeyuta vinOdadi
bAlanobbana ciratanada yAtaneya pariharisi |
Alayake teraLuva modalu guNa
SAli guruvanu namisi tanna kRu
pAlavadi paralOka sAdhaka hari Bakutiyitta [12]

dharaNiBava ditisutara daMDise
paramahaMsASramava paDeyalu
gurugaLanu huDukutali horaTanu sakalavanu tyajisi |
paramamaMgaLa vEdijeya kara
sarasijadi doretududa BuMjisi
karaNa Suddiyallidda yativaranOlagake baMda [13]

tALidare yatyASramava nI
pAlakaru yAremage Buviyali
lAlisemmaya vacanaveMdaru janakajananiyaru |
pAlisuvanennanuja nimmanu
kELadiddare enna nuDiyanu
tALalAriri satata duHKavaneMda dRuDhamanadi [14]

guruvarENyara karasarOjadi
paramahaMsASramava poMduta
karedarAtana dharesuraru varanigamagaLa tatiya |
haruShadali vara pUrNabOdhA
Bidadi guNagaLanaritu jIvara
varavara parimita mAtra praNava japAdhikArigaLu [15]

rajatapuravallaBana sEvege
vijayaveMbuda tOruvaMdadi
BujapiDidu tA koTTanItanu acyutEkSharige |
ajitanAj~jeya paDeda suranadi
bijayisidaLAsthaLake kIrtiya
dhvajavu hAritu vAdadali sujanArti mareyAytu [16]

vEdavidyA rAjyadalli para mAdaradalaBiShEkavItage
gaidaracyuta matigaLakhila yatIMdraroMdu dina |
bAdhabArada mOdavanu dina
sAdhisuva SAstragaLa racisalu
mOdatIrtha sunAmavivarige sArthakavadAytu [17]

hEyavAdagaLarita kelaranu
nyAyaSAstradi caturaranu hosa
nyAyagaLa tOrutali geddaru atisulaBadalli |
jIyapUrNapramati dhareyoLa
jEyarenisida buddhisAgara
prEyanItage vAdisiMhana gelidu tA mereda [18]

aguNanISvara ISajIvaru
vigataBEdaru jagadiMtenitu
bogaLutiha mAyigaLa BAShyada dOShagaLa tOri |
sugama sUtrArthagaLa vivarisi
svagurusahitadi horaTu dakShiNa
diganu saMcarisuta baMdaru viShNumaMgaLake [19]

maMgaLAMgana caraNakeraguta
aMguTada jAThara praBAvadi
tuMgakadalInikaragaLa BuMjisuta BikSheyali |
aMgasarasijanABanu SrI
raMgaramaNana namisi BUsura
saMGadiMdAdarava paDeyuta mereda saBegaLali [20]

Caladi saBeyali budhajanaMgaLu
halavu vidha praSnegaLa mADalu
sulaBavAduttaragaLittaru tiLiyabayasidaru |
halavu vidhadarthagaLavaru SrI
nilaya nAmada sAsiragaLige
alavabOdharu pELalati vismayadi namisidaru [21]

oMdu dina sadasinapAlA
eMdiruva padadarthavanu balu
suMdarAMgiyaLeMdu nuDidaru naMbikeyu baralu |
muMde baraliha vipravarananu
saMdhisuta kELiridararthava
neMdu sarvaj~jateya janaroLu prakaTapaDisidaru [22]

satiya saBeyali sIre seLedati
KatiyapaDisida duruLa danujara
tatiya savaruva GOradIkSheya baMdhanada teradi |
Srutitatiyu mAyAKyavAdada
citeyalirutire sujanaSaraNaru
ditisutara nASanada kaMkaNakaTTidaru kShaNadi [23]

himagiriya taladalli nelesiha
kamaleramaNana kaMDu vaMdisi
vimalamatigaLu gItegavara BAShyavanarpisalu |
himanilaya SRuMgadali badarI
druma buDadi rAjisuva vyAsA
Sramava sEralu teraLidaru hariyAj~jeyanusarisi [24]

tuhinagiritudiyalli rAjisu
tiha badariShaMDagaLa madhyadi
ahipatiya BOgadali ramipa SrIpatiya teradi |
bahuLa tEjava nODidaru BU
surara samIpake baralu tApasa
nivaha vismayadiMda nODidarAvarivareMdu [25]

tApasOttama bAdarAyaNa
rUpavanupama citsuKamayA
pAdamauLiya nODi paravaSarAgi maimaretu |
tApasara madhyadalli poLeyuva
rUpavidu mAnasadi nelesiha
SrIpatiyeMdaritu vismitarAdarAkShaNadi [26]

