Smarisu GurugaLa padava

Composer : Shri Varadagopala vittala

By Smt.Shubhalakshmi Rao

ಸ್ಮರಿಸು ಗುರುಗಳ ಪಾದವಾ | ಮನವೇ |
ಸ್ಮರಿಸು ಗುರು ಗೋಪಾಲವಿಠ್ಠಲದಾಸರ ಪಾದ |
ಕರಣ ಶುದ್ಧಿಗೆ ಪರಮಕಾರಣೀಕವಾದ ಬಲು |
ಪರಿಪರಿಯ ದುರಿತ ಕಾನನಕೆ ಪಾವಕನಾದ | ಶರಣ
ಜನರಿಗೆ ಕಾಮದಾ | ಮನವೆ | ಪ |

ವಿಜಯರಾಯರ ಪಾದ ವಿಮಲ ಸರಸಿಜ ಭೃಂಗ |
ಕುಜನಗಣ ಕದಳಿ ಕಿತ್ತುವ ಮತ್ತಮಾತಂಗ |
ಸುಜನಘವೆಂಬೊ ಗಜಗಳನ ಭೇದಿಪ ಸಿಂಗ |
ನಿಜಜನಾಬ್ಜಕೆ ಪತಂಗ |
ಅಜನೆ ತಾನೆಂಬ ಅದ್ವೈತ ಅನಿಲ ಭುಜಂಗ | ಭಜಕರ
ಭಯಗಳೆಂಬ ಉರಗಗಳಿಗೆ ವಿಹಂಗ | ಯಜನಾದಿ
ಸತ್ಕರ್ಮಗಳು ಮಾಡುವರ ಸಂಗ |
ತ್ಯಜಿಸದಂಥ ಶೂಭಾಂಗನಾ | ಮನವೇ || ೧ ||

ಪರನಾರಿಯರಿಗೆ ಮನವೆರಗದ ಮಹಾಮಹಿಮ
ಪರಮ ಪುರುಷನ ಧ್ಯಾನ ಪರ ನಿರಂತರ ನಿಯಮ
| ವರಣೀಯವಾದ ಸುಗುಣ ಗಣಂಗಳ ಧಾಮ |
ವರವೈಷ್ಣವಾಬ್ಧಿಸೋಮಾ |
ದುರುಳ ಸಂಕರ ಮತಗಿರಿಯ ಭೇದಿಸುವ ಸುತ್ತ್ರಾಮ |
ಕರಕರಿಯ ಸಂಸಾರ ಕಲುಷ ಮರ್ದನ ಭೀಮಾ |
ಚಿರಕಾಲ ತನ್ನ ನೆರೆನಂಬಿದವರ ಸುಕಾಮ |
ಕರವ ಮಂಗಳ ಸುಮಹಿಮಾ | ಮನವೇ || ೨ ||

ಭಕುತರಿಗೆ ಬಂದ ಭಯ ಶಕಲ ಮಾಡುವ ಶೂರ |
ಭಕುತಿಯಲಿ ತನ್ನ, ಭಜಕರಿಗೆ ಸುರವರ | ಸಕಲ
ಶಾಸ್ತ್ರಗಳು ಯುಕುತಿ ಕವನಗಳಿಂದ |
ಪ್ರಕಟಿಸಿದ ಕವಿ ಶೇಖರಾ |
ಅಕಳಂಕಚರಿತ ಆಧ್ಯಾತ್ಮ ತತ್ವ ವಿಚಾರ |
ಅಕುಟಿಲೋತ್ತುಮ ಆಪ್ತಜನಕೆ ಮಂಗಳಾಕಾರ |
ಸುಖತೀರ್ಥ ಮತದ ಸುಜನರ ಸುಮನಸ ಚಕೋರ |
ಸುಖದಿ ನಲಿಸುವ ಹಿಮಕರಾ | ಮನವೇ || ೩ ||

