Composer: Shri Tupaki Venkataramanacharya
ಸ್ಕಂದಗುರು ಸ್ಕಂದಗುರು ಸುರ-
ವೃಂದ ಮುನಿಜನರು ವಂದಿಪರು (ಪ.)
ಮಂದರಧರ ಗೋವಿಂದನ ಶರಣರ
ಸಂದೋಹ ಕಾವ ವೃಂದಾರಕತರು (ಅ.ಪ.)
ತಾಮಸರು ದ್ವೇಷ ಬೇಡುವರು
ಕಾಮಿತ ಕೇಳ್ವರು ರಾಜಸರು
ಸ್ವಾಮಿ ಶ್ರೀಹರಿಯ ಭಕ್ತಿ ಜ್ಞಾನವ
ಪ್ರೇಮದಿ ಕೇಳ್ವರು ಸಾತ್ವಿಕರು [೧]
ವಿಘ್ನಹರನು ನಿನ್ನಗ್ರಜನು ವಿಬು-
ಧಾಗ್ರಣಿ-ಯೆನಿಸುವೆಯೊ ನೀನು
ಉಗ್ರ ತ್ರಿಯಂಬಕ ತಾತನು ಖ್ಯಾತನು
ದುರ್ಗಾ ದೇವಿಯೆ ಜನನಿ ನಿರುಪಮಳು [೨]
ತಾರಕಾಂತಕ ನಿಶ್ಶೋಕ ಲಕ್ಷ್ಮೀ-
ನಾರಾಯಣನಿಗೆ ಸಖ
ಭೂರಿ ನಿಗಮಾರ್ಥ ಸಾರ ಕೋವಿದನೆ
ಧೀರನೆ ವೀರ ಮಹಾರಣ ಶೂರನೆ [೩]
skaMdaguru skaMdaguru sura-
vRuMda munijanaru vaMdiparu (pa.)
maMdaradhara gOviMdana SaraNara
saMdOha kAva vRuMdArakataru (a.pa.)
tAmasaru dvESha bEDuvaru
kAmita kELvaru rAjasaru
svAmi SrIhariya Bakti j~jAnava
prEmadi kELvaru sAtvikaru [1]
viGnaharanu ninnagrajanu vibu-
dhAgraNi-yenisuveyo nInu
ugra triyaMbaka tAtanu KyAtanu
durgA dEviye janani nirupamaLu [2]
tArakAMtaka nishshOka lakShmI-
nArAyaNanige saKa
BUri nigamArtha sAra kOvidane
dhIrane vIra mahAraNa SUrane [3]
Leave a Reply