Muddu Taro Ranga

Composer : Shri Purandara dasaru

By Smt.Shubhalakshmi Rao

ಮುದ್ದು ತಾರೋ ರಂಗ ಎದ್ದು ಬಾರೋ ||ಪ||
ಅಂದವಾದ ಕರ್ಪೂರದ ಕರಡಿಗೆಯ ಬಾಯೊಳೊಮ್ಮೆ ||ಅ||

ವಿಷವನುಣಿಸಲು ಬಂದ, ಅಸುರೆ ಪೂತನಿಯ ಕೊಂದೆ
ವಶವಲ್ಲವೊ ಮಗನೆ ನಿನ್ನ, ವಿಷವನುಂಡ ಬಾಯೊಳೊಮ್ಮೆ |೧|

ಕಡೆವ ಸಮಯದಿ ಬಂದು, ಕಡೆವ ಸತಿಯ ಕೈಯ ಪಿಡಿದು
ಕಡೆದ ಬೆಣ್ಣೆ ಮೊಸರನೆಲ್ಲ, ಒಡನೆ ಮೆದ್ದ ಬಾಯೊಳೊಮ್ಮೆ |೨|

ತೊರವೆಯ ನಾರಸಿಂಹ, ವರದ ಪುರಂದರವಿಠಲ
ಹರವಿಹಾಲನೆಲ್ಲ ಕುಡಿದ, ನೊರೆ ಹಾಲಿನ ಬಾಯೊಳೊಮ್ಮೆ |೩|


muddu tArO raMga eddu bArO ||pa||
aMdavAda karpUrada karaDigeya bAyoLomme ||a||

viShavanuNisalu baMda, asure pUtaniya koMde
vaSavallavo magane ninna, viShavanuMDa bAyoLomme |1|

kaDeva samayadi baMdu, kaDeva satiya kaiya piDidu
kaDeda beNNe mosaranella, oDane medda bAyoLomme |2|

toraveya nArasiMha, varada puraMdaraviThala
haravihAlanella kuDida, nore hAlina bAyoLomme |3|

Leave a Reply

Your email address will not be published. Required fields are marked *

You might also like

error: Content is protected !!