Bakutiyali bAgidaru Siravanu
sukRutaSAligaLAkShaNadi nagu
muKadiMda baMdettidaru vyAsaru prathama Bakutaranu |
Sukapitaru BakutAgraNigaLI
suKakarAliMganadalirutire
prakaTavAyitu ravisuteya suranadiya saMgamavu [27]

tanaya SukanigU doreyadiha
lAlaneya paDeda mahAtmaranu ati
vinayadiMdAdarisidaru munijanaru vismayadi |
vanajasaMBava tanage priyatama
janake harisadanadaliruva pari
munivararu yativararu beLagidarASramavanella [28]

kuSalabuddhiya asama pratiBeyu
hosatereda praBeyiMdaloppuva
daSamatiya daruSanadi janatege mUDitaccariyu |
asupatigaLAdaradi SAstrada
rasava BuMjisi gurusahita mA
nasa vikAsadi horaTu sEridarASramAMtarava [29]

thaLathaLisutiha dhUmavarjita
jvalanadaMtiha tApasAkRuti
kuLitiruvudanu nODi nayana vikAsa poMdidaru |
hoLeyitAkShaNa Ita nigamA
vaLiya rakShisidAtaneMbudu
halavu vidhadavatAragaLa ciMtisuta namisidaru [30]

eraDu harirUpagaLa baLiyali
paramaharuShAMBudiyalirutire
dorakadIsuKaveMbudaritaru mUru lOkadali |
ariyadaj~jAnigaLu racisida
duruLa BAShyava KaMDisuvudake
teraLu Buvanake takShaNadi nIneMda lOkapati [31]

ajita pArASariyu karuNadi
racisiruva varasUtranikarake
racisu SuBatama BAShyavanu sajjanaranuddharisu |
ucitavallavidanya janarige
Suci yaSava SrEyasava poMduvi
vacanavida SrIpatiyu pELida Siradi dharisidaru [32]

hOgalAj~jeyanitta yadusuta
nAgi janisida harige Siravanu
bAgi sakalava SravaNagaidaru SrutipatigaLiMda |
pOgibaralappaNeya paDedaru
vEgadali dATidaru girigaLa
BUgasurataru nODi SiShyaru nIgidaru klESa [33]

dvijaru BikSheya nIDidellava
tyajisadele BuMjisi mahAmati
vijaya paDedaru AruSAstragaLaritavara gelidu |
nijatanuva bEroMdu rUpava
sRujisuvaMdadi sUtraBAShyava
sRujisi poredaru satyatIrtharu baredarABAShya [34]

saridu gOdAvariya taTadali
muridu ShaTsamayagaLa sulaBadi
SaraNu hoDesidarella viduShara saBesaBegaLalli |
hiriya SOBanaBaTTarali balu
saraLateya tOrutali BAShyada
tiruLugaLa tOridaru yativararAtanige dayadi [35]

kumatadoLu matilInaracyuta
pramatigaLa matirOga tolagisi
vimalamatiyanu karuNisalu balu SASvatavadAytu |
amitasuMdaramUrti gOkula
ramaNananu sthApisuva yaj~java
kramadi naDesalanuj~jeyittaru vAsudEvanige [36]

oMdu dina mArgadali barutire
niMdya narapati nelavanagiyalu
naMditIrtharigittanAj~jeya oMdanariyadale |
hiMdinanuBavaSUnyarige hE
geMdu tOralu BUmiyagiyute
niMdanAnRupa vivaSanAdanu muMde sAgidaru
[37]

divije gaMgeya dATi SiShyara
nivahadiMdoDagUDi barutira
livara kollalu nRupana dUtaru baMdaredurinali |
vividha yukutigaLiMda taDeyuta
savinuDiya gAMBIryadiMdali
yavana narapatiyiMda poMdidarardharAjyavanu [38]

