Composer: Shri Purandara dasaru
ಬೈಯಿರೋ ಬೈಯಿರೋ
ಮನಮುಟ್ಟಿ ಬೈಯಿರೋ ||ಪ||
ಚೆನ್ನಾಗಿ ಬೈದೆನ್ನ ಧನ್ಯನ ಮಾಡಿರೊ ||ಅ.ಪ||
ಅವರು ಇವರು ಬೈದರೆಂಬೊ
ಹೀನಬುದ್ಧಿ ನನಗಿಲ್ಲ
ನಾ ಮಾಡಿದಷ್ಟು ಪಾಪವನ್ನು
ಅಳೆದುಹಾಕಿ ಹಂಚಿಕೊಳ್ಳಿರೋ ||೧||
ಇರುವೆ ನೊಣ ಕೊಂದ ಪಾಪ
ಪರನಿಂದ್ಯವ ಮಾಡಿದ ಪಾಪ
ಹೊಲೆಯ ಪಾಪ ಕೆಲವು ಉಂಟು
ಅಳೆದು ಹಾಕಿ ಹಂಚಿಕೊಳ್ಳಿರೋ ||೨||
ಅತ್ತೆ ಮಾವನ ಬೈದ ಪಾಪ
ಮತ್ತೆ ಹಿರಿಯರ ನುಡಿದ ಪಾಪ
ಕರ್ತೃ ಶ್ರೀ ಪುರಂದರವಿಠಲನ್ನ
ಚಿತ್ತದಲ್ಲಿ ನೆನೆಯದ ಪಾಪ ||೩||
baiyirO baiyirO
manamuTTi baiyirO ||pa||
cennAgi baidenna dhanyana mADiro ||a.pa||
avaru ivaru baidareMbo
hInabuddhi nanagilla
nA mADidaShTu pApavannu
aLeduhAki haMcikoLLirO ||1||
iruve noNa koMda pApa
paraniMdyava mADida pApa
holeya pApa kelavu uMTu
aLedu hAki haMcikoLLirO ||2||
atte mAvana baida pApa
matte hiriyara nuDida pApa
kartRu SrI puraMdaraviThalanna
cittadalli neneyada pApa ||3||
Leave a Reply