ಭೂತಭವಿಷತ್ಕಾಲ ಜ್ಞಾತೃತ್ವ ವಿಷಯದಲಿ |
ಭೂತದಯಾಪರರಾಗಿ ಬುಧರ ಸಮ್ಮತದಲ್ಲಿ |
ಆತುರತ್ವದಿ ಬಂದಾನಾಥರನ ಪೊರೆವಲ್ಲಿ |
ಈತಗೆಣೆಗಾಣೆಯಲ್ಲಿ |
ನೀತಿವಂತರು ಕೇಳಿ ಇವರ ಪದಸ್ಮರಣೆಯಲಿ |
ಕಾತರಿಸಿ ಓಡುವವು ಬಂದ ಭಯ ಭೀತಿಯಲಿ |
ಖ್ಯಾತಿದ್ಯೋತಕವಾಗಿ ಮೆರೆವ ದಿಗ್ದೆಶದಲಿ |
ವಾತಜಾತನ ಮತದಲಿ | ಮನವೇ || ೪ ||

ಸಂಚಿತಾಗಾಮಿಗಳ ಕೊಂಚ ಮಾಡುವ ದಿವ್ಯ |
ಪಂಚರತ್ನದ ಮಾಲೆ ಸಂಚರಿತ ದಾಸರಿಗೆ |
ಅಂಚೆ ಗಂಚಿಗೆ ಕಲಿ ಪ್ರಪಂಚವನು ನಡೆಸದಲೆ |
ಮಿಂಚುವರು ದಿನದಿನದಲೇ |
ಸಂಚಕಿತನಾಗಿ ಮನ ವಂಚನಿಲ್ಲದಲೇವೇ |
ಪಂಚಪಂಚದ ಕಾಲದಲೆದ್ದು ಸ್ಮರಿಸಲು ವಿ |
ರಂಚಿಪಿತ ವರದಗೋಪಾಲವಿಠ್ಠಲರೇಯ |
ಮುಂಚೆ ಕರ ಪಿಡಿವ ನೈಯ್ಯಾ | ಮನವೇ ||೫||


smarisu gurugaLa pAdavA | manavE |
smarisu guru gOpAlaviThThaladAsara pAda |
karaNa Suddhige paramakAraNIkavAda balu |
paripariya durita kAnanake pAvakanAda | SaraNa
janarige kAmadA | manave | pa |

vijayarAyara pAda vimala sarasija bhRuMga |
kujanagaNa kadaLi kittuva mattamAtaMga |
sujanaGaveMbo gajagaLana BEdipa siMga |
nijajanAbjake pataMga |
ajane tAneMba advaita anila BujaMga | Bajakara
BayagaLeMba uragagaLige vihaMga | yajanAdi
satkarmagaLu mADuvara saMga |
tyajisadaMtha SUBAMganA | manavE || 1 ||

paranAriyarige manaveragada mahAmahima 
parama puruShana dhyAna para niraMtara niyama
| varaNIyavAda suguNa gaNaMgaLa dhAma |
varavaiShNavAbdhisOmA |
duruLa saMkara matagiriya BEdisuva suttrAma |
karakariya saMsAra kaluSha mardana BImA |
cirakAla tanna nerenaMbidavara sukAma |
karava maMgaLa sumahimA | manavE || 2 ||

Bakutarige baMda Baya Sakala mADuva SUra |
Bakutiyali tanna, Bajakarige suravara | sakala
SAstragaLu yukuti kavanagaLiMda |
prakaTisida kavi SEKarA |
akaLaMkacarita AdhyAtma tatva vicAra |
akuTilOttuma Aptajanake maMgaLAkAra |
suKatIrtha matada sujanara sumanasa cakOra |
suKadi nalisuva himakarA | manavE || 3 ||

BUtaBaviShatkAla j~jAtRutva viShayadali |
BUtadayApararAgi budhara sammatadalli |
Aturatvadi baMdAnAtharana porevalli |
ItageNegANeyalli |
nItivaMtaru kELi ivara padasmaraNeyali |
kAtarisi ODuvavu baMda Baya BItiyali |
KyAtidyOtakavAgi mereva digdeSadali |
vAtajAtana matadali | manavE || 4 ||

saMcitAgAmigaLa koMca mADuva divya |
paMcaratnada mAle saMcarita dAsarige |
aMce gaMcige kali prapaMcavanu naDesadale |
miMcuvaru dinadinadalE |
saMcakitanAgi mana vaMcanilladalEvE |
paMcapaMcada kAladaleddu smarisalu vi |
raMcipita varadagOpAlaviThThalarEya |
muMce kara piDiva naiyyA | manavE ||5||

Leave a Reply

Your email address will not be published. Required fields are marked *

You might also like

error: Content is protected !!