Composer : Shri Purandara dasaru
ಹರಿ ನಾರಾಯಣ ಹರಿ ನಾರಾಯಣ
ಹರಿ ನಾರಾಯಣ ಎನು ಮನವೆ [ಪ]
ನಾರಾಯಣನೆಂಬೊ ನಾಮದ ಬೀಜವ
ನಾರದ ಬಿತ್ತಿದ ಧರೆಯೊಳಗೆ [ಅ.ಪ]
ತರಳ ಧೃವನಿಂದ ಅಂಕುರಿಸಿತು ಅದು
ವರ ಪ್ರಹ್ಲಾದನಿಂದ ಮೊಳಕಾಯ್ತು
ಧರಣೀಶ ರುಕುಮಾಂಗದನಿಂದ ಚಿಗುರಿತು
ಕುರುಪಿತಾಮಹನಿಂದ ಹೂವಾಯ್ತು [೧]
ವಿಜಯನ ಸತಿಯಿಂದ ಕಾಯಾಯಿತು ಅದು
ಗಜೇಂದ್ರನಿಂದ ದೊರೆಹಣ್ಣಾಯ್ತು
ದ್ವಿಜ ಶುಕಮುನಿಯಿಂದ ಪರಿಪಕ್ವವಾಯಿತು
ಅಜಮಿಳ ತಾನುಂಡು ರಸಸವಿದ [೨]
ಕಾಮಿತ ಫಲವೀವ ನಾಮವೊಂದಿರಲಾಗಿ
ಹೋಮ ನೇಮ ಜಪ ತಪವೇಕೆ
ಸ್ವಾಮಿ ಶ್ರೀ ಪುರಂದರ ವಿಠಲನ ನಾಮವ
ನೇಮದಿಂದಲೀ ನೆನೆ ಮನವೆ [೩]
hari nArAyaNa hari nArAyaNa
hari nArAyaNa enu manave [pa]
nArAyaNaneMbo nAmada bIjava
nArada bittida dhareyoLage [a.pa]
taraLa dhRuvaniMda aMkurisitu adu
vara prahlAdaniMda moLakAytu
dharaNISa rukumAMgadaniMda ciguritu
kurupitAmahaniMda hUvAytu [1]
vijayana satiyiMda kAyAyitu adu
gajEMdraniMda dorehaNNAytu
dvija SukamuniyiMda paripakvavAyitu
ajamiLa tAnuMDu rasasavida [2]
kAmita PalavIva nAmavoMdiralAgi
hOma nEma japa tapavEke
svAmi SrI puraMdara viThalana nAmava
nEmadiMdalI nene manave [3]
Leave a Reply