Composer : Shri Kakhandaki Krishna dasaru
ಜಯದೇವಿ ಜಯದೇವಿ ಜಯ ಭಗವದ್ಗೀತೆ |
ಶ್ರಯ ಸುಖದಾಯಕ ಮಾತೇ ಶೃತಿ ಸ್ಮೃತಿ ವಿಖ್ಯಾತೇ (ಪ)
ಮೋಹ ಕಡಲೋಳಗರ್ಜುನ ಮುಳುಗುತ ತೇಲುತಲಿ |
ಸೋಹ್ಯವ ಕಾಣದೆ ತನ್ನೊಳು ತಾನೇ ಮರೆದಿರಲೀ |
ಶ್ರೀಹರಿ ಮುಖದಿಂದುದಿಸಿ ಬೋಧ ಪ್ರತಾಪದಲೀ |
ಮಹಾ ಸುಜ್ಞಾನದ ತೆಪ್ಪದಿ ದಾಟಿಸಿದವನಿಯಲಿ [೧]
ಅಂದಿಗಿಂದಿಗೆ ಋಷಿ ಮುನಿ ಸಜ್ಜನ ಮೊದಲಾಗಿ |
ಕುಂದದಿ ಪಂಡಿತರೆಲ್ಲರು ಮತಿ ಯುಕ್ತಿಯಲೊದಗಿ |
ಸುಂದರ ಟೀಕೆಯ ಮಾಡುತ ಪಾಡುತ ಅನುವಾಗಿ |
ಚಂದದಿ ನಿಂತರು ಅನುಭವದಲಿ ವಿಸ್ಮಿತರಾಗಿ [೨]
ಆವನು ಭಾವದಿ ಪೂಜಿಸಿ ಓದಿಸಿ ಕೇಳುವನು|
ಸಾವಿರ ಸಾಧನವೇತಕೆ ಜೀವನ್ಮುಕ್ತವನು |
ದೇವ ಮನುಜರಿಗೆ ತಿಳಿಯದು ಪದಪದ ಮಹಿಮೆಯನು |
ಆವಗು ಸ್ಮರಿಸುವ ಮಹೀಪತಿ ನಂದನು ನಿಮ್ಮವನು [೩]
jayadEvi jayadEvi jaya BagavadgIte |
Sraya suKadAyaka mAtE SRuti smRuti viKyAtE (pa)
mOha kaDalOLagarjuna muLuguta tElutali |
sOhyava kANade tannoLu tAnE marediralI |
SrIhari muKadiMdudisi bOdha pratApadalI |
mahA suj~jAnada teppadi dATisidavaniyali [1]
aMdigiMdige RuShi muni sajjana modalAgi |
kuMdadi paMDitarellaru mati yuktiyalodagi |
suMdara TIkeya mADuta pADuta anuvAgi |
caMdadi niMtaru anuBavadali vismitarAgi [2]
Avanu BAvadi pUjisi Odisi kELuvanu|
sAvira sAdhanavEtake jIvanmuktavanu |
dEva manujarige tiLiyadu padapada mahimeyanu |
Avagu smarisuva mahIpati naMdanu nimmavanu [3]
Leave a Reply