Composer : Shri Uragadri vittala dasaru
ಕಂಟಕವ ಪರಿಹರಿಸೊ ಶ್ರೀಕಂಠ ಮೂರುತಿಯೇ [ಪ]
ಬಂಟನೆಂದೆನಿಸೆನ್ನ ವೈಕುಂಠ ಮೂರುತಿಗೇ [ಅ.ಪ]
ತಂಟೆ ಸಂಸಾರದ ಲಂಪಟದಲೆನ್ನ ಮನ
ಮರ್ಕಟದ ತೆರದಿ ಪರ್ಯಟನ ಮಾಡೆ
ಅಂಟಿ ಕೊಂಡಿಹ ಈ ಭವಾಟವಿಯ ದಾಂಟಿಸುವೆ
ನೆಂಟ ನೀನಹುದಯ್ಯ ಶಿತಿಕಂಠ ದೇವಾ (೧)
ನಿರ್ಜರೇಶನ ಬಿಂಬ ಮೂರ್ಜಗದೊಳಗೆಲ್ಲ
ಧೂರ್ಜಟಯೆ ನೀನೆ ಭವ ವರ್ಜಿತನ ಮಾಡೋ
ದುರ್ಜಯವು ಎನ್ನ ಮನ ಆರ್ಜಿಸದೆ ಹರಿ ಭಕುತಿ
ಮೂರ್ಜಗದ ಪತಿ ಜನಾರ್ದನನೊಳ್ ಮನ ನಿಲ್ಲಿಸೋ (೨)
ತ್ರ್ಯಂಬಕನೆ ಎನ್ನ ಮನದಂಬರದೋಳ್ ಹರಿಪಾದ
ಅಂಬುರುಹ ತೋರಯ್ಯ ಶಂಭೋ ಮಹಾದೇವಾ
ಕುಂಭಿಣಿಯೊಳು ಒಂದೆ ಇಂಬು ತೋರದು ಎನಗೆ
ಶಂಬರಾಂತಕ ವೈರಿ ಭವಭಯ ಹಾರೀ (೩)
ವಾಮದೇವನೆ ಕಾಯೊ ತಾಮಸ ಮತಿ ಹರಿಸಿ
ಶ್ರೀ ಮನೋಹರನಲ್ಲಿ ಸನ್ಮನವ ನೀಡೋ
ಸೋಮಶೇಖರ ಸುರ ಸ್ತೋಮದಲಿ ನಿನ್ನಂಥ
ಪ್ರೇಮಿಗಳ ನಾ ಕಾಣೆ ಉಮೆಯರಸ ಸಲಹಯ್ಯ (೪)
ಶಿಕ್ಷಕನು ನೀ ಜ್ಞಾನ ಚಕ್ಷುವ ನೀಡು ವಿರೂ
ಪಾಕ್ಷಮೂರುತಿ ಶ್ರೀ ವೇಂಕಟೇಶನ ಭಕ್ತ
ಈ ಕ್ಷಿತಿಯೊಳ್ ಉರಗಾದ್ರಿವಾಸ ವಿಠಲನ ಪ್ರ
ತ್ಯಕ್ಷದಲಿ ನೋಳ್ಪ ಶ್ರೀ ತ್ರ್ಯಕ್ಷ ಮೂರುತಿಯೇ (೫)
kaMTakava parihariso SrIkaMTha mUrutiyE [pa]
baMTaneMdenisenna vaikuMTha mUrutigE [a.pa]
taMTe saMsArada laMpaTadalenna mana
markaTada teradi paryaTana mADe
aMTi koMDiha I BavATaviya dAMTisuve
neMTa nInahudayya SitikaMTha dEvA (1)
nirjarESana biMba mUrjagadoLagella
dhUrjaTaye nIne Bava varjitana mADO
durjayavu enna mana Arjisade hari Bakuti
mUrjagada pati janArdananoL mana nillisO (2)
tryaMbakane enna manadaMbaradOL haripAda
aMburuha tOrayya SaMBO mahAdEvA
kuMBiNiyoLu oMde iMbu tOradu enage
SaMbarAMtaka vairi BavaBaya hArI (3)
vAmadEvane kAyo tAmasa mati harisi
SrI manOharanalli sanmanava nIDO
sOmaSEKara sura stOmadali ninnaMtha
prEmigaLa nA kANe umeyarasa salahayya (4)
SikShakanu nI j~jAna cakShuva nIDu virU
pAkShamUruti SrI vEMkaTESana Bakta
I kShitiyoL uragAdrivAsa viThalana pra
tyakShadali nOLpa SrI tryakSha mUrutiyE (5)
Leave a Reply