Khagavaradhwaja vittala

Composer : Shri Gurugovinda dasaru

By Smt.Shubhalakshmi Rao

ಖಗವರಧ್ವಜ ವಿಠಲ ಪೊರೆಯ ಬೇಕಿವನ [ಪ]
ಭಾಗವತ ಸುಶ್ಲೋಕ್ಯ ಬಗೆ ಬಗೆಯಲಿಂದಿವನ
ಮಿಗಿಲಾಗಿ ಪೊರೆಯಲ್ಕೆ | ಪ್ರಾರ್ಥಿಸುವೆ ಹರಿಯೇ [ಅ.ಪ]

ವಿತ್ತಪತಿಯೊಲಿಮೆಗಳು | ಕತ್ತರಿಸಿ ಪೋಗಿ ಕೃತ
ಕೃತ್ಯ ತಾನೆಂಬ ಉ | ತ್ಕೃಷ್ಟ ಮತಿಯೊದಗೇ
ಕೃತಿವಾಸನ ತಾತ | ಇತ್ತುದಕೆ ಸಂತೃಪ್ತಿ
ಪೊತ್ತು ತವ ದಾಸ್ಯವನು | ಅರ್ಥಿಸುವ ಹರಿಯೇ (೧)

ಪೋರನಾಮಯ ಕಳೆದು | ತಾರತಮ್ಯ ಜ್ಞಾನ
ಮೂರೆರಡು ಭೇದಗಳ | ಸಾರವನೆ ಅರುಹೀ
ಕಾರುಣಿಕ ನೀನೆ ಉ | ದ್ದಾರವನೆ ಮಾಡೊ ಹರಿ
ಬೇಕೊಂದ ಪ್ರಾರ್ಥಿಪೆನೊ | ಕಾರುಣ್ಯ ಮೂರ್ತೇ (೨)

ಅನೇಕ ಜನ್ಮದಲಿ | ಹೀನಯೋನಿಲಿ ನೊಂದು
ಜ್ಞಾನ ಸಾಧನ ವಿರದೆ | ದೀನ ನಾದ ವಗೇ
ಮಾನ ನಿಧಿ ಶಾಸ್ತ್ರ ಸಂ | ಧಾನ ವೀಯುತ ತ್ವರ್ಯ
ಧ್ಯಾನ ಸಾಧನ ವೀಯೊ | ಪ್ರಾಣಾಂತರಾತ್ಮಾ (೩)

ಲೌಕಿಕವನೆಲ್ಲ ವೈ | ದೀಕ ವೆಂದೆನಿಸೊ ಹರಿ
ಕಾಕು ಸಂಗವ ಕೊಡದೆ | ನೀ ಕೊಡೊ ಸತ್ಸಂಗ
ಏಕಮೇವನೆ ಸ್ವಾಮಿ | ಮಾಕಳತ್ರನೆ ನಿನ್ನಾನೇಕ
ಬಗೆಯಲಿ ತುತಿಪ | ವಾಕ್ಸಿದ್ಧಿ ಈಯೋ (೪)

ಪದ್ಮನಾಭನೇ ಹೃ | ತ್ಪದ್ಮದಲಿ ತವ
ರೂಪ ಸಿದ್ಧಿಸುತ ಸಂಚಿತವ | ಪ್ರಧ್ವಂಸ
ಗೈದೂ ಅದ್ವೈತ ತ್ರಯದರಿವು | ಬುದ್ಧಿಗೆ ನಿಲುಕಿಸೆನೆ
ಹೃದ್ಯ ಗುರು ಗೋವಿಂದ ವಿಠ್ಠಲ ಬಿನ್ನವಿಪೇ (೫)


Kagavaradhvaja viThala poreya bEkivana [pa]
BAgavata suSlOkya bage bageyaliMdivana
migilAgi poreyalke | prArthisuve hariyE [a.pa]

vittapatiyolimegaLu | kattarisi pOgi kRuta
kRutya tAneMba u | tkRuShTa matiyodagE
kRutivAsana tAta | ittudake saMtRupti
pottu tava dAsyavanu | arthisuva hariyE (1)

pOranAmaya kaLedu | tAratamya j~jAna
mUreraDu BEdagaLa | sAravane aruhI
kAruNika nIne u | ddAravane mADo hari
bEkoMda prArthipeno | kAruNya mUrtE (2)

anEka janmadali | hInayOnili noMdu
j~jAna sAdhana virade | dIna nAda vagE
mAna nidhi SAstra saM | dhAna vIyuta tvarya
dhyAna sAdhana vIyo | prANAMtarAtmA (3)

laukikavanella vai | dIka veMdeniso hari
kAku saMgava koDade | nI koDo satsaMga
EkamEvane svAmi | mAkaLatrane ninnAnEka
bageyali tutipa | vAksiddhi IyO (4)

padmanABanE hRu | tpadmadali tava
rUpa siddhisuta saMcitava | pradhvaMsa
gaidU advaita trayadarivu | buddhige nilukisene
hRudya guru gOviMda viThThala binnavipE (5)

Leave a Reply

Your email address will not be published. Required fields are marked *

You might also like

error: Content is protected !!