Composer: Shri Purandara dasaru
ಮಂದಮತಿಯು ನಾನು ಮದನಜನಕನು ನೀನು
ಕುಂದುಗಳನೆಣಿಸದೆ ದಯಮಾಡಿ ಸಲಹೊ ||ಪ||
ಪಾಪಕರ್ತನು ನಾನು ಪಾಪನಾಶನು ನೀನು
ಕೋಪ ಮದ ಮತ್ಸರದಿ ಸುಳಿವೆ ನಾನು
ತಾಪವನು ತರಿದು ನಿರ್ಭಯವ ಮಾಡುವೆ ನೀನು
ರೂಪ ಛಾಯಕೆ ಮರುಳುಗೊಂಬೆ ನಾನು |೧|
ಶರಣರಕ್ಷಕ ನೀನು ಪರಮಪಾತಕಿ ನಾನು
ದುರಿತ ಪರ್ವತವ ಪರಿಹರಿಪೆ ನೀನು
ಮರುಳುಗೊಂಬೆನು ನಾನು ಅರಿತು ರಕ್ಷಿಪೆ ನೀನು
ಗರುವಾಹಂಕಾರಿ ನಾನು ಅಗಮ್ಯ ನೀನು |೨|
ಮಂದಭಾಗ್ಯನು ನಾನು ಇಂದಿರಾಪತಿ ನೀನು
ಹಿಂದು ಮುಂದಿನ ಸುದ್ದಿ ಅರಿಯದವ ನಾನು
ತಂದೆ ಶ್ರೀಪುರಂದರವಿಠಲರಾಯನೆ
ಎಂದೆಂದು ಭಕ್ತರನು ಸಲಹುವೆಯೊ ನೀನು |೩|
maMdamatiyu nAnu madanajanakanu nInu
kuMdugaLaneNisade dayamADi salaho ||pa||
pApakartanu nAnu pApanASanu nInu
kOpa mada matsaradi suLive nAnu
tApavanu taridu nirBayava mADuve nInu
rUpa CAyake maruLugoMbe nAnu |1|
SaraNarakShaka nInu paramapAtaki nAnu
durita parvatava pariharipe nInu
maruLugoMbenu nAnu aritu rakShipe nInu
garuvAhaMkAri nAnu agamya nInu |2|
maMdaBAgyanu nAnu iMdirApati nInu
hiMdu muMdina suddi ariyadava nAnu
taMde SrIpuraMdaraviThalarAyane
eMdeMdu Baktaranu salahuveyo nInu |3|
Leave a Reply