Ninna dasanivane

Composer: Shri Gurujagannatha dasaru

By Smt.Shubhalakshmi Rao

ನಿನ್ನ ದಾಸನಿವನೇ ಅನನ್ಯ ರಕ್ಷಕನೇ [ಪ]
ಅನ್ಯರಿಗಾಲ್ಪರಿಯದಂತೆ ಮನ್ನಿಸಿ ಪೊರೆ ಧೊರೆಯೇ [ಅ.ಪ]

ಅನ್ಯನಲ್ಲವೊ ಸ್ವಾಮಿ ಮನ್ನಿಸೀ ಪೊರೆ ಪ್ರೇಮೀ
ಘನ್ನವಿಪತ್ತಿವಗೆ ಬಹು ಬನ್ನ ಬಡಿಸುತಿಹುದೋ [೧]

ಬಂದ ವಿಪತ್ತನ್ನು ಈಗ ಛಿಂದಿಸಿ ಬಿಡು ಬೇಗ
ಬಂದಾದುರಿತಗಳೆಲ್ಲ ನೀ ನಿಂದ್ರಾದಂತೆ ಮಾಳ್ಪದೋ [೨]

ಅನ್ಯರಿಗಾಸಾಧ್ಯವಿದು ಎನ್ನ ಮನಕೆ ತೋರುತಿಹುದು
ನಿನ್ನನುಳಿದು ಕಾಯ್ವೊರಾರಾಪಾನ್ನ ಜನಪಾಲಾ [೩]

ಇನ್ನು ಸಂದೇಹವ್ಯಾಕೆ ಘನ್ನ ಮಹಿಮ ಬೇಡಿಕೊಂಬೆ
ನಿನ್ನ ಸೇವಾ ನಿರುತವಿತ್ತು ಎನ್ನ ವಚನ ಲಾಲಿಸಯ್ಯಾ [೪]

ಇವನ ಪೊರೆಯೇ ನಿನಗೆ ಖ್ಯಾತಿ ಭುವನದೊಳಗೆ ಬಪ್ಪೊದಯ್ಯ
ದೂತಜನಪಾಲ ಗುರುಜಗನ್ನಾಥವಿಠಲ ತಾನೆ ಪ್ರೀತನಾಗುವ [೫]


ninna dAsanivanE ananya rakShakanE [pa]
anyarigAlpariyadaMte mannisi pore dhoreyE [a.pa]

anyanallavo svAmi mannisI pore prEmI
Gannavipattivage bahu banna baDisutihudO [1]

baMda vipattannu Iga CiMdisi biDu bEga
baMdAduritagaLella nI niMdrAdaMte mALpadO [2]

anyarigAsAdhyavidu enna manake tOrutihudu
ninnanuLidu kAyvorArApAnna janapAlA [3]

innu saMdEhavyAke Ganna mahima bEDikoMbe
ninna sEvA nirutavittu enna vacana lAlisayyA [4]

ivana poreyE ninage KyAti BuvanadoLage bappodayya
dUtajanapAla gurujagannAthaviThala tAne prItanAguva [5]

Leave a Reply

Your email address will not be published. Required fields are marked *

You might also like

error: Content is protected !!