Composer : Shri Purandara dasaru
ಇಂಥಾ ಹೆಣ್ಣನು ನಾನೆಲ್ಲಿ ಕಾಣೆನೊ |
ಹೊಂತಕಾರಿ ಕಾಣಿರೊ [ಪ]
ಸಂತತ ಸುರರಿಗೆ ಪೀಯೂಷ ಉಣಿಸಿದ
ಪಂಕ್ತಿಯೊಳಗೆ ಪರ ವಂಚನೆ ಮಾಡಿದ [ಅ.ಪ]
ಮಂದರಗಿರಿ ತಂದು ಸಿಂಧುವಿನೊಳಗಿಟ್ಟು
ಚೆಂದದಿ ಕಡೆದು ಅಮೃತವ ತೆಗೆದು ||
ಇಂದುಮುಖಿ ನೀ ಬಡಿಸೆಂದು ಕೊಟ್ಟರೆ |
ದಂಧನಗಣ ಮಾಡಿ ದೈತ್ಯರ ವಂಚಿಸಿದ [೧]
ವಿಶ್ವಾಸದಿಂದಲಿ ಅಸುರಗೆ ವರವಿತ್ತು |
ತ್ರಿಶುಲಧರ ಓಡಿ ಬಳಲುತಿರೆ ||
ನಸುನಗುತಲಿ ಬಂದು ಭಸ್ಮಾಸುರನಿಗೆ |
ಭೋಗದಾಸೆಯ ತೋರಿ ಭಸ್ಮವ ಮಾಡಿದ [೨]
ವಸುಧೆಯೊಳಗೆ ಹೆಣ್ಣು ಒಸಗೆಯಾಗದ ಮುನ್ನ |
ಬಸಿರಲಿ ಬ್ರಹ್ಮನ ಪಡೆದವಳಿವಳು ||
ಕುಸುಮನಾಭ ಶ್ರೀ ಪುರಂದರವಿಠಲನ |
ಪೆಸರು ಪೊತ್ತಿಹಳು ಈ ಪೊಸ ಕನ್ನಿಕೆ [೩]
iMthA heNNanu nAnelli kANeno |
hoMtakAri kANiro [pa]
saMtata surarige pIyUSha uNisida
paMktiyoLage para vaMchane mADida [a.pa]
maMdaragiri taMdu siMdhuvinoLagiTTu
ceMdadi kaDedu amRutava tegedu ||
iMdumuKi nI baDiseMdu koTTare |
daMdhanagaNa mADi daityara vaMcisida [1]
vishvAsadiMdali asurage varavittu |
triSuladhara ODi baLalutire ||
nasunagutali baMdu BasmAsuranige |
bhOgadAseya tOri Basmava mADida [2]
vasudheyoLage heNNu osageyAgada munna |
basirali brahmana paDedavaLivaLu ||
kusumanABa shrI puraMdaraviThalana |
pesaru pottihaLu I posa kannike [3]
Leave a Reply