Composer : Shri Purandara dasaru
ನಂಬದಿರು ಈ ದೇಹ ನಿತ್ಯವಲ್ಲ
ಅಂಬುಜಾಕ್ಷನ ಭಜಿಸಿ ಸುಖಿಯಾಗು ಮನವೆ [ಪ]
ಎಲುಬು ರಕ್ತ ಮಾಂಸಗಳ ಮೇಲೆ ಚರ್ಮದ ಹೊದಿಕೆ
ಮಲಮೂತ್ರ ಒಳಗೆ ಕ್ರಿಮಿ ರಾಶಿ ಇಹವು
ಹಲವು ವ್ಯಾಧಿಯ ಬೀಡು ಪಂಚಭೂತದನಾಡು
ಹುಲು ದೇಹವ ನೆಚ್ಚಿ ಕೆಡಬೇಡ ಮನವೆ [೧]
ಸತಿ ಸುತರು ಹಿತವರೆಂದು ಮತಿ ಮರೆತು ಮಮತೆಯಲಿ
ಅತಿಕಾಂಕ್ಷೆಯಿಂದ ದುರ್ವಿಷಯ ಬಲಿದು
ಸತತ ಲಕ್ಷ್ಮೀಪತಿಯ ಶರಣೆನದೆ ಇಹಪರದ
ಗತಿಶೂನ್ಯನಾಗಿ ನೀ ಕೆಡಬೇಡ ಮನವೆ [೨]
ಪರರ ನಿಂದಿಸದೆ ಪರರ ಧನವನು ಬಯಸದೆ
ಗುರುವಿಪ್ರ ಸೇವೆಯನು ಮಾಡು ಬಿಡದೆ
ಹರಿ ಸ್ತುತಿಯ ನೀ ಕೇಳು ಹರಿ ಕೀರ್ತನೆಯ ಪಾಡು
ಪರಮ ಪುರಂದರವಿಠಲನೊಲಿದು ಪಾಲಿಸುವ [೩]
naMbadiru I dEha nityavalla
aMbujAkShana Bajisi suKiyAgu manave [pa]
elubu rakta mAMsagaLa mEle carmada hodike
malamUtra oLage krimi rAshi ihavu
halavu vyAdhiya bIDu paMcaBUtadanADu
hulu dEhava necci keDabEDa manave [1]
sati sutaru hitavareMdu mati maretu mamateyali
atikAMkSheyiMda durviShaya balidu
satata lakShmIpatiya SaraNenade ihaparada
gatiSUnyanAgi nI keDabEDa manave [2]
parara niMdisade parara dhanavanu bayasade
guruvipra sEveyanu mADu biDade
hari stutiya nI kELu hari kIrtaneya pADu
parama puraMdaraviThalanolidu pAlisuva [3]
Leave a Reply