Composer : Shri Purandara dasaru
ನಿಮ್ಮ ಭಾಗ್ಯ ದೊಡ್ಡದೋ ನಮ್ಮ ಭಾಗ್ಯ ದೊಡ್ಡದೋ || ಪ ||
ಸಮ್ಮತಿಂದ ನಾವೂ ನೀವೂ ಸಾಟಿಮಾಡಿ ನೋಡುವ ಬನ್ನಿ || ಅ.ಪ ||
ಹೇಮ ಹೊನ್ನು ಹಣಗಳಿಗೆ ಹೇರಳ ಭಯಗಳುಂಟು
ರಾಮನಾಮ ದ್ರವ್ಯಕಿನ್ನು ಯಾರ ಭಯವು ಇಲ್ಲವಯ್ಯಾ || ೧ ||
ಕಡಗ ಕಂಠ ಮಾಲೆಗಳಿಗೆ ಕಳ್ಳರ ಅಂಜಿಕೆಯುಂಟು
ಅಡವಿ ತುಲಸೀ ಮಾಲೆಗಿನ್ನು ಆರ ಅಂಜಿಕಿಲ್ಲವಯ್ಯಾ || ೨ ||
ವ್ಯಾಪಾರ ಉದ್ಯೋಗಕಿನ್ನು ವ್ಯಾಕುಲದ ಭಯವುಂಟು
ಗೋಪಾಳದ ವೃತ್ತಿಗಿನ್ನು ಗೊಡವೆ ಯಾರದಿಲ್ಲವಯ್ಯಾ || ೩ ||
ಸರಕು ಬೆಲ್ಲ ತುಪ್ಪ ಧಾನ್ಯ ಸವೆದೀತೆಂಬ ಚಿಂತೆಯುಂಟು
ಹರಿನಾಮಾಮೃತಕ್ಕೆ ಇನ್ನು ಯಾವ ಚಿಂತೆಯಿಲ್ಲವಯ್ಯಾ || ೪ ||
ನಿಮ್ಮ ಭಾಗ್ಯ ಲಕ್ಷ್ಮೀದೇವಿ ನಮ್ಮ ಭಾಗ್ಯ ನಾರಾಯಣನು
ನಮ್ಮ ನಿಮ್ಮ ಭಾಗ್ಯದೊಡೆಯ ಪುರಂದರವಿಠ್ಠಲನು || ೫ ||
nimma BAgya doDDadO namma BAgya doDDadO || pa ||
sammatiMda nAvU nIvU sATimADi nODuva banni || a.pa ||
hEma honnu haNagaLige hEraLa BayagaLuMTu
rAmanAma dravyakinnu yAra Bayavu illavayyA || 1 ||
kaDaga kaMTha mAlegaLige kaLLara aMjikeyuMTu
aDavi tulasI mAleginnu Ara aMjikillavayyA || 2 ||
vyApAra udyOgakinnu vyAkulada BayavuMTu
gOpALada vRuttiginnu goDave yAradillavayyA || 3 ||
saraku bella tuppa dhAnya savedIteMba ciMteyuMTu
harinAmAmRutakke innu yAva ciMteyillavayyA || 4 ||
nimma BAgya lakShmIdEvi namma BAgya nArAyaNanu
namma nimma BAgyadoDeya puraMdaraviThThalanu || 5 ||
Leave a Reply