hOdahOdeDegaLali paripari
bAdhisida SatrugaLa geliyuta
bAdarAyaNa Sileya paDedaru dharmasutaniMda |
vEdanAyakanAj~jeyali para
mAdarava tOridaru daSamati
SOdhisida tAtparyagaLa pELidaru BAratake [39]

hodikevasanavu tOyadaMdadi
nadiya pravAhava dATi baMdaru
mRudule gaMgeyu pUjisidaLItananu Bakutiyali |
mudake SiShyara vRuMdavellava
kadanadali keDuhidaru BikShava
nodagisida Siva dvijana vEShadi gAnakuSalarige [40]

paripariya lIlegaLanIpari carisutiralAnaMdatIrtharu
varanigama-sUtrEtihAsagaLariyalAdaradi |
nerediruva SiShyara samUhaga
LariyuvaMdadi bOdhisuttire
uragapati sanakAdimunigaLa sahita kELidanu [41]

IShaNadanu nODidaru gaganadi
BUsuraru pravacanada samayadi
SESha teraLida tanna Bavanake munijanara sahita |
BAShyapravacanadiMda lABavi
SEShavEneMbudanu kELalu
SESha yukutiya vivarisida sanakAdi sahajarige [42]

tuMgamatigaLa SAstragaLa vyA
saMgamADuva sujananikarake
maMgaLAMganu koDuva tannaya SASvatada padava |
aMganeyaroDagUDi duHKada
saMgavillade pratikShaNagaLali
BaMgaBArada suKagaLanuBavisuvaru mukutiyali [43]

nODuvaru nArAyaNana
stutimADuvaru paramAdaradi
tAvIDanariyaru suMdara sumaMgaLana daruSanake |
mUDidaBilAShegaLu takShaNa
kaigUDuvudu hariyAj~jeyiMdali
nODabEkennuvaranAkShaNa taMdutOrisuva [44]

pracuramati kEsariyadIpari
racisutire vyAKyAna garjane
rucisalAgade mAyinarigaLu naDugidavu Bayadi |
Suciya naDenuDiSUnya durjana
nikara cOLajadvIpapurigaLa
Bajisidaru rakShisalu mAyAvAda saraNiyanu [45]

diTTapavanana sutana kIrtige
hoTTeyuriyitu duruLajanarige
keTTayOcane mADi paripari pIDisidarivara |
SiShTahariBakutAgraNiya
tAviShTu pIDisadiralu tamasige
kaTTuvudu pAthEyaveMteMdIpariya naDate [46]

gelidu SArdUlAKya viduSana
alavamati vEdagaLa nikarake
sulaBadali vyAKyAna tOrida susvaragaLiMda |
baLika nI pELenalu svaragaLa
tiLiyadele SArdUla pELalu
kuLita janarapahAsadiMdati nAcidanu duruLa [47]

padumanAmakanOrva duruLanu
tadanuganu pustakasamUhava
kadiyalivaranu nirBayadi KaMDisidarAkShaNadi |
bedaridaru durjanaru vEgadi
cadaridaru mareyAge vistara
hRudayadEvAlayava sErida prAgyavATadali [48]

paramapati Bakutaranuddharisalike
narapatiya prArthaneya taMdiha
puruShanOrvana nuDiya lAlisi teraLidaru mudadi |
dhareya ravi saMcaripa teradali
saridu paScima prAMtadalliha
smaranavallaBanAlayava sEridaru guruvararu [49]

niSiyanAmaMdiradi kaLeyuta
pasarisalu jayasiMharAjanu
hasana Bakutiya Baradi baMdedurinali namisidanu |
asamatEjara daruSanadi para
vaSaru sAsira janaru barutire
susamayadi SrIviShNumaMgaLa baLige sAridaru [50]

uttamara lakShaNagaLali mU
vatteraDu mAdariya tOruva
mastakAdinaKAMta sauMdaryagaLa beLagutali |
Sistinali barutiruva mUrtiya
hattiradi nODidaru janagaLu
svasthamAnasadiMda pokkaru dEvanilayavanu [51]

Bavada tApava pariharisi balu
javadi maMgaLatatiya nIDuva
BagavadavatAragaLa lIlAmRutavanuNisidaru |
kavivarENya trivikramAryanu
saviyanaritu madhvaSAstrada
suvinayadi bEDidanu gurugaLa caraNadAsyavanu [52]

