Yaake kakkulati paduve

Composer : Shri Purandara dasaru

By Smt.Shubhalakshmi Rao

ಯಾಕೆ ಕಕುಲಾತಿ ಪಡುವೆ ಎಲೆ ಮರುಳೆ ||ಪ||

ಲೋಕ ಮೂರನು ಆಳ್ವ ಶ್ರೀನಿವಾಸನು ನಮ್ಮ
ಸಾಕಲಾರದೆ ಬಿಡುವನೆ ಮರುಳೆ ||ಅ||

ಕಲ್ಲು ಪಡೆಯಲ್ಲಿ ಹುಟ್ಟಿರುವ ಮಂಡೂಕಕೆ
ಅಲ್ಲಿ ತಂದಿಡುವರ್ಯಾರೋ
ಎಲ್ಲವನು ತೊರೆದಿರುವ ಅರಣ್ಯವಾಸಿಯನು
ಅಲ್ಲೆ ಸಲಹದೆ ಬಿಡುವನೆ ಮರುಳೆ |೧|

ಅಡವಿಯೊಳು ಹುಟ್ಟುವ ಮೃಗ ಜಾತಿಗಳಿಗೆಲ್ಲ
ಬಿಡದೆ ತಂದಿಡುವರ್ಯಾರೋ
ಗಿಡದಿಂದ ಗಿಡಗಳಿಗೆ ಹಾರುವ ಹಕ್ಕಿಗೆ
ಪಡಿಯನಳೆಯದೆ ಬಿಡುವನೇ ಮರುಳೆ |೨|

ಎಂಭತ್ತು ನಾಲ್ಕು ಲಕ್ಷ ಜೀವ ರಾಶಿಗಳನ್ನು
ಹಿಂಬಾಗಿ ಸಲಹುತಿಹನು
ನಂಬು ಶ್ರೀಪುರಂದರವಿಠ್ಠಲನ ಚರಣವನು
ನಂಬಿದರೆ ಸಲಹದಿಹನೇ ಮರುಳೆ |೩|


yAke kakulAti paDuve ele maruLe ||pa||

lOka mUranu ALva SrInivAsanu namma
sAkalArade biDuvane maruLe ||a||

kallu paDeyalli huTTiruva maMDUkake
alli taMdiDuvaryArO
ellavanu torediruva araNyavAsiyanu
alle salahade biDuvane maruLe |1|

aDaviyoLu huTTuva mRuga jAtigaLigella
biDade taMdiDuvaryArO
giDadiMda giDagaLige hAruva hakkige
paDiyanaLeyade biDuvanE maruLe |2|

eMBattu nAlku lakSha jIva rASigaLannu
hiMbAgi salahutihanu
naMbu SrIpuraMdaraviThThalana caraNavanu
naMbidare salahadihanE maruLe |3|

Leave a Reply

Your email address will not be published. Required fields are marked *

You might also like

error: Content is protected !!