Hariye enagaru gatiyo

Composer : Shri Prasannavenkata dasaru

By Smt.Shubhalakshmi Rao

ಹರಿಯೇ ಎನಗಾರು ಗತಿಯೊ ನೀನಲ್ಲದೆ [ಪ]

ಹಿಂದಿನಾಪತ್ತು ಮರೆತೆ ಇಂದು ಮಾಯದಿ ಬೆರೆತೆ
ಒಂದುಗೂಡಿದವು ಅಘ ಮುಂದಿನರುಹಿಲ್ಲ
ಹಗಲು ಅಶನದ ಕೃತ್ಯ ಇರುಳು ನಿದ್ರೆಯ ಮಬ್ಬು
ನಿಗಡಕಾಮನ ತಡೆ ತಗಲು ಬಿತ್ತೊ ರಂಗಾ [೧]

ಅತ್ತಿತ್ತ ಸುತ್ತುವನಕ ಹೊತ್ತು ಹೋಯಿತು ಯಮನ
ಮುತ್ತಿಗೆ ಬಿದ್ದಾಗ ಮತ್ತಾರಿಲ್ಲೊ ಸ್ವಾಮಿ
ಅಜ್ಞಾನೆಂಬಹಿ ಕಚ್ಚಿ ಯಜ್ಞೇಶ
ನಿನ್ನಂಘ್ರಿ ಸಂಜ್ಞವಿಲ್ಲದೆ ದು:ಖ
ಮಗ್ನನಾದೆನಲ್ಲೊ [೨]

ಶ್ರೀ ಪ್ರಸನ್ವೆಂಕಟೇಶ ತಾಪತ್ರಯ ವಿನಾಶ
ನೀ ಪಾಲಿಸಯ್ಯ ವಿಶ್ವವ್ಯಾಪಕ ಸ್ವಾಮಿ [೩]


hariyE enagAru gatiyo nInallade [pa]

hiMdinApattu marete iMdu mAyadi berete
oMdugUDidavu aGa muMdinaruhilla
hagalu aSanada kRutya iruLu nidreya mabbu
nigaDakAmana taDe tagalu bitto raMgA [1]

attitta suttuvanaka hottu hOyitu yamana
muttige biddAga mattArillo svAmi
aj~jAneMbahi kacci yaj~jESa
ninnaMGri saMj~javillade du:Ka
magnanAdenallo [2]

SrI prasanveMkaTESa tApatraya vinASa
nI pAlisayya viSvavyApaka svAmi [3]

Leave a Reply

Your email address will not be published. Required fields are marked *

You might also like

error: Content is protected !!