Composer : Shri Tande varadagopalavittala
ಸ್ಮರಿಸಿ ಸುಖಿಸೆಲೊ ಮಾನವಾ |ಪ|
ಸ್ವಾನುಭಾವದಿಂದ ಸುಖವ ಬಡಿಪ
ಗೋಪಾಲದಾಸ ರಾಜರಡಿಗಳನುದಿನಾ | ಅ.ಪ|
ಅಪಾರ ಜನುಮದ ದಾಸ್ಯ ಹರಿಸಿ
ಸುಖಸಾರ ಸುರಿಪರನುದಿನಾ [೧]
ಸತ್ಯವಾದ ವಚನ ಸತ್ವ
ಜೀವರಿಷ್ಟಗರೆವ ಚಿತ್ತದೊಳಗನುದಿನಾ [೨]
ಸರ್ವ ವಿಧದಿ ತೋಷ ಬಡಿಪ
ತಂದೆವರದಗೋಪಾಲವಿಠಲನೇ
ಸಾಕ್ಷಿಯಾಗಿಪ್ಪನನುದಿನಾ [೩]
smarisi suKiselo mAnavA |pa|
svAnuBAvadiMda suKava baDipa
gOpAladAsa rAjaraDigaLanudinA | a.pa|
apAra janumada dAsya harisi
suKasAra suriparanudinA [1]
satyavAda vacana satva
jIvariShTagareva cittadoLaganudinA [2]
sarva vidhadi tOSha baDipa
taMdevaradagOpAlaviThalanE
sAkShiyAgippananudinA [3]
Leave a Reply