Composer : Shri Purandara dasaru
ಸ್ಮರಿಸೊ ಸರ್ವದ ಹರಿಯ |ಪ|
ಸುರವರ ಧೊರೆಯ ಕರುಣಾನಿಧಿಯ |ಅ.ಪ|
ಮುನಿಜನ ವಂದ್ಯನ ಮನಸಿಜನಯ್ಯನ
ಮನದಲಿ ಅನುದಿನ ನೆನೆಯೊ ಹರಿಯ ||೧||
ನಂದನ ಕಂದನ ಇಂದಿರೆ ಅರಸನ
ಮಂದರೋಧ್ಧರನ ಚಂದದಿಂದಲಿ ಹರಿಯ ||೨||
ವರಗುಣಪೂರ್ಣನ ಸರಸಿಜನೇತ್ರನ
ಪರವಾಸುದೇವನ ಪ್ರಾಣನ ಪ್ರಿಯನ ||೩||
ಕಂಜದಳೇಕ್ಷನ ಮಂಜುಳ ಹಾರನ
ಅರ್ಜುನ ಸಾರಥಿ ಸಜ್ಜನ ಪ್ರಿಯನ ||೪||
ವೆಂಕಟರಮಣನ ಸಂಕಟಹರಣನ
ಲಕ್ಷ್ಮೀರಮಣನ ಪುರಂದರವಿಠಲನ ||೫||
smariso sarvada hariya |pa|
suravara dhoreya karuNAnidhiya |a.pa|
munijana vaMdyana manasijanayyana
manadali anudina neneyo hariya ||1||
naMdana kaMdana iMdire arasana
maMdarOdhdharana caMdadiMdali hariya ||2||
varaguNapUrNana sarasijanEtrana
paravAsudEvana prANana priyana ||3||
kaMjadaLEkShana maMjuLa hArana
arjuna sArathi sajjana priyana ||4||
veMkaTaramaNana saMkaTaharaNana
lakShmIramaNana puraMdaraviThalana ||5||
Leave a Reply