Composer: Shri Venkatesha vittala
Expln – by Shri Kesava Rao Tadipatri
ಇದೇ ಹಾದಿ ನೀ ಹಿಡಿ ಹಿಡಿ
ನಿನ್ನೆದುರಿಗೆ ವೈಕುಂಠ ನಡಿ ನಡಿ | ಪ |
ಎದುರಿಗೆ ಕಾಂಬುವುದೆ ಮಾರುತಿ ಗುಡಿ
ಬಲಕ್ಕ ಮಾರಿ ಮಾಡಿ ಕುದುರೇ ಹೊಡಿ | ಅ.ಪ |
ಹಗರಿ ಹಳ್ಳದ ಮ್ಯಾಲೆ ಕಳ್ಳರೈದಾರು ಮಂದಿ
ಸುಳ್ಳು ಹೇಳಿ ತಪ್ಪಿಸ್ಸ್ಯಾರೊ ಹಾದಿ
ಬಲ್ಲವರ ಸಂಗಡ ಸಂಗವ ಮಾಡುತ್ತ
ಹಳ್ಳ ದಾಟಿದರೆ ನೀ ಪಾರಾದಿ | ೧ |
ಆನೆ ಆಡುತಾವೆ ಏಳೆಂಟು
ನಿನಗಡ್ಡ ಬರುತ್ತಾವೆ ಮುಗ್ಗಟ್ಟು
ಏನು ಹೇಳಲಿ ನಾ ತಿಳಿದಷ್ಟು
ನಿನ್ನ ಮನದಾಗ ಇರಲಿ ಈ ಗುಟ್ಟು | ೨ |
ಎಂಟು ದಳದ ಕಮಲದ ಒಳಗ
ಹದಿನೆಂಟು ಆದುತ್ತಾವ ತಿಳಿ ಬ್ಯಾಗ
ಗಂಟಿ ಹೊಡಿ ನಿನ್ನ ಪುರದಾಗ
ವೆಂಕಟೇಶ ವಿಠ್ಠಲ ಕಾಂಬುವ ನಿನಗ | ೩ |
idE hAdi nI hiDi hiDi
ninnedurige vaikuMTha naDi naDi | pa |
edurige kAMbuvude mAruti guDi
balakka mAri mADi kudurE hoDi | a.pa |
hagari haLLada myAle kaLLaraidAru maMdi
suLLu hELi tappissyAro hAdi
ballavara saMgaDa saMgava mADutta
haLLa dATidare nI pArAdi | 1 |
Ane ADutAve ELeMTu
ninagaDDa baruttAve muggaTTu
Enu hELali nA tiLidaShTu
ninna manadAga irali ee guTTu | 2 |
eMTu daLada kamalada oLaga
hadineMTu AduttAva tiLi byAga
gaMTi hoDi ninna puradAga
veMkaTESa viThThala kAMbuva ninaga | 3 |
Leave a Reply