Anjaletake manave

Composer : Shri Purandara dasaru

By Smt.Shubhalakshmi Rao

ಅಂಜಲೇತಕೆ ಮನವೆ ಅನುಗಾಲವು
ಕಂಜನಾಭನ ಭಕ್ತಿ ಕೈಗೊಂಡ ಬಳಿಕ ||ಪ||

ನಾರಾಯಣವೆಂಬೊ ನಾಲ್ಕು ಅಕ್ಷರದಿಂದ
ಘೋರ ದುರಿತಗಳೆಲ್ಲ ಕಳೆಯಬಹುದು
ಶ್ರೀರಾಮನಾಮವೆಂಬೊ ಸಿಂಗಾಡಿ ತಕ್ಕೊಂಡು
ವೈರಿಷಡ್ವರ್ಗಗಳ ವಧೆ ಮಾಡಬಹುದು [೧]

ಶ್ರೀಕೇಶವನೆಂಬೊ ಸಿದ್ಧಿಮಂತ್ರಗಳಿಂದ
ಬೇಕಾದ ಕರ್ಮಗಳ ಕಳೆಯಬಹುದು
ವೈಕುಂಠಪತಿಯೆಂಬ ವಜ್ರವನೆ ತಕ್ಕೊಂಡು
ನೂಕುವ ಯಮಭಟರ ನುಗ್ಗು ಮಾಡಲುಬಹುದು [೨]

ಹರಿವಾಸುದೇವನೆಂಬೊ ಅಮೃತಪಾನಗಳಿಂದ
ಜರೆಮರಣ ಜನನಗಳ ಜಯಿಸಬಹುದು
ವರದ ಶ್ರೀ ಪುರಂದರ ವಿಠ್ಠಲನ ಸ್ಮರಣೆಯನು
ಸರಸ ಸದ್ಭಕ್ತಿಯಿಂ ಸವಿಮಾಡಬಹುದು [೩]


aMjalEtake manave anugAlavu
kaMjanABana Bakti kaigoMDa baLika ||pa||

nArAyaNaveMbo nAlku akSharadiMda
GOra duritagaLella kaLeyabahudu
SrIrAmanAmaveMbo siMgADi takkoMDu
vairiShaDvargagaLa vadhe mADabahudu [1]

SrIkESavaneMbo siddhimaMtragaLiMda
bEkAda karmagaLa kaLeyabahudu
vaikuMThapatiyeMba vajravane takkoMDu
nUkuva yamaBaTara nuggu mADalubahudu [2]

harivAsudEvaneMbo amRutapAnagaLiMda
jaremaraNa jananagaLa jayisabahudu
varada shrI puraMdara viThThalana smaraNeyanu
sarasa sadBaktiyiM savimADabahudu [3]

Leave a Reply

Your email address will not be published. Required fields are marked *

You might also like

error: Content is protected !!