Enu bandyo jivave

Composer : Shri Vadirajaru

By Smt.Shubhalakshmi Rao

ಏನು ಬಂದ್ಯೋ ಜೀವವೇ ಶರೀರದೊಳು ವ್ಯರ್ಥವಾಗಿ ||ಪ||

ದಾನ ಧರ್ಮ ಮಾಡಲಿಲ್ಲ ದಯಬುದ್ಧಿ ಪುಟ್ಟಲಿಲ್ಲ
ಜ್ಞಾನವರಿತು ಹರಿಪೂಜೆ ಮಾಡಲಿಲ್ಲ
ಜ್ಞಾನಿ ಸುಜ್ಞಾನಿಗಳ ಸನ್ನಿಧಿಯಲ್ಲಿರಲಿಲ್ಲ,
ನಿರ್ಮಲ ಮನದಲ್ಲಿ ಒಂದು ದಿನವಿರಲಿಲ್ಲ ||೧||

ಸತಿ ಪುರುಷರು ನಾವು ಸಂತೋಷದಿಂದಿರಲಿಲ್ಲ,
ಯತಿಯಾಗಿ ತೀರ್ಥ ಯಾತ್ರೆ ಮಾಡಲಿಲ್ಲ
ಶೃತಿಶಾಸ್ತ್ರ ಪುರಾಣಗಳ ಕಿವಿಗೊಟ್ಟು ಕೇಳಲಿಲ್ಲ,
ಮೃತವಾಗೋ ಕಾಲ ಬಂತು ಬರಿದೆ ಮುಪ್ಪಾದೆನಲ್ಲ ||೨||

ಉಂಡು ಸುಖಿಯಲ್ಲ ಉಟ್ಟು ತೊಟ್ಟು ಪರಿಣಾಮ ಇಲ್ಲ,
ಕೊಂಡು ಕೊಟ್ಟು ಹರಿಸೇವೆ ಮಾಡಲಿಲ್ಲ
ದುಂಡು ನಾಯಿಯಂತೆ ಮನೆಮನೆಗಳ ತಿರುಗಿ ಕೆಟ್ಟೆನಲ್ಲ
ಮೊಂಡು ಜೋಗಿ ಗುಣಂಗಳ ಬಿಡಿಸೋ ಹಯವದನ ||೩||


Enu baMdyO jIvavE sharIradoLu vyarthavAgi ||pa||

daana dharma maaDalilla dayabuddhi puTTalilla
j~jaanavaritu haripUje maaDalilla
j~jaani suj~jaanigaLa sannidhiyalliralilla,
nirmala manadalli oMdu dinaviralilla ||1||

sati puruSharu naavu saMtOShadiMdiralilla,
yatiyaagi tIrtha yaatre maaDalilla
shRutishaastra puraaNagaLa kivigoTTu kELalilla,
mRutavAgO kaala baMtu baride muppaadenalla ||2||

uMDu suKiyalla uTTu toTTu pariNaama illa,
koMDu koTTu harisEve maaDalilla
duMDu naayiyaMte manemanegaLa tirugi keTTenalla
moMDu jOgi guNaMgaLa biDisO hayavadana ||3||

Leave a Reply

Your email address will not be published. Required fields are marked *

You might also like

error: Content is protected !!