Composer : Shri Purandara dasaru
ಮುಳ್ಳು ಕೊನೆಯ ಮೇಲೇ ಮೂರು ಕೆರೆಯ ಕಟ್ಟಿ
ಎರಡು ತುಂಬದು ಒಂದು ತುಂಬಲೇ ಇಲ್ಲ
ತುಂಬಲಿಲ್ಲದ ಕೆರೆಗೆ ಬಂದರು ಮೂವರು ಒಡ್ಡರು
ಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ [1]
ಕಾಲಿಲ್ಲದ ಒಡ್ಡಗೆ ಕೊಟ್ಟರು ಮೂರು ಎಮ್ಮೆಗಳ ,
ಎರಡು ಬರಡು ಒಂದಕೆ ಕರುವೇ ಇಲ್ಲ
ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳ,
ಎರಡು ಸವಕಲು ಒಂದು ಸಲ್ಲಲೇ ಇಲ್ಲ [2]
ಸಲ್ಲದಿದ್ದ ಹೊನ್ನಿಗೆ ಬಂದರು ಮೂವರು ನೋಟಗಾರರು
ಇಬ್ಬರು ಕುರುಡರು ಒಬ್ಬಗೆ ಕಣ್ಣೇ ಇಲ್ಲ
ಕಣ್ಣಿಲ್ಲದ ನೋಟಗಾರಗೆ ಕೊಟ್ಟರು ಮೂರು ಊರುಗಳ
ಎರಡು ಹಾಳು ಒಂದಕ್ಕೆ ಒಕ್ಕಲೇ ಇಲ್ಲ [3]
ಒಕ್ಕಲಿಲ್ಲದ ಊರಿಗೆ ಬಂದರು ಮೂವರು ಕುಂಬಾರರು
ಇಬ್ಬರು ಚೊಂಚರು ಒಬ್ಬಗೆ ಕಯ್ಯೇ ಇಲ್ಲ
ಕೈ ಇಲ್ಲದ ಕುಂಬಾರನು ಮಾಡಿದ ಮೂರು ಮಡಿಕೆಗಳ
ಎರಡು ಒಡಕು ಒಂದಕ್ಕೆ ಬುಡವೇ ಇಲ್ಲ [4]
ಬುಡವಿಲ್ಲದ ಮಡಿಕೆಗೆ ಹಾಕಿದರು ಮೂರು ಅಕ್ಕಿಕಾಳ
ಎರಡು ಬೇಯದು ಒಂದು ಬೇಯಲೇ ಇಲ್ಲ
ಬೇಯಲಿಲ್ಲದ ಅಕ್ಕಿಗೆ ಬಂದರು ಮೂವರು ನೆಂಟರು
ಇಬ್ಬರು ಉಣ್ಣರು ಒಬ್ಬಗೆ ಹಸಿವೇ ಇಲ್ಲ [5]
ಹಸಿವೆ ಇಲ್ಲದ ನೆಂಟಗೆ ಕೊಟ್ಟರು ಮೂರು ಟೊಣಪೆಗಳ
ಎರಡು ತಾಕದು ಒಂದು ತಾಕಲೇ ಇಲ್ಲ
ತಾಕಲಿಲ್ಲದ ಟೊಣಪೆಯ ತಾಕಿಸಿ ಸದ್ಗತೀಯ
ನೀಯಬೇಕು ಪುರಂದರ ವಿಠ್ಠಲ ರಾಯ [6]
muLLu koneya mElE mUru kereya kaTTi
eraDu tuMbadu oMdu tuMbalE illa
tuMbalillada kerege baMdaru mUvaru oDDaru
ibbaru kuMTaru obbage kAlE illa [1]
kAlillada oDDage koTTaru mUru emmegaLa ,
eraDu baraDu oMdake karuvE illa
karuvillada emmege koTTaru mUru honnugaLa,
eraDu savakalu oMdu sallalE illa [2]
salladidda honnige baMdaru mUvaru nOTagAraru
ibbaru kuruDaru obbage kaNNE illa
kaNNillada nOTagArage koTTaru mUru UrugaLa
eraDu hALu oMdakke okkalE illa [3]
okkalillada Urige baMdaru mUvaru kuMbAraru
ibbaru choMcharu obbage kayyE illa
kai illada kuMbAranu mADida mUru maDikegaLa
eraDu oDaku oMdakke buDavE illa [4]
buDavillada maDikege hAkidaru mUru akkikALa
eraDu bEyadu oMdu bEyalE illa
bEyalillada akkige baMdaru mUvaru neMTaru
ibbaru uNNaru obbage hasivE illa [5]
hasive illada neMTage koTTaru mUru ToNapegaLa
eraDu tAkadu oMdu tAkalE illa
tAkalillada ToNapeya tAkisi sadgatIya
nIyabEku puraMdara viThThala rAya [6]
Leave a Reply