Composer : Shri Bagepalli Sheshadasaru
ಇಷ್ಟೇ ಬೇಡುವೆ ನಾ ನಿನಗೆ ಕರವ ಮುಗಿದು ||ಪ||
ಅಷ್ಟು ಸೌಭಾಗ್ಯ ಕೊಟ್ಟು ನೀ ಎನ್ನ
ಕಷ್ಟ ಬಿಡಿಸೆಂದು ಬೇಡೆನೋ ಕೃಷ್ಣರಾಯ ||೧||
ಸೃಷ್ಟಿಗೊಡೆಯ ನಿನ್ನಿಷ್ಟವಿದ್ದಂತಾಗಲಿ
ಶಿಷ್ಟ ಜನರ ಸಂಗ ಕೊಟ್ಟು ರಕ್ಷಿಸು ಎಂದು ||೨||
ಜ್ಞಾನಿಗಳರಸ ಜಾಣ ಪ್ರಾಣನಾಥವಿಠಲರಾಯ
ಸಾನುರಾಗದಿ ನಿನ್ನ ಧ್ಯಾನ ಕೊಟ್ಟು ಬಹು
ಮಾನಿಯೆಂದೆನಿಸೆಂದು ||೩||
iShTE bEDuve nA ninage karava mugidu ||pa||
aShTu sauBAgya koTTu nI enna
kaShTa biDiseMdu bEDenO kRuShNarAya ||1||
sRuShTigoDeya ninniShTaviddaMtAgali
SiShTa janara saMga koTTu rakShisu eMdu ||2||
j~jAnigaLarasa jANa prANanAthaviThalarAya
sAnurAgadi ninna dhyAna koTTu bahu
mAniyeMdeniseMdu ||3||
Leave a Reply