Sugunendra teertha

Composer : Shri R K Padmanabha

ಸುಗುಣೇಂದ್ರ ತೀರ್ಥ ಭಕ್ತಿಯ ತೀರ್ಥ
ಈ ತೀರ್ಥ ದರುಶನ ಮಾಡಿ ಪಡೆಯಿರೊ ಆನಂದ [ಪ]

ಜಾತಿ ಭೇದವಿಲ್ಲ ಧರ್ಮ ಭೇದವಿಲ್ಲ
ಎಲ್ಲ ಭಕ್ತರನು ಪ್ರೀತಿಯಿಂ ಹರಸುವ [ಅ.ಪ]

ಜ್ಞಾನಿಯಾಗ ಬೇಕಿಲ್ಲ ಧನಿಕನಾಗ ಬೇಕಿಲ್ಲ
ವೇದ ಶಾಸ್ತ್ರಗಳ ಓದಬೇಕಿಲ್ಲ
ಶುಧ್ಧ ಮನದಳೊಮ್ಮೆ ಸುಗುಣೇಂದ್ರಾ ಎಂದರೆ ಸಾಕು
ಮಾಯವಗುವುದು ಮನದ ದುಗುಡಗಳು
ಬನ್ನಿ ನಮಿಸೋಣ ಮತ್ತೆ ಪದ್ಮನಾಭ ದಾಸನ ಕೂಡಿ ||


suguNEMdra tIrtha Baktiya tIrtha
I tIrtha darushana mADi paDeyiro AnaMda [pa]

jAti BEdavilla dharma BEdavilla
ella Baktaranu prItiyiM harasuva [a.pa]

j~jAniyAga bEkilla dhanikanAga bEkilla
vEda SAstragaLa OdabEkilla
Sudhdha manadaLomme suguNEMdrA eMdare sAku
mAyavaguvudu manada duguDagaLu
banni namisONa matte padmanABa dAsana kUDi ||

Leave a Reply

Your email address will not be published. Required fields are marked *

You might also like

error: Content is protected !!