Composer : Shri Bannanje Govindacharya
ಓ ಪಾಜಕದ ಗಿಣಿಯೆ ಮೂಜಗದ ಕಣ್ಮಣಿಯೆ
ಸೋಜಿಗದ ಗನಿಯೆ ಓ ಮಧ್ವ ಮುನಿಯೆ ||
ಸವಿದಿರುವೆ ಗುರುವೆ ನೀ ದಿವ್ಯ ತತ್ವದ ಹಣ್ಣು
ನಮಗೂ ತಿನಿಸಯ್ಯ ಆ ರಸದ ಗಿಣ್ಣು |
ಏನು ಪುಣ್ಯ ಮಾಡಿತ್ತೋ ಈ ನೆಲದ ಮಣ್ಣು
ಪಾವನವಾಯಿತು ನಿನ್ನ ಕಂಡ ಕಣ್ಣು ||೧||
ಆನಂದತೀರ್ಥಗುರು ನೀನು ಆನಂದಿ
ನಿದ್ದೆಯಿಂದೆಚ್ಚರಿಸೆ ಮದ್ದು ತಂದಿ |
ಹರಿಯೆ ಪರದೈವತವು ಎಂದೆನುತ ಬಂದಿ
ನಿನ್ನನರಿತವರಿಲ್ಲ ಬಹಳ ಮಂದಿ ||೨||
ದೇವಲೋಕದ ಬೆಳಕ ಭುವಿಗಿಳಿಸಿದವನೇ
ಮುಗಿಲ ಭಾಗ್ಯದ ಬಾಗಿಲನ್ನು ತೆರೆದವನೇ |
ನೀನೇರಿದೆತ್ತರವ ಕಂಡವರು ಯಾರು?
ನಮಗೂ ತೋರಯ್ಯ ಆ ಬೆಳಕಿನೂರು ||೩||
ಕಡಲಿನಲಿ ಹಡಗನ್ನು ಮುಳುಗಿಸಿದ ಗಾಳಿ
ಕಡಲಿಂದ ಕೃಷ್ಣನನು ತಂದ ಗಾಳಿ ||೪||
ಕೈಮುಗಿದು ಬೇಡುವೆನು ಕ್ಷಮೆಯನ್ನು ಕೇಳಿ
ಬೀಜಾಕ್ಷರವ ಬಿತ್ತು ಎದೆಯನ್ನು ಸೀಳಿ |
ಎಂದು ಬಂದೀತಯ್ಯ ನನ್ನ ಸೇವೆಯ ಪಾಳಿ
ತಲೆಯ ಮೇಲಿರಿಸಯ್ಯ ನಿನ್ನ ಪದಧೂಳಿ ||೫||
O pAjakada giNiye mUjagada kaNmaNiye
sOjigada ganiye O madhva muniye ||
savidiruve guruve nI divya tatvada haNNu
namagU tinisayya A rasada giNNu |
Enu puNya mADittO I nelada maNNu
pAvanavAyitu ninna kaMDa kaNNu ||1||
AnaMdatIrthaguru nInu AnaMdi
niddeyiMdeccarise maddu taMdi |
hariye paradaivatavu eMdenuta baMdi
ninnanaritavarilla bahaLa maMdi ||2||
dEvalOkada beLaka BuvigiLisidavanE
mugila BAgyada bAgilannu teredavanE |
nInEridettarava kaMDavaru yAru?
namagU tOrayya A beLakinUru ||3||
kaDalinali haDagannu muLugisida gALi
kaDaliMda kRuShNananu taMda gALi ||4||
kaimugidu bEDuvenu kShameyannu kELi
bIjAkSharava bittu edeyannu sILi |
eMdu baMdItayya nanna sEveya pALi
taleya mElirisayya ninna padadhULi ||5||
Leave a Reply