Composer : Shri Purandara dasaru
ಒಂದೇ ಮನದಿ ನಾನಿಂದು ನಮಿಸುವೆ |
ಸಿಂಧು ಶಯನನೆ ಮಂದಹಾಸನೆ || ಪ ||
ಬಂದ ದುರಿತಗಳೊಂದು ಕೂಡದೆ |
ತಂದೆ ಸಲಹಬೇಕೋ || ಅ.ಪ ||
ನಿನ್ನ ಹೊರತು ನಾನನ್ಯರೊಬ್ಬರ |
ಇನ್ನು ಕಾಣೆನೊ ಎನ್ನ ಸಾಕುವ ||
ಚೆನ್ನವಾಗಿ ಪ್ರಸನ್ನನಾಗೆಲೋ |
ಘನ್ನ ಮಹಿಮ ನೀನು || ೧ ||
ಕೋರಿ ನಿನ್ನನು ಬಾರಿಬಾರಿಗೆ |
ಸಾರಿದೆ ನಾ ವಾರಿಜಾಕ್ಷನೆ ||
ತೋರು ನಿನ್ನಯ ಚಾರುಚರಣವ ಅ – |
ಪಾರ ಕರುಣಾನಿಧೆ || ೨ ||
ತುಂಗ ನಿನ್ನ ಪಾದಾಬ್ಜಭೃಂಗ ನಾ |
ಮಂಗಳಾಂಗನೆ ಭಂಗ ಮಾಡದೆ ||
ರಂಗ ನಿನ್ನಂತರಂಗ ಭಕ್ತರ |
ಸಂಗ ನೀಡಬೇಕೋ || ೩ ||
ಕಾಮಜನಕ ಸುದಾಮಮಿತ್ರನೆ |
ದಾಮ ಉದರನೆ ನೇಮದಿಂದಲಿ ||
ರಾಮ ನಿನ್ನಯ ನಾಮ ಭಜನೆಗಳ |
ಪ್ರೇಮಾ ಮಾಡಬೇಕೋ || ೪ ||
ದೇವದೇವನೆ ಸಾರ್ವಭೌಮನೆ |
ಯಾವ ಕಾಲದಿ ಯಾವ ದೇಶದಿ ||
ಜೀವರೆಲ್ಲರ ಕಾವ ದೇವನೆ |
ಗೋವಿಂದ ಗೋಪತಿಯೇ || ೫ ||
ಈಶ ಎನುತೆಂಬೆ ಜಗದೀಶ ನಿನ್ನನು |
ಶ್ರೀಶ ಮನ್ನಿಸೋ ಶೇಷಶಯನನೆ ||
ದಾಸ ಎನ್ನನು ಘಾಸಿ ಮಾಡದೆ |
ಪೋಷಿಸಬೇಕೋ ನೀನು || ೬ ||
ಪರಾಕು ಎಂಬೆ ನಾ ಪರಾಕು ಮಾಡದೆ |
ಹರಾದಿವಂದ್ಯನೆ ಸುರರಪಕ್ಷನೆ ||
ಚರಾಚರದಲಿ ವಿರಾಜಿತ ತಂದೆ |
ಶ್ರೀಪುರಂದರವಿಠ್ಠಲರಾಯ || ೭ ||
oMdE manadi nAniMdu namisuve |
siMdhu Sayanane maMdahAsane || pa ||
baMda duritagaLoMdu kUDade |
taMde salahabEkO || a.pa ||
ninna horatu nAnanyarobbara |
innu kANeno enna sAkuva ||
cennavAgi prasannanAgelO |
Ganna mahima nInu || 1 ||
kOri ninnanu bAribArige |
sAride nA vArijAkShane ||
tOru ninnaya cArucaraNava a – |
pAra karuNAnidhe || 2 ||
tuMga ninna pAdAbjaBRuMga nA |
maMgaLAMgane BaMga mADade ||
raMga ninnaMtaraMga Baktara |
saMga nIDabEkO || 3 ||
kAmajanaka sudAmamitrane |
dAma udarane nEmadiMdali ||
rAma ninnaya nAma BajanegaLa |
prEmA mADabEkO || 4 ||
dEvadEvane sArvaBaumane |
yAva kAladi yAva dESadi ||
jIvarellara kAva dEvane |
gOviMda gOpatiyE || 5 ||
ISa enuteMbe jagadISa ninnanu |
SrISa mannisO SEShaSayanane ||
dAsa ennanu GAsi mADade |
pOShisabEkO nInu || 6 ||
parAku eMbe nA parAku mADade |
harAdivaMdyane surarapakShane ||
carAcaradali virAjita taMde |
SrIpuraMdaraviThThalarAya || 7 ||
Leave a Reply