Composer : Shri Varadesha vittala
ದಾಸನೆನಿಸು ಜೀಯಾ ಶ್ರೀ ವರದೇಶ ವಿಠಲರಾಯಾ
ದಾಸರಥಿಯೆ ಯನ್ನಾಶೆ ತಳೆದು ನಿರ್ದೋಷನೆನಿಸಿ
ಬಹು ಮೀಸಲು ಮನವಿತ್ತು [ಪ]
ವರದೇಂದ್ರರ ಆಜ್ಞಾದಿಂದಲಿ
ಗುರುವರ ಮಹಾಪ್ರಾಜ್ಞಾ
ವರದೇಶ ವಿಠಲೆಂಬ ಗುರುತಿನ ಮುದ್ರಿಕೆ
ಪರಮ ಪಾಮರಗೆ ತ್ವರ ಕರುಣಿಸಿದಕೆ [೧]
ಜ್ಞಾನ ಶೂನ್ಯ ನಾನು ಸರ್ವದ
ಹೀನ ವಿಷಯ – ರತನು
ವಾನರನ ತರದಿ ಮಾಣಿಕೆಂಬ ತೆರ
ಹೀನನೆನಿಸದಲೆ ಪೋಣಿಸು ಸನ್ಮತಿ [೨]
ಏಸು ಪೇಳಲಿನ್ನಾ ಶ್ರೀ ವರ-
ದೇಶ ವಿಠಲ ನಿನ್ನಾ
ದಾಸರ ವಚನಕೆ ದೋಷ ಬಾರದಂತೆ
ಲೇಸು ಭಕುತಿ ಜ್ಞಾನ ದಾಸ್ಯವಿತ್ತು ತವ [೩]
dAsanenisu jIyA SrI varadESa viThalarAyA
dAsarathiye yannASe taLedu nirdOShanenisi
bahu mIsalu manavittu [pa]
varadEMdrara Aj~jAdiMdali
guruvara mahAprAj~jA
varadESa viThaleMba gurutina mudrike
parama pAmarage tvara karuNisidake [1]
j~jAna SUnya nAnu sarvada
hIna viShaya – ratanu
vAnarana taradi mANikeMba tera
hInanenisadale pONisu sanmati [2]
Esu pELalinnA SrI vara-
dESa viThala ninnA
dAsara vacanake dOSha bAradaMte
lEsu Bakuti j~jAna dAsyavittu tava [3]
Leave a Reply