RuNiyu nAnire nimma karuNake
miNukutiruvaru graMthacOraru
keNakalAraru muMde nimmaya sahacararaneMdU |
gaNisalAgadu kuMdukorateya
tRuNake samarIjanaru narapati
vinayadali bEDalu trivikramananujag-adanitta [53]

sakalamaMgaladAta sujanake
suKada lESava koDanu kujanake
cakitarAdaru nODalItana madhyamada janaru |
aKila samayadi snAnajapatapa
suKamayada SAstragaLa pravacana
vikasavAdavu sujananikarake sAdhukarmagaLu [54]

aruNanudayadaleddu gurugaLu
haruShamAnasadiMda SrISana
caraNakamalava cittadali ciMtisuta saMtatavu |
saridu sUryanu paScimake tA
mareya poMduvatanaka karmava
charisidaru guruvararu sakalAchAra shikShakaru [55]

snAnamADi taTAkadali Suci
mAnasada maMdiradi SrISage
sAnurAgadi BAvakusumagaLarpisuta mudadi |
prANapati harigarpisida para
mAnnavanu BuMjisutalIpari snAnajapatapa
pravacanagaLiM kAlavanu kaLedu [56]

hariyu guNagaNanilaya sakalava
naritavanu jagagaLannu sRujisuva
pariya tOruva BAShyaBAvava vivarisuttiralu |
urutarada pAMDityamadadiM
dharetaladi praKyAtariha oM
deraDu vikramanAmakaru kELidaru pravacanava [57]

vAdasaraNiyu muMdaridu hadi
naidu dinagaLu kaLedavItanu
vAdadallIDADida mahAyukutiyastragaLa |
mOdatIrtharu sadeya baDidaru
vEdayukutigaLiMdalAkShaNa
pAdakeraguta vikramAryanu bEDidanu dAsya [58]

madhvatIrtharanuj~je paDeyuta SuddhatatvagaLannu tOralu
madhva BAShyake TIke tatvapradIpa racisidaru |
SuddhasiddhAMtagaLa nyAyada
paddhatigaLannu bicci tOri pra
siddhatamareMdenisidaru vyAKyAna racisidaru [59]

vividha saMsArikada mOhavu
savidu varavairAgya poMduta
suvinayadi prArthisida sahajana yativarana mADi |
BuvigeBUShaNa padumanABaru
kavivararu yativararanEkaru
pravahisidaranudinadi dhareyali j~jAnaBakutiyanu [60]

smaraNamAtradi sakala duritava
taridu SuBagaLanIva cariteya
paripariya vidhagaLali Bakutaru varNisuttiralu |
duruLa vRuShalanarAdhipanu balu
garuvadiM dUShisalu vEdava
karataladi tOridaru nigamapramANa vacanavanu [61]

dIpavAralu pAThasamayadi
tApasaru tammaMGiyugurina
dIpadali beLagidaru pravacanagaidaroMdudina |
sthApisidarati doDDaSileya sva
rUpa baladali tuMgeyali sU
ryOparAgadi snAnagaiyyalu jaladhigaididaru [62]

jaladhiyali majjanava gaidaru
tiLisidaru SrutitatigaLarthava
Caladi kaMThava piDida duruLana nelake keDahidaru |
halavu vidhadaiSvaryagaLa tA
baLiya janarige tOridaru sura
nilayavaiBavagaLanu jIrNOddhAra mADidaru [63]

vRuShalanOrvanu kollabarutire
hosaraviya teradalli vismaya
vesagidaru SrIkRuShNana sudhArNavava racisidaru |
prasarisitu satkIrti jagadali
rasada guNagAnadali divijaru
kusumagaLa surimaLeyagaidaru naMdi munivarage [64]

pracuramati vijayagaLa sArava
racisidennaya parama gurugaLu
vacanaSuddhiyanittu nuDisida teradi nuDidihenu |
Sucimanadi susvaradi pADalu
pracuravAgali SAMtisuKagaLu
BujapiDidu mEletti salahuva guruvara prasanna [65]

|| shrI kRuShNArpaNamastu ||

Leave a Reply

Your email address will not be published. Required fields are marked *

You might also like

error: Content is protected !!