Composer : Shri Purandara dasaru
Shri Narahari Tirtharu : 1243 – 1333
sasItA mUlarAmArcA kOSE gajapatE: sthitA |
yEnAnItA namastasmai SrImanRuhari BikShavE ||
ससीतामूलरामार्चा कोशे गजपतेः स्थिता।
येनानीता नमस्तस्मै श्रीमन्नृहरिभिक्षवे॥
Aradhane: Pushya Bahula Saptami
Vrundavana – Hampi
ನರಹರಿ ತೀರ್ಥರ ಮಹಿಮೆ ಕೇಳಿರೊ |
ನರದೇಹವನ್ನು ಸಾರ್ಥಕ ಮಾಡಿರೊ || ಪ ||
ಕಾರ್ಯಸ್ಥ ಬ್ರಹ್ಮ ಮಾಡಿಸಿ ಪೂಜಿಸಿ ಕೊಡಲು |
ಆರ್ಯ ಜಾಬಾಲ ಮುನಿಗೆ ಪ್ರಸನ್ನನಾಗಿ |
ಭಾರ್ಯಸಹಿತ ಶರ್ವ ಪೂಜಿಸಿ, ಸೌಭರಿಗೆ ಕೊಡಲು |
ಸೂರ್ಯವಂಶಕೆ ರಾಮ ಸೀತೆ ಬರಲು ||೧||
ಜಾಂಬುವಂತನು ಪೂಜಿಸಿ, ವೇದಗರ್ಭಗೆ ಕೊಡಲು |
ಕುಂಭೇಶ್ವರನ ಕೋಶದಲ್ಲಿಯಿರಲು |
ಅಂಬುಜೋದ್ಭವನಲ್ಲಿ ನಿತ್ಯ ಪೂಜಿಸುತಿರಲು |
ಜಂಭಾರಿಪುರವ ಯೈದಿದನು ಆ ಜನಿಪ ||೨||
ಗುರು ಅನಂದ ತೀರ್ಥರಿಂದ ಚತುರ್ಥಾಶ್ರಮ ಸ್ವೀಕರಿಸಿ |
ವರಗಗನ ನದಿ ತೀರದಿ ಗುಹ್ಯದೊಳಿರಲು |
ಕರಿಬಂದು ಕೂಗುತಿರೆ ಕೇಳಿ ಹೊರಗೆ ಬರಲು |
ಭರದಿ ಪಟ್ಟಾಭಿಷಿಕ್ತನಾಗಿ ರಾಷ್ಟ್ರದೊಳೊಪ್ಪಿದ ||೩||
ಆ ದೇಶ ಪದವಿ, ಹನ್ನೆರಡು ವರುಷ ಮೂರುಮಾಸ |
ಮೋದದಿಂದನುಭವಿಸಿ ರಾಜಪದವ |
ಸಾದರದಿ ಪಿಂಗಳಾಶ್ವಿಜ ಶುದ್ಧ ಸಪ್ತಮಿ |
ಆ ಧರಿಯ ರಾಜಪುತ್ರಗೆಯಿತ್ತ ಮಹಿಮ ||೪||
ರಾಜಪುತ್ರ ಪತ್ನಿ ನಿಮಗೆ ಬೇಕಾದ ವಸ್ತು ವೈವದೆನಲು |
ಆ ಜನಪನ ಕೋಶದಲ್ಲಿ ಮಂದಾಸನದೊಳು ||
ರಾಜಿಸುತಿಪ್ಪ ಸೀತಾರಾಮ ಮೂರ್ತಿ ಗಳನು ತೆಗೆದು ಕೊಂಡು |
ವಾಜಿಯನೇರಿ ಕೂರ್ಮಕ್ಕೆ ಬಂದು, ಪದ್ಮನಾಭರಿಗಿತ್ತರು ||೫||
ಪದುಮನಾಭ ಯತಿ ತಾನು ದಶಮತಿಗೆ ಅರ್ಪಿಸಲು |
ಮುದದಿ ಮೂರು ಮಾಸದಿ ಹದಿಮೂರು ದಿನವು ||
ಮದನನಯ್ಯನ ಪೂಜಿಸಿ ಕೊಡಲು ತಾವು ಪೂಜಿಸಿದ |
ಆರುವರುಷ ಇನ್ನೂರು ತೊಂಬತ್ತು ದಿನ ||೬||
ಗುರು ಪದ್ಮನಾಭರಾಜ್ಞದಿಂದಲಿ ಒಂಬತ್ತು |
ವರುಷ ಮ್ಯಾಲೈವತ್ತು ಮೂರು ದಿನವು |
ಧರಣಿಜಯ ಮೂಲ ರಾಮನಂಘ್ರಿಯ ಭಜಿಸಿ |
ಪುರಂದರ ವಿಠ್ಠಲನ ಪ್ರೀತಿ ಪಡೆದ ||೭||
narahari tIrthara mahime kELiro |
naradEhavannu sArthaka mADiro || pa ||
kAryastha brahma mADisi pUjisi koDalu |
Arya jAbAla munige prasannanAgi |
BAryasahita Sarva pUjisi, sauBarige koDalu |
sUryavaMSake rAma sIte baralu ||1||
jAMbuvaMtanu pUjisi, vEdagarBage koDalu |
kuMBESvarana kOSadalliyiralu |
aMbujOdBavanalli nitya pUjisutiralu |
jaMBAripurava yaididanu A janipa ||2||
guru anaMda tIrthariMda caturthASrama svIkarisi |
varagagana nadi tIradi guhyadoLiralu |
karibaMdu kUgutire kELi horage baralu |
Baradi paTTABiShiktanAgi rAShTradoLoppida ||3||
A dESa padavi, hanneraDu varuSha mUrumAsa |
mOdadiMdanuBavisi rAjapadava |
sAdaradi piMgaLASvija Suddha saptami |
A dhariya rAjaputrageyitta mahima ||4||
rAjaputra patni nimage bEkAda vastu vaivadenalu |
A janapana kOSadalli maMdAsanadoLu ||
rAjisutippa sItArAma mUrti gaLanu tegedu koMDu |
vAjiyanEri kUrmakke baMdu, padmanABarigittaru ||5||
padumanABa yati tAnu daSamatige arpisalu |
mudadi mUru mAsadi hadimooru dinavu ||
madananayyana pUjisi koDalu tAvu pUjisida |
AruvaruSha innUru toMbattu dina ||6||
guru padmanABarAj~jadiMdali oMbattu |
varuSha myAlaivattu mUru dinavu |
dharaNijaya mUla rAmanaMGriya Bajisi |
puraMdara viThThalana prIti paDeda ||7||
Leave a Reply