Composer : Shri Purandara dasaru
ಹಿಂದಿಲ್ಲಾ ಸ್ವಾಮಿ ಮುಂದಿಲ್ಲಾ , ಗೋ-
ವಿಂದ ನೀನಲ್ಲದೆ ಇಹಪರವಿಲ್ಲ |ಪ|
ಪರರ ಬೇಡಿಪ್ಪಂತೆ ಗತಿಯಾಯಿತಲ್ಲ
ನರರ ತುತಿಸಿ ನಾಲಿಗೆ ಬರಡಾಯಿತಲ್ಲ
ಪರವಿಲ್ಲ ಇಹವಿಲ್ಲ ನರಜನ್ಮ ಸ್ಥಿರವಲ್ಲ
ನರಗೆ ಪಾಮರಗೆ ಪಾಪದ ಪಂಜರಗೆ |೧|
ತನುವು ತನ್ನದಲ್ಲ ತನ್ನವರು ತನಗಿಲ್ಲ
ಅನುಕೂಲವಿರುವಾಗ ಸತಿಸುತರೆಲ್ಲ
ಅನುವು ತಪ್ಪಿ ಮನ ತಲ್ಲಣಿಸುವಾಗ
ವನಜನಾಭ ನೀನಲ್ಲದೆ ಯಾರಿಲ್ಲ |೨|
ಮಾತಾಪಿತೃ ಬಂಧುಗಳು ಮುಂತಾಗಿ ಸಂ-
ಪ್ರೀತಿಯೊಳಿರಲು ಮನ್ನಿಪರೈ ಎಲ್ಲ
ಕಾತರನಾಗ್ ಯಮ ಕೊಂಡೊಯ್ಯುವಾಗ ಸಂ-
ಗಾತ ಇನ್ನ್ಯಾರಯ್ಯ ಪುರಂದರವಿಠಲ |೩|
hiMdillA svAmi muMdillA , gO-
viMda nInallade ihaparavilla |pa|
parara bEDippaMte gatiyAyitalla
narara tutisi nAlige baraDAyitalla
paravilla ihavilla narajanma sthiravalla
narage pAmarage pApada paMjarage |1|
tanuvu tannadalla tannavaru tanagilla
anukUlaviruvAga satisutarella
anuvu tappi mana tallaNisuvAga
vanajanABa nInallade yArilla |2|
mAtApitRu baMdhugaLu muMtAgi saM-
prItiyoLiralu manniparai ella
kAtaranAg yama koMDoyyuvAga saM-
gAta innyArayya puraMdaraviThala |3|
Leave a Reply