Composer: Shri Purandara dasaru
ಗಂಗಾ ತೀರದ ಮನೆ ನಮ್ಮದು | ಕಾಶಿ
ಬಿಂದು ಮಾಧವನಲ್ಲಿ | ಇರುವುದು ನಮ್ಮನೆ | ಪಂಚ |ಅ.ಪ|
ಆವಾವ ಕಾಲದ ಆನಂದರಮನೆ
ತಾವರೆ ತಳಿತದ ನದಿಯ ಮನೆ |
ಆವಾಗ ಕಮಲಜ ಅವತರಿಸಿದ ಮನೆ
ಆ ವೇದಂಗಳಿಗೆಲ್ಲ ತವರು ಮನೆ | ಪಂಚ |೧|
ಚಿತ್ರ ವಳಿದಲ್ಲಿಯ ಮನೆ ಚಿನ್ಮಯ ರೂಪದ ಮನೆ
ನಿತ್ಯ ಲೋಕ ಗಳ ರಕ್ಷಿಸುವ ಮನೆ
ಭಕ್ತ ಜನರನೆಲ್ಲ ಉದ್ದರಿಸಿದ ಮನೆ
ಮುಕ್ತಿ ಸಾಯುಜ್ಯಕ್ಕೆ ಕಡೆ ಇಲ್ಲ ಮನೆ | ಪಂಚ |೨|
ಹಂಗಿಲ್ಲದ ಮನೆ ಹದಿಯ ಬಿಡದೆ ಹಾಲು
ಗಂಗಿಯವದು ರಕ್ಷಿಸುವ ಮನೆ ಮೂ-
ರಂಗನೆರುಳ್ಳ ಮುಕ್ತಿ ಸಾಧನಕಿನ್ನು ಇಂಥಾ
ಕಂಗಳ ಪುಣ್ಯಕಿನ್ನು ಕಡೆಯಿಲ್ಲ ಮನೆ | ಪಂಚ |೩|
ಧ್ವಜ ವಜ್ರಾತಂಕಿತ ರೇಖಾ ಶಂಖ ಚಕ್ರದ ಮನೆ
ನಿಜ ಸುವರ್ಣ ರೇಖ್ಹ ತೋರುವ ಮನೆ |
ಗಜರಾಜ ಗೊಲಿದಂಥ ಗರುಡ ವಾಹನನಾದ ಇಂಥ |
ಮೂಜಗ ತ್ರೈಅಲೋಕ್ಯ ಮಾಡಿದ ಮನೆ | ಪಂಚ |೪|
ಪರಮ ಪವಿತ್ರ ಚರಿತ್ರ ತೀರ್ಥರ ಮನೆ
ಪರಬ್ರಹ್ಮ ರಥಕ್ಕೆ ಸಾಧನದ ಮನೆ |
ಪರಮಾತ್ಮನಾಗಿ ಇಷ್ಟರ್ಥವನೀವ ಶ್ರೀ ವರನಾದ
ಪುರಂದರ ವಿಠ್ಠಲನ ಮನೆ | ಪಂಚ |೫|
gaMgA tIrada mane nammadu | kASi
biMdu mAdhavanalli | iruvudu nammane | paMca |a.pa|
AvAva kAlada AnaMdaramane
tAvare taLitada nadiya mane |
AvAga kamalaja avatarisida mane
A vEdaMgaLigella tavaru mane | paMca |1|
citra vaLidalliya mane cinmaya rUpada mane
nitya lOka gaLa rakShisuva mane
Bakta janaranella uddarisida mane
mukti sAyujyakke kaDe illa mane | paMca |2|
haMgillada mane hadiya biDade hAlu
gaMgiyavadu rakShisuva mane mU-
raMganeruLLa mukti sAdhanakinnu iMthA
kaMgaLa puNyakinnu kaDeyilla mane | paMca |3|
dhvaja vajrAtaMkita rEKA SaMKa cakrada mane
nija suvarNa rEKha tOruva mane |
gajarAja golidaMtha garuDa vAhananAda iMtha |
mUjaga traialOkya mADida mane | paMca |4|
parama pavitra caritra tIrthara mane
parabrahma rathakke sAdhanada mane |
paramAtmanAgi iShTarthavanIva SrI varanAda
puraMdara viThThalana mane | paMca |5|
Leave